ಬೆಂಗಳೂರಿನ ಶಾಲೆಯಲ್ಲಿ ಚೀನಾ ದೇಶದ ಹೊಸ ವರ್ಷಾಚರಣೆ!

Subscribe to Oneindia Kannada

ಬೆಂಗಳೂರು, ಆಗಸ್ಟ್ 10: ನಾಳೆ ಬೆಂಗಳೂರು ಉತ್ತರದಲ್ಲಿರುವ 'ಡೆಲ್ಲಿ ಪಬ್ಲಿಕ್ ಸ್ಕೂಲ್' ಚೀನಾದ ಹೊಸ ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಂಡು ವಿವಾದಕ್ಕೆ ಗುರಿಯಾಗಿದೆ.

ಒಂದನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಶಾಲೆ ಹೊರಡಿಸಿರುವ ಸುತ್ತೋಲೆ ವಾಟ್ಸಾಪ್ ಗ್ರೂಪ್ ಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ

Delhi public school in Bengaluru organised ‘New year celebration of China’!

ಹೊಸ ವರ್ಷಾಚರಣೆ ಸಂಭ್ರಮಕ್ಕೆ ವಿದ್ಯಾರ್ಥಿಗಳು ಚಿನ್ನ ಅಥವಾ ಬೆಳ್ಳಿ ಬಣ್ಣದ ಗ್ಲಿಟ್ಟರ್ ಟ್ಯೂಬ್, ಅಲಂಕಾರ ಮಾಡುವ ಸ್ಟಿಕ್ಕರ್ ಗಳು, A4 ಗಾತ್ರದ ಕೆಂಪು ಹಾಳೆ, ಪೆವಿಸ್ಟಿಕ್ ಗಮ್ ತೆಗೆದುಕೊಂಡು ಬರಬೇಕು ಎಂದು ಪೋಷಕರಿಗೆ ಸೂಚನೆ ನೀಡಿದೆ.

ಇನ್ನು ಈ ಸಂಭ್ರಮಾಚರಣೆ ಪ್ರಯುಕ್ತ ಚೀನಿ ಆಹಾರ ಉತ್ಸವ ನಡೆಯಲಿದ್ದು ವಿದ್ಯಾರ್ಥಿಗಳು ಮಧ್ಯಾಹ್ನದ ಬುತ್ತಿಗೆ ನ್ಯೂಡಲ್ಸ್, ಮೊಮೋಸ್, ಫ್ರೈಡ್ ರೈಸ್, ಮಂಚೂರಿ ರೀತಿಯ ಆಹಾರಗಳನ್ನು ತರುವಮತೆಯೂ ಹೇಳಿದೆ.

Delhi public school in Bengaluru organised ‘New year celebration of China’!

ಇದಲ್ಲದೆ ವಿದ್ಯಾರ್ಥಿಗಳು ಚೀನಾದ ಸಾಂಪ್ರದಾಯಿಕ ದಿರಿಸುಗಳನ್ನು ತೊಡುವಂತೆ, ಸಾಧ್ಯವಾಗದಿದ್ದಲ್ಲಿ ಕೆಂಪು ಬಣ್ಣದ ಬಟ್ಟೆ ತೊಡವಂತೆ ಹೇಳಿ ವಿವಾದಕ್ಕೆ ಗುರಿಯಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲಾ ಮೂಲಗಳು, "ಇದೊಂದು ಸಾಮಾನ್ಯ ಕಾರ್ಯಕ್ರಮ. ಪ್ರತಿ ವರ್ಷವೂ ನಡೆಯುತ್ತದೆ. ಇದರಲ್ಲೇನೂ ವಿಶೇಷವಿಲ್ಲ. ಏಷ್ಯಾದ ಬೇರೆ ಬೇರೆ ದೇಶಗಳ ಹೊಸ ವರ್ಷವನ್ನು ಆಚರಸುತ್ತೇವೆ," ಎಂದು ಹೇಳಿವೆ.

ಇದೀಗ ಶಾಲಾ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ರದ್ದು ಮಾಡಿದೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prestigus Delhi Public School in Bengaluru North has organised a program of 'New Year Celebration of China' on Agust 11th.
Please Wait while comments are loading...