ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಯುಭಾರ ಕುಸಿತ: ವಾರಾಂತ್ಯದ ವೇಳೆಗೆ ಬೆಂಗಳೂರಲ್ಲಿ ಮಳೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಚಂಡಮಾರುತವಾಗಿ ಮಾರ್ಪಾಡುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಪೂರ್ವ ಭಾಗದ ಜಿಲ್ಲೆಗಳಲ್ಲಿ ಜಡಿ ಮಳೆ ಆಗುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಹಿಂಗಾರು ಚುರುಕು: ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆರಾಜ್ಯದಲ್ಲಿ ಹಿಂಗಾರು ಚುರುಕು: ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ

ತುಮಕೂರು, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ರಾಮನಗರ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ಸಾದ್ಯತೆ ಇದೆ ಎನ್ನಲಾಗಿದೆ.

 Depression: rain expected in Bengaluru on weekends

ಮಳೆಯ ಪ್ರಮಾಣ ಅಥವಾ ತೀವ್ರತೆಯು ಆರಂಭದಲ್ಲಿ ಕಡಿಮೆ ಇರಲಿದೆ ಎನ್ನಲಾಗಿದೆ. ಆದರೆ ವಾಯುಭಾರ ಕುಸಿತ ಹೆಚ್ಚಾದ ಸಂದರ್ಭ ಮಳೆಯ ಪ್ರಮಾಣ ಮತ್ತು ಅವಧಿ ಹೆಚ್ಚಾಗುತ್ತದೆ ಆದರೆ ಈಗಲೇ ಅದರ ಬಗ್ಗೆ ಸ್ಪಷ್ಟನೆ ನೀಡಲು ಸಾಧ್ಯವಿಲ್ಲವೆಂದು ಹವಾಮಾನ ತಜ್ಞರು ಹೇಳಿದ್ದಾರೆ.

ಹಿಂಗಾರು ಮಳೆ ಹಿನ್ನಡೆಯಿಂದ ಬಳಲಿದ್ದ ರೈತರಿಗೆ ಸಿಹಿಸುದ್ದಿ ಹಿಂಗಾರು ಮಳೆ ಹಿನ್ನಡೆಯಿಂದ ಬಳಲಿದ್ದ ರೈತರಿಗೆ ಸಿಹಿಸುದ್ದಿ

ಈ ವರ್ಷದ ಅವಧಿಯಲ್ಲಿ ಸಾಕಷ್ಟು ಪ್ರಕೃತಿ ವೈಪರಿತ್ಯಗಳಾಗಿದ್ದು, ಚಂಡಮಾರುತಗಳು ಜನರಲ್ಲಿ ಆತಂಕ ಉಂಟು ಮಾಡುತ್ತಿವೆ. ಇದೇ ವರ್ಷದಲ್ಲಿ ಕೇರಳಕ್ಕೆ ಪ್ರವಾಹ ಅಪ್ಪಳಿಸಿತ್ತು. ಕೊಡಗಿನಲ್ಲೂ ಪ್ರವಾಹ ಬಂದಿತ್ತು. ಕೆಲವು ತಿಂಗಳ ಮುಂಚೆಯಷ್ಟೆ ಗಜ ಚಂಡಮಾರುತ ಬಂದು ಅಪ್ಪಳಿಸಿತ್ತು.

English summary
Depression in bay of Bengal rain expected in Bengaluru on weekends. Rain expected in Karnataka's Kolar, Chikkaballapura, Tumakur, Chitradurga,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X