ದೇಶಾದ್ಯಂತ ನೆಗೆದುಬಿತ್ತು ಬಂಗಾರ, ಬೆಳ್ಳಿ ವ್ಯಾಪಾರ!

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ನವೆಂಬರ್ 11: ನೋಟು ರದ್ದು ಬಗ್ಗೆ ಘೋಷಣೆಯಾದ ಮೇಲೆ ಎಲ್ಲ ವಲಯದ ಮೇಲೂ ಅದರ ಪರಿಣಾಮ ಬೀರಿದೆ. ಇದರಿಂದ ದೇಶದ ಆಭರಣ ಉದ್ಯಮಕ್ಕೂ ಹಣದ ಹರಿವಿನಲ್ಲಿ ಪೂರ್ತಿ ತಡೆ ಬಿದ್ದಂತಾಗಿದೆ. 'ಆ ಘೋಷಣೆ ಅದ ಮೇಲೆ ನಗದು ವ್ಯವಹಾರ ಶೂನ್ಯ ಆಗಿಬಿಟ್ಟಿದೆ. ಯಾರಿಗೆ ತುರ್ತು ಅಗತ್ಯ ಇದೆಯೋ ಅಂಥವರು ಚೆಕ್, ಡೆಬಿಟ್-ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದಾರೆ.

'ಇನ್ನು ಮುಂದೆ ಕಾನೂನು ಮಾನ್ಯತೆ ಇರದ ನೋಟುಗಳನ್ನು ತೆಗೆದುಕೊಳ್ಳಬಾರದು ಅಂತ ನಾವು ನಿರ್ಧಾರ ಮಾಡಿದ್ದೀವಿ. ಆದರೆ ಇದು ದೇಶದ ಒಳಿತಿಗೆ ತೆಗೆದುಕೊಂಡ ನಿರ್ಧಾರವಾದ್ದರಿಂದ ನಾವು ಬೆಂಬಲಿಸಬೇಕು' ಎಂದು ನವರತನ್ ಜುವೆಲ್ಲರ್ಸ್ ನ ರಾಹುಲ್ ಜೈನ್ ಹೇಳಿದ್ದಾರೆ.[FAQ: ಆಭರಣ ಖರೀದಿ, ಹಣ ಜಮೆಗೆ ಆದಾಯ ತೆರಿಗೆ]

Gold

ಯಾವಾಗ 500, 1000 ರುಪಾಯಿ ನೋಟು ರದ್ದು ಆಯಿತೋ, ಭಯಗೊಂಡ ಜನ ಚಿನ್ನ ಖರೀದಿಗೆ ಮುಗಿಬಿದ್ದಿದ್ದಾರೆ. ಕೆಲವು ಆಭರಣ ಅಂಗಡಿಗಳ ಮಾಲೀಕರು ಇದೇ ಸಂದರ್ಭ ಬಳಸಿಕೊಂಡು ಹೆಚ್ಚಿನ ಬೆಲೆಗೆ ಚಿನ್ನ ಹಾಗೂ ಆಭರಣಗಳನ್ನು ಮಾರುತ್ತಿರುವ ಬಗ್ಗೆ ಕೂಡ ವರದಿಯಾಗುತ್ತಿದೆ.

ಹರಳು ಹಾಗೂ ಆಭರಣ ವ್ಯಾಪಾರಿಗಳ ಒಕ್ಕೂಟವು 500, 1000 ರದ್ದು ನಿರ್ಧಾರವನ್ನು ಬೆಂಬಲಿಸಿದೆ. 'ಈ ನಿರ್ಧಾರ ಯಾವತ್ತಿದ್ದರೂ ಮಾಡಲೇಬೇಕಿತ್ತು. ನಮ್ಮ ಉದ್ಯಮ ಒಟ್ಟಾಗಿ ಈ ನಡೆಯನ್ನು ಬೆಂಬಲಿಸುತ್ತದೆ. ಹೌದು, ಮಾರಾಟ ನಿಂತೇ ಹೋಗಿದೆ. ಹಳೆ ಪರಿಸ್ಥಿತಿಗೆ ಬರೋದಿಕ್ಕೆ ಒಂದಿಷ್ಟು ಸಮಯ ಬೇಕಾಗುತ್ತದೆ.[ನೋಟಿನ ನಿಷೇಧದ ಬಗ್ಗೆ ನಮ್ಮ ಓದುಗರು ಏನಂತಾರೆ?]

ಕಾನೂನು ಮಾನ್ಯತೆ ಇಲ್ಲದ ನೊಟು ತೆಗೆದುಕೊಂಡು ಒಡವೆ ಕೊಡೋದು ಒಂದೇ, ಪುಕ್ಕಟೆ ಕೊಡೋದು ಒಂದೇ. ಇದರ ಜೊತೆಗೆ ಹೆಚ್ಚಿನ ಹಣ ಇರೋರು, ಅದರಲ್ಲೂ ಕಪ್ಪು ಹಣ ಇರೋರು ಇಂಥ ಸನ್ನಿವೇಶದಲ್ಲಿ ಚಿನ್ನದ ಮೇಲೆ ಹಾಕೋಣ ಅಂದುಕೊಳ್ತಾರೆ. ಆದ್ದರಿಂದ 500, 1000 ರುಪಾಯಿ ಹಳೇ ನೋಟು ತೆಗೆದುಕೊಳ್ಳದ ತೀರ್ಮಾನಕ್ಕೆ ಬಂದಿದ್ದೇವೆ' ಎಂದು ರಾಹುಲ್ ಜೈನ್ ಹೇಳಿದ್ದಾರೆ.

ಈಗಾಗಲೇ ಬ್ಯಾಂಕ್ ಗಳಿಗೆ ಹೊಸ ನೋಟುಗಳು ಬಂದಿವೆ. ಸದ್ಯದಲ್ಲೇ ಮಾರುಕಟ್ಟೆಯಲ್ಲೂ ಸಿಗುತ್ತವೆ. ಆ ನಂತರ ಎಂದಿನಂತೆ ವ್ಯಾಪಾರ ಆರಂಭವಾಗುತ್ತದೆ ಎಂಬ ಭರವಸೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The government's decision to demonetise old high value currency notes has had a ripple effect on almost all sectors. The move has definitely brought cash transaction to a grinding halt for jewellers across the country.
Please Wait while comments are loading...