ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮುಲು 'ತೆಲಂಗಾಣ' ಹೇಳಿಕೆಗೆ ಶೋಭಾ ಟಾಂಗ್

By Mahesh
|
Google Oneindia Kannada News

Recommended Video

ದೇವೇಗೌಡರ ಪ್ಲಾನ್ ನಡೆಯೋದಕ್ಕೆ ಬಿಡಲ್ಲ ಎಂದ ಬಿ.ಎಸ್.ವೈ..! | Oneindia Kannada

ಬೆಂಗಳೂರು, ಜುಲೈ 30: ಪ್ರತ್ಯೇಕ ರಾಜ್ಯಕ್ಕಾಗಿ 'ತೆಲಂಗಾಣ' ಮಾದರಿಯ ಹೋರಾಟ ನಡೆಸುವುದಾಗಿ ಬಿಜೆಪಿ ಮೊಳಕಾಲ್ಮೂರು ಶಾಸಕ ಬಿ ಶ್ರೀರಾಮುಲು ನೀಡಿರುವ ಹೇಳಿಕೆಗೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಟಾಂಗ್ ಕೊಟ್ಟಿದ್ದಾರೆ.

'ಇದು ಶ್ರೀರಾಮುಲು ಅವರ ವೈಯಕ್ತಿಕ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ಈ ರೀತಿ ಹೇಳಿಕೆಗೆ ಪಕ್ಷದಲ್ಲಿ ಯಾವುದೇ ಆಸ್ಪದವಿಲ್ಲ, ಗೌರವವೂ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಆಗಸ್ಟ್ 2ರ ಉತ್ತರ ಕರ್ನಾಟಕ ಬಂದ್ : ಯಾರು, ಏನು ಹೇಳಿದರು? ಆಗಸ್ಟ್ 2ರ ಉತ್ತರ ಕರ್ನಾಟಕ ಬಂದ್ : ಯಾರು, ಏನು ಹೇಳಿದರು?

ಅಖಂಡ ಕರ್ನಾಟಕವನ್ನು ಬಲಗೊಳಿಸಬೇಕು ಎಂಬುದೇ ಪಕ್ಷದ ನಿಲುವು ಪಕ್ಷದ ರಾಜ್ಯಾಧ್ಯಕ್ಷಬಿ.ಎಸ್. ಯಡಿಯೂರಪ್ಪ ನಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಇಡೀ ಕರ್ನಾಟಕವನ್ನು ಒಗ್ಗಟ್ಟಾಗಿಡಲು ನಾವು ಕೆಲಸ ಮಾಡುತ್ತೇವೆ ಎಂದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಜೆಡಿಎಸ್ ನ 37 ಶಾಸಕರಿಗಷ್ಟೇ ಮುಖ್ಯಮಂತ್ರಿ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ಈ ಮೂಲಕ ಮತದಾರರ್ಎಿಗ್ವೆ ಅವಮಾನ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

Demand for Seperate state is not BJP agenda : Shobha Karandlaje

ಆಲೂರು ವೆಂಕಟರಾಯರು, ಕುವೆಂಪು, ವಿ.ಕೃ. ಗೋಕಾಕ್, ದ.ರಾ. ಬೇಂದ್ರೆ ಯಂಥವರ ಹೋರಾಟ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಭಾಗಗಳ ಜನರ ಶ್ರಮದಿಂದಾಗಿ ಕರ್ನಾಟಕದ ಏಕೀಕರಣವಾಗಿದೆ.

ಇಂಥ ಕರ್ನಾಟಕವನ್ನು ಬೇರ್ಪಡಿಸುವ ಮಾತನಾಡಬಾರದು ಎಂದವರು ಹೇಳಿದರು. ಹಿಂದಿನ ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಮೂರು ಭಾಗವಾಗಿಸುವ ಪ್ರಯತ್ನ ನಡೆಸಿತ್ತು. ನಂತರ ವೀರಶೈವ - ಲಿಂಗಾಯತ ಒಡೆಯುವ ಪ್ರಯತ್ನ ನಡೆಸಿತ್ತು. ಈಗ ರಾಜ್ಯವನ್ನೇ ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇದು ಕಾಂಗ್ರೆಸ್ - ಜೆಡಿಎಸ್ ಚಾಳಿಯಂತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯೇಕ ರಾಜ್ಯದ ಬೇಡಿಕೆ ತಳ್ಳಿ ಹಾಕಿದ ಒನ್ಇಂಡಿಯಾ ಕನ್ನಡ ಓದುಗರುಪ್ರತ್ಯೇಕ ರಾಜ್ಯದ ಬೇಡಿಕೆ ತಳ್ಳಿ ಹಾಕಿದ ಒನ್ಇಂಡಿಯಾ ಕನ್ನಡ ಓದುಗರು

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಂಜುಂಡಪ್ಪ ವರದಿ ಜಾರಿಗಾಗಿ 1,800 ಕೋಟಿ ರೂ. ಬಿಡುಗಡೆ ಮಾಡಿದ್ದರು. ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಿದ್ದರು. ಕಲಬುರ್ಗಿಯಲ್ಲಿ ಸಂಪುಟ ಸಭೆ ನಡೆಸುವ ಮೂಲಕ ಕರ್ನಾಟಕದ ಒಗ್ಗಟ್ಟಿಗಾಗಿ ಕಾರ್ಯ ನಿರ್ವಹಿಸಿದ್ದರು.

ಏನಿದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು? ಆ.2ರ ಬಂದ್ ಯಾಕಾಗಿ? ಏನಿದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು? ಆ.2ರ ಬಂದ್ ಯಾಕಾಗಿ?

ಕಾಂಗ್ರೆಸ್ನ ತಪ್ಪು ನಿರ್ಧಾರದಿಂದಾಗಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳು ಬೇರೆಯಾದವು. ಈಗ ಅದರ ಕೆಟ್ಟ ಪರಿಣಾಮ ಸ್ಪಷ್ಟವಾಗುತ್ತಿದೆ. ತೆಲಂಗಾಣ ಹಾಗೂ ಆಂಧ್ರ ಬೇರೆಯಾದ ನಂತರ ಸಂಸತ್ತಿನಲ್ಲಿ ಅದರ ದನಿಯೂ ಕುಗ್ಗಿದೆ. ಕರ್ನಾಟಕದ ವಿಭಜನೆಯಾದರೆ ಇದೇ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದವರು ಕಳವಳ ವ್ಯಕ್ತಪಡಿಸಿದರು.

English summary
Demand for Separate state is not BJP agenda, MLA B Sriramulu statement is his personal opinion and party has nothing to do with it, we are against the separate North Karnataka state said MP, BJP general secretary Shobha Karandlaje
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X