5,500 ಹೊಸ ಬಸ್‌ಗಳ ಖರೀದಿಗೆ ಸಾರಿಗೆ ಇಲಾಖೆ ನಿರ್ಧಾರ

Posted By:
Subscribe to Oneindia Kannada

ಬೆಂಗಳೂರು, ಜನವರಿ 11: ಜೂನ್‌ ತಿಂಗಳ ವೇಳೆಗೆ 5,500 ಹೊಸ ಬಸ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ 1650 ಬಸ್ ಗಳು ಹಾಗು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಹೊಸ ಬಸ್ ಗಳು ಸೇರ್ಪಡೆಯಾಗಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಮೊದಲ ಹಂತದಲ್ಲಿ 3,500 ಬಸ್ ಗಳ ಖರೀದಿ ಕಾರ್ಯ ನಡೆಯಲಿದೆ. ನಂತರ ಜೂನ್ ವೇಳೆಗೆ 2ಸಾವಿರ ಬಸ್ ಗಳನ್ನು ಖರೀದಿಸಲಾಗುವುದು ಎಂದು ಹೇಳಿದರು.[150 ಎಸಿ ಬಸ್ ಖರೀದಿ ಮಾಡಲಿದೆ ಬಿಎಂಟಿಸಿ]

Department of Transportation to purchase 5,500 new buses

ಈ ಹಿಂದೆ ರಾಜ್ಯದಲ್ಲಿ ಬಸ್ ವ್ಯವಸ್ಥೆ ಕಾಣದ ಹಳ್ಳಿಗಳು ಹೆಚ್ಚು ಇದ್ದು ಅಂತಹ ಹಳ್ಳಿಗಳಿಗೆ ಬಸ್ ಓಡಾಡುವಂತೆ ಮಾಡಲು ಬಸ್ ಖರೀದಿಸಲಾಗುವುದು ಎಂದು ಸಾರಿಗೆ ಸಚಿವರು ಹೇಳಿದ್ದರು. ಅಲ್ಲದೆ ಬಸ್ ಚಾಲನೆಯಾಗದ ಹಳ್ಳಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದಾಗಿ ತಿಳಿಸಿದ್ದರು.[ಎಲೆಕ್ಟ್ರಿಕಲ್ ಬಸ್ ಖರೀದಿಗೆ ನೆರವು ಕೋರಿದ ಸಚಿವ ರಾ.ಲಿಂ.ರೆಡ್ಡಿ]

ಪ್ರಸ್ತುತ 5,500 ಬಸ್ ಗಳನ್ನು ಖರೀದಿ ಮಾಡಲು ಸಾರಿಗೆ ಇಲಾಖೆ ನಿರ್ಧರಿಸಿರುವುದು ಉತ್ತಮ ಕಾರ್ಯವಾದರೂ ಅವು ಎಲ್ಲಿ ಸಂಚರಿಸಲಿವೆ ಎಂಬುದನ್ನು ವಿವರಿಸಿಲ್ಲ. ಹಾಗೆಯೇ ಬಿಎಂಟಿಸಿಗಾಗಿ ಹೊಸ ಬಸ್ ಗಳ ಸಿಂಹಪಾಲು ನೀಡಿದ್ದು ಉಳಿಸದ 3,450 ಬಸ್ ಗಳು ಎಲ್ಲಿ ಸಂಚರಿಸಲಿವೆ ಎಂಬುದು ತಿಳಿಯಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
By next June, the Department of Transportation to purchase 5,500 new buses says Transport Minister Ramalingareddi in bengaluru.
Please Wait while comments are loading...