ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳಲ್ಲಿ : ಬ್ಯಾಂಕುಗಳಲ್ಲಿ ಬೆರಳುಗಳಿಗೆ ಅಂಟಿದ ಮಸಿ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ನವೆಂಬರ್ 17: ಸರ್ಕಾರದ ಆದೇಶಾನುಸಾರ ಎರಡು ದಿನಗಳಿಂದ ಹಣವನ್ನು ಬದಲಾಯಿಸಿಕೊಳ್ಳಲು ಮತ್ತು ಬ್ಯಾಂಕಿನ ವ್ಯವಹಾರಗಳನ್ನು ನಡೆಸಲು ಶಾಯಿಯ ಮೊರೆ ಹೋಗಬೇಕಾಗಿದೆ.

ಚುನಾವಣೆ ಸಂದರ್ಭದಲ್ಲಿ ನಾವು ಶಾಯಿ ಹಾಕುವುದನ್ನು ನೋಡಿದ್ದೇವೆ ಆದರೆ ಬ್ಯಾಂಕಿಗೂ ಶಾಹಿ ಹಾಕಿಸಿಕೊಂಡು ನೀನಿನ್ನು ಬ್ಯಾಂಕಿಗೇ ಹೋಗಿಲ್ವಾ ಹೋಗಿ ಬೇಗ ದುಡ್ಡನ್ನು ಕಟ್ಟು ಎಂದು ಸ್ನೇಹಿತರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರೆ.

ಕ್ಯೂನಲ್ಲಿ ನಿಂತು ಸಾಕಾಗಿ ವ್ಯವಹಾರ ನಡೆಸಿದವರಿಗೆ ಇಂಕನ್ನು ಹಾಕಿ ಕಳುಹಿಸುವ ಬ್ಯಾಂಕಿನವರು ಮತ್ತೆ ಬಂದರೆ ಎಲ್ಲಿ ಬೆರಳು ಎಂದು ಕೇಳುವ ಪರಿಸ್ಥಿತಿ ಬಂದಿದೆ.

ಇತ್ತೀಚೆಗೆ ಹಣವನ್ನು ಪಡೆಯುವುದರಲ್ಲಿ ನೀಡಿದ್ದ ಸಡಿಲಿಕೆಯನ್ನು ಮತ್ತೆ ಆರ್ ಬಿಐ ಬಿಗಿಗೊಳಿಸಿದೆ. ಪ್ರತಿದಿನವೂ ಲೈನಿನಲ್ಲಿ ನಿಂತುಕೊಳ್ಳುವ ಜನರಿಗೆ ಎಲ್ಲ ಬೆರಳು ಶಾಯಿಯಾಗಿ ಬಿಟ್ಟರೆ ಮುಂದಿನ ವ್ಯವಹಾರ ಹೇಗೆ?

ಬೆಂಗಳೂರಿನಲ್ಲಿ ಇಂಕ್ ಕೌಂಟರ್

ಬೆಂಗಳೂರಿನಲ್ಲಿ ಇಂಕ್ ಕೌಂಟರ್

ಬೆಂಗಳೂರಿನ ಮೈಸೂರು ಬ್ಯಾಂಕಿನ ಮುಂದೆ ನಗದು ಬದಲಾಯಿಸಿಕೊಂಡವರಿಗೆ ಕೌಂಟರೊಂದನ್ನು ನಿರ್ಮಿಸಿ ಶಾಹಿಯನ್ನು ಹಾಕಿಸಿಕೊಂಡು ಅಬ್ಬಾ ಇವತ್ತಿನ ಕೆಲಸ ಮುಗಿಯಿತು ಎಂದು ಕೊಂಡ ಜನತೆ.

ಬೆರಳಿಗೆ ಇಂಕು ನೋಟು ಪಿಂಕು

ಬೆರಳಿಗೆ ಇಂಕು ನೋಟು ಪಿಂಕು

ಬ್ಯಾಂಕಿನ ವ್ಯವಹಾರವನ್ನು ಮುಗಿಸಿ ಬೇಗನೇ ಇಂಕು ಹಾಕಪ್ಪಾ ಇನ್ನು ಬೇರೆ ಬೇರೆ ಕೆಲಸವಿದೆ ಆಪೀಸಿಗೆ ಬೇರೆ ಹೋಗಬೇಕು ಲೇಟಾಗಿದೆ ಎಂದ ಬೆಂಗಳೂರಿಗ. ತನ್ನ ಬೆಟ್ಟಿನೊಂದಿಗೆ ನೋಟನ್ನು ತೋರಿಸಿಬಿಟ್ಟ.

ಹಣದೊಂದಿಗೆ ಇಂಕು ಪ್ರೀ ನಾ?

ಹಣದೊಂದಿಗೆ ಇಂಕು ಪ್ರೀ ನಾ?

ಇಂಕನ್ನು ಹಾಕಿಸಿಕೊಂಡು ಬೆರಳನ್ನು ತೋರಿಸಿಕೊಂಡು ಎನಿದು ಹಣ ಬದಲಾಯಿಸಿಕೊಂಡರೆ ಇದೇನು ನಮಗೆ ಕಪ್ಪು ಮಾಡುತ್ತಿದ್ದಾರೆ. ಎಂದು ಬೆಂಗಳೂರಿನ ಬ್ಯಾಂಕಿನಲ್ಲಿ ಹೇಳಿದ ವಿದೇಶಿಗರು

ಪಾಟ್ನಾದಲ್ಲಿಯೂ ಇಂಕು

ಪಾಟ್ನಾದಲ್ಲಿಯೂ ಇಂಕು

ತಮ್ಮ ಬೆರಳಿಗೆ ಶಾಯಿಯನ್ನು ಹಾಕಿಸಿಕೊಂಡು ಎಸ್ ಬಿಐನಲ್ಲಿ ತಮ್ಮ ಖಾತೆಯಿಂದ ಹಣವನ್ನು ಪಡೆದು ತೊರಿಸುತ್ತಿರುವ ಪಾಟ್ನಾದ ಇಬ್ಬರು ಯುವಕರು

ವಿದೇಶಿಗರ ಬೆರಳಿಗೆ ಕಪ್ಪುಮಸಿ

ವಿದೇಶಿಗರ ಬೆರಳಿಗೆ ಕಪ್ಪುಮಸಿ

ಜೋದಪುರಕ್ಕೆ ಆಗಮಿಸಿರುವ ಪ್ರವಾಸಿಗರ ಬೆರಳುಗಳಿಗೆ ಕಪ್ಪು ಮಸಿಯನ್ನು ಹಚ್ಚಿಸಿಕೊಂಡು ತಮ್ಮ ಭಾರತೀಯ ಹಳೇ ನೋಟುಗಳನ್ನು ಕೊಟ್ಟು ಹೊಸ ನೋಟನ್ನು ಪಡೆದೇ ಬಿಟ್ಟೆವು ಎಂದಿದ್ದಾರೆ.

ಬ್ಯಾಂಕ್ ಖಾತೆದಾರರಿಗೆ ಮಸಿ ಬಿಸಿ

ಬ್ಯಾಂಕ್ ಖಾತೆದಾರರಿಗೆ ಮಸಿ ಬಿಸಿ

ಖಾತದಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಚೆನ್ನೈನಲ್ಲಿ ಬುಧವಾರ ತಮ್ಮ ವ್ಯವಹಾರಗಳನ್ನು ನಡೆಸಿ ಹಣವನ್ನು ಬದಲಾಯಿಸಿಕೊಂಡು ಬೆರಳಿಗೆ ಮಸಿಯನ್ನು ಬಳಿಸಿಕೊಂಡ ಕೈ ಕಾಣಿಸಿದ್ದು ಹೀಗೆ

ಮುಂಬೈ ಖಾತೆದಾರಿಗೆ ಅಂಟಿದ ಇಂಕು

ಮುಂಬೈ ಖಾತೆದಾರಿಗೆ ಅಂಟಿದ ಇಂಕು

ಮುಂಬೈನಲ್ಲಿ ಬೆರಳಿಗೆ ಶಾಯಿಯನ್ನು ಹಾಕಿಸಿಕೊಂಡು ತಮ್ಮ ಖಾತೆಯಲ್ಲಿ ಹಣವನ್ನು ಬದಲಿಸಿಕೊಂಡು ಗೆಲುವಿನ ನಗೆ ಬೀರಿದ ಖಾತದಾರ

English summary
Government in its bid to stop people from re-visiting banks to exchange old notes with new currency notes day after day introduced the idea of marking customers with indelible ink.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X