ನೋಟು ನಿಷೇಧದಿಂದ ಶೇ.70ರಷ್ಟು ಇಳಿಮುಖವಾದ ಅಪರಾಧಗಳು

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ನವೆಂಬರ್, 21: ಕಳೆದ ಒಂದು ವಾರದಿಂದ ನಗರದಲ್ಲಿ ಅಪರಾಧ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿವೆ ಎಂದು ನಗರ ಪೊಲೀಸರು ತಿಳಿಸಿದ್ದು, ಇದು ನೋಟು ನಿಷೇಧದ ಪರಿಣಾಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯವಾಗಿ ರಾಬರಿ, ದರೋಡೆ, ಕಳ್ಳತನದಂತಹ ನಗದು ರೂಪದ ಪ್ರಕರಣಗಳಲ್ಲಿ ಶೇ.70ರಷ್ಟು ಇಳಿಮುಖವಾಗಿವೆ ಎಂದು ಅವರು ತಿಳಿಸಿದ್ದಾರೆ.

Demonetisation effect: 70% drop in crime rates in Bengaluru

ನೋಟು ನಿಷೇಧಕ್ಕೂ ಮುಂಚೆ ಸರಾಸರಿ 8ರಿಂದ 10 ಅಪರಾಧ ಪ್ರಕರಣಗಳೂ ದಾಕಲಾಗುತ್ತಿದ್ದವು. ಆದರೆ ಕಳೆದ ವಾರ ಕೇವಲ 4 ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.

ಅದರಲ್ಲಿ ಒಂದು ಮಾತ್ರ ಡಕಾಯಿತಿ ಪ್ರಕರಣವಾಗಿತ್ತು. ಕಳೆದವಾರದಿಂದ ಕೇವಲ ಸರಾಸರಿ 3 ಪ್ರಕರಣಗಳು ಮಾತ್ರ ವರದಿಯಾಗಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶರತ್ ಚಂದ್ರ ಅವರು ತಿಳಿಸಿದ್ದಾರೆ.

ರೂ. 500 ಹಾಗು ರೂ.1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಪರಿಣಾಮದಿಂದಲೇ ಅಪರಾಧ ಪ್ರಕರಣಗಳಲ್ಲಿ ಚಟುವಟಿಕೆಗಳು ಇಳಿಮುಖವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೋಟು ನಿಷೇಧದಿಂದಾಗಿ ಸಾರ್ವಜನಿಕರು ದಿನನಿತ್ಯದ ಖರ್ಚುಗಳಿಗಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru has seen a steady decline in number of cash related crimes over the last week. The city police is viewing it as an effect of demonetisation.
Please Wait while comments are loading...