ಬ್ಯಾಂಕ್ ಉದ್ಯೋಗಿಗಳ ಪರಿಶ್ರಮಕ್ಕೆ ವಿದ್ಯಾರ್ಥಿಗಳಿಂದ ಕೃತಜ್ಞತೆ ಸಲ್ಲಿಕೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ನವೆಂಬರ್, 19 : ಐನೂರು- ಸಾವಿರ ಮುಖ ಬೆಲೆ ನೋಟುಗಳು ರದ್ದಾಗಿನಿಂದ ಹಿಡಿದು ಬಿಡುವಿಲ್ಲದೆ ಕೆಲಸ ನಿರ್ವಹಿಸುತ್ತಿರುವ ಬ್ಯಾಂಕ್ ಉದ್ಯೋಗಿಗಳ ಪರಿಶ್ರಮಕ್ಕೆ 'ಲಿಸಾ ಸ್ಕೂಲ್ ಆಫ್ ಡಿಸೈನ್' ಮತ್ತು 'ಕ್ರಯೋ ವ್ಯಾಲಿ ಸ್ಕೂಲ್ ಆಫ್ ಫಿಲ್ಮ್ ಅಂಡ್ ಟೆಲಿವಿಷನ್‌' ಬೆಂಗಳೂರು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದರು

ಲಿಸಾ ಸ್ಕೂಲ್ ಆಫ್ ಡಿಸೈನ್ ಅಂಡ್ ಕ್ರಯೋ ವ್ಯಾಲಿ ಸ್ಕೂಲ್ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಒಂದು ದಿನವನ್ನು ಬ್ಯಾಂಕ್ ಉದ್ಯೋಗಿಗಳಿಗಾಗಿ ಮೀಸಲಿರಿಸಿತು.

ವಿದ್ಯಾರ್ಥಿಗಳು ನಗರದ ಹಲವು ಬ್ಯಾಂಕ್ ಗಳಿಗೆ ಭೇಟಿ ನೀಡಿ ಬ್ಯಾಂಕ್ ಉದ್ಯೋಗಿಗಳ ಪರಿಶ್ರಮಕ್ಕೆ ಅವರಿಗೆ ಉಡುಗೊರೆಗಳು, ಚಾಕೊಲೇಟ್ ಗಳು ಮತ್ತು ಗುಲಾಬಿ ಹೂಗಳನ್ನು ನೀಡಿ ಗೌರವಿಸಿ ಮತಷ್ಟು ಉತ್ಸಹ ತುಂಬಿದರು.

ಈ ವೇಳೆ ಲಿಸಾ ಅಂಡ್ ಕ್ರಯೋ ವ್ಯಾಲಿ ಸ್ಕೂಲ್ ನಿರ್ದೇಶಕಿ ಅವಿ ಕೇಸ್ವಾನಿ ಮಾತನಾಡಿ, ಬ್ಯಾಂಕ್ ಉದ್ಯೋಗಿಗಳು ಅವರ ವಾರಾಂತ್ಯಮತ್ತು ರಜಾದಿನಗಳಲ್ಲಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.

ಸಾವಿರಾರು ಬ್ಯಾಂಕ್ ಉದ್ಯೋಗಿಗಳು ನಮ್ಮ ಅರ್ಥವ್ಯವಸ್ಥೆ ಮುಂದುವರಿಯಲು ಮತ್ತು ಕಾಯುತ್ತಿರುವವರಿಗೆ ಕರೆನ್ಸಿ ನೋಟುಗಳ ವಿತರಣೆಯಲ್ಲಿ ತ್ಯಾಗ ಮಾಡುತ್ತಿದ್ದಾರೆ.

ನಾನೇ ಆ ಸ್ಥಾನದಲ್ಲಿದ್ದರೂ ಅದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂದು ನನಗೆ ಗೊತ್ತಿಲ್ಲ. ಈ ಎಲ್ಲ ಉದ್ಯೋಗಿಗಳಿಗೂ ನಿಜಕ್ಕೂ ಹ್ಯಾಟ್ಸಾಫ್' ಎಂದರು.

ನೋಟಿಗಾಗಿ ನಿಂತವರಿಗೆ ತಂಪು ಪಾನೀಯ

ನೋಟಿಗಾಗಿ ನಿಂತವರಿಗೆ ತಂಪು ಪಾನೀಯ

ಬ್ಯಾಂಕ್ ಉದ್ಯೋಗಿಗಳಿಗೆ ಶುಭಾಶಯ ಕೋರಿದ ವಿದ್ಯಾರ್ಥಿಗಳು ತಮ್ಮ ಹಣವನ್ನು ಪಡೆಯಲು ಉದ್ದದ ಕ್ಯೂನಲ್ಲಿ ನಿಂತಿರುವ ಜನರ ಬಳಿಗೆ ತೆರಳಿ ಅವರಿಗೆ ಬಿಸ್ಕೆಟ್, ತಂಪು ಪಾನೀಯ ಮತ್ತು ನೀರಿನ ಬಾಟಲ್ ಗಳನ್ನು ನೀಡಿದರು.

ಅರ್ಜಿ ತುಂಬಿಕೊಟ್ಟು ನೆರವಾದರು

ಅರ್ಜಿ ತುಂಬಿಕೊಟ್ಟು ನೆರವಾದರು

ಕೆಲ ವಿದ್ಯಾರ್ಥಿಗಳು ಹಣ ಪಡೆಯಲು ನೀಡಬೇಕಾದ ಆರ್ ಬಿಐ ಅರ್ಜಿಗಳ ಪ್ರತಿಯನ್ನು ಗ್ರಾಹಕರಿಗೆ ಭರ್ತಿ ಮಾಡಿಕೊಟ್ಟರು. ಬಹಳಷ್ಟು ಮಂದಿ ಗ್ರಾಹಕರಿಗೆ ಅದನ್ನು ಭರ್ತಿ ಮಾಡುವುದು ಕಷ್ಟವಾದ್ದರಿಂದ ಈ ನೆರವು ಅವರಿಗೆ ಉಪಯುಕ್ತವಾಯಿತು.

ವಯಸ್ಸಾದವರ ಬದಲಿಗೆ ಕ್ಯೂನಲ್ಲಿ ನಿಂತರು

ವಯಸ್ಸಾದವರ ಬದಲಿಗೆ ಕ್ಯೂನಲ್ಲಿ ನಿಂತರು

ಗರ್ಭಿಣಿ ಸ್ತ್ರೀಯರು ಅಥವಾ ಹಿರಿಯ ನಾಗರೀಕರ ಪರವಾಗಿ ವಿದ್ಯಾರ್ಥಿಗಳು ಕ್ಯೂನಲ್ಲಿ ನಿಂತು ಅವರು ಕೌಂಟರ್ ವರೆಗೆ ತಲುಪಲು ನೆರವಾದರು.

ಮೋದಿ ನಿರ್ಧಾರವನ್ನು ಬೆಂಬಲಿಸಿ

ಮೋದಿ ನಿರ್ಧಾರವನ್ನು ಬೆಂಬಲಿಸಿ

ನರೇಂದ್ರ ಮೋದಿ ಅವರು ನೋಟುಗಳನ್ನು ರದ್ದು ಮಾಡಿ ಒಳ್ಳೆ ಕೆಲಸ ಮಾಡಿದ್ದಾರೆ. ಆರಂಭದಲ್ಲಿ ಕೊಂಚ ಕಷ್ಟವಾದರೂ ಮುಂದೆ ಒಳ್ಳೆಯದಾಗಲಿದೆ. ಹಾಗಾಗಿ ಇದಕ್ಕೆ ಎಲ್ಲರೂ ಬೆಂಬಲಿಸಿ ಎಂದು ವಿದ್ಯಾರ್ಥಿಗಳು ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
LISAA School of Design CREO Valley School Of Film & Television Bengaluru students thanked to all banks employees. for going the extra mile to ensure that the implementation of the demonetisation scheme was on track.
Please Wait while comments are loading...