ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪನ್ಯಾಸಕರ ಹಾಜರಿ: ಬಯೋಮೆಟ್ರಿಕ್‌ ಅಳವಡಿಕೆ ಇನ್ನೂ ಆಗಿಲ್ಲ

By Nayana
|
Google Oneindia Kannada News

ಬೆಂಗಳೂರು, ಜು.24: ರಾಜ್ಯದ ಎಲ್ಲಾ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಈ ಶೈಕ್ಷಣಿಕ ವರ್ಷದಿಂದ ಬಯೋಮೆಟ್ರಿಕ್‌ ಹಾಜರಾತಿ ಜಾರಿಗೊಳಿಸುವಂತೆ ಸರ್ಕಾರ ಆದೇಶಿಸಿದೆ.

ಆದರೆ ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಇದುವರೆಗೂ ಬಯೋಮೆಟ್ರಿಕ್‌ ಅಳವಡಿಸಿಲ್ಲ, ಕೆಲವು ಪಿಯು ಉಪನ್ಯಾಸಕರು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರಿಗೆ ಮೂಗುದಾರ ತೊಡಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿತ್ತು.

ಮೇ 2ರಿಂದ ಪದವಿಪೂರ್ವ ಕಾಲೇಜು ತರಗತಿಗಳು ಆರಂಭವಾಗಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅಂದಿನಿಂದಲೇ ಬಯೋಮೆಟ್ರಿಕ್‌ ವ್ಯವಸ್ಥೆಯೂ ಆರಂಭವಾಗಬೇಕಿತ್ತು. ಆದರೆ ಉಪಕರಣಗಳು ಬಂದರೂ ಜೋಡಿಸುವ ಕೆಲಸ ಮಾತ್ರ ಆರಂಭವಾಗಿಯೇ ಇಲ್ಲ.

ಬೆಂವಿವಿ ಸಿಬ್ಬಂದಿ ಚೆಕ್ಕರ್‌ ಹೊಡೆಯುವಂತಿಲ್ಲ: ಬಯೋಮೆಟ್ರಿಕ್‌ ಬಂತಲ್ ಬೆಂವಿವಿ ಸಿಬ್ಬಂದಿ ಚೆಕ್ಕರ್‌ ಹೊಡೆಯುವಂತಿಲ್ಲ: ಬಯೋಮೆಟ್ರಿಕ್‌ ಬಂತಲ್

ವರ್ಷದ ಹಿಂದೆ ಕೋಲಾರ ಪಿಜಿ ಕೇಂದ್ರದ ವಿದ್ಯಾರ್ಥಿನಿಗೆ ಕನ್ನಡ ಅಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದರು ಎಂಬ ಆರೋಪ ಕೇಳಿಬಂದಾಗ ಅಧ್ಯಾಪರು ಯಾವ ಸಮಯದಲ್ಲಿ ಎಲ್ಲಿದ್ದರು ಎಂಬ ಪ್ರಶ್ನೆ ಉದ್ಭವವಾಗಿತ್ತು. ಆಗಲೇ ಬಯೋಮೆಟ್ರಿಕ್‌ ಅಳವಡಿಸಲು ವಿವಿ ಮುಂದಾಗಿತ್ತು.

ಕೆಲವು ವಿಭಾಗಗಳಲ್ಲಿ ಮಾತ್ರ ಇದುವರೆಗೂ ಅಳವಡಿಸಲಾಗಿದೆ. ಪರಿಣಾಮಕಾರಿಯಾಗಿ ಅನುಷ್ಠಾನವಾಗದಿದ್ದರಿಂದ ವಿವಿ ಸುಮ್ಮನಾಗಿತ್ತು. ವಿಶ್ವವಿದ್ಯಾಲಯಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಕಳೆದ ಎರಡು ವರ್ಷಗಳ ಹಿಂದೆಯೇ ಸೂಚನೆ ನೀಡಿತ್ತು.

ಬಯೋಮೆಟ್ರಿಕ್‌ನಲ್ಲಿ ಮೋಸ ಮಾಡುವಂತಿಲ್ಲ

ಬಯೋಮೆಟ್ರಿಕ್‌ನಲ್ಲಿ ಮೋಸ ಮಾಡುವಂತಿಲ್ಲ

ಕೆಲವು ಸರ್ಕಾರಿ ವ್ಯವಸ್ಥೆಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ಅಳವಡಿಸಿದ್ದರ ಸಿಬ್ಬಂದಿ ಬೇರೆಯವರ ಬೆರಳಚ್ಚು ನೀಡಿ ಕೆಲಸ ತಪ್ಪಿಸಕೊಳ್ಳುವ ಆರೋಪ ಕೇಳಿಬರುತ್ತಿದ್ದಂತೆ ಪದವಿಪೂರ್ವ ಉಪನ್ಯಾಸಕರೂ ಆ ಕೆಲಸವನ್ನು ಅನುಸರಿಸದೆ ಇರಲು ಪದವಿಪೂರ್ವ ಇಲಾಖೆ ಹೊಸ ಮಾರ್ಗ ಕಂಡುಕೊಂಡಿದೆ.
ಬಯೋಮೆಟ್ರಿಕ್‌ಗೆ ಸ್ವತಃ ಉಪನ್ಯಾಸಕರ ಬೆರಳಚ್ಚು ಜೋಡಿಸುವುದನ್ನು ಕಡ್ಡಾಯಗೊಳಿಸಿದೆ ಆದರೆ ಈ ಯಂತ್ರವೇ ಕಾರ್ಯಾರಂಭವಾಗದೆ ಇವೆಲ್ಲ ವ್ಯವಸ್ಥೆಗಳು ನೆನಗುದಿಗೆ ಬಿದ್ದಿದೆ.

ಬಯೋಮೆಟ್ರಿಕ್‌ ಅಳವಡಿಸುವವರೇ ಬಂದಿಲ್ಲ

ಬಯೋಮೆಟ್ರಿಕ್‌ ಅಳವಡಿಸುವವರೇ ಬಂದಿಲ್ಲ

ಕೆಲವು ವಾರಗಳ ಹಿಂದಯೇ ತಮ್ ಕಾಲೇಜಿಗೆ ಬಯೋಮೆಟ್ರಿಕ್‌ಗೆ ಸಂಬಂಧಿಸಿದಂತೆ ಎಲ್ಲಾ ಉಪಕರಣಗಳನ್ನು ಕೆಲವು ಕಾಲೇಜುಗಳು ತಂದಿರಿಸಿವೆ ಆದರೆ ಅದನ್ನು ಸರಿಯಾದ ಕ್ರಮದಲ್ಲಿ ಜೋಡಿಸುವ ಸಿಬ್ಬಂದಿಗಳು ಇನ್ನೂ ಬಂದಿಲ್ಲ, ತರಗತಿ ಆರಂಭವಾಗಿ ಮೂರು ತೀಂಗಳುಗಳು ಕಳೆದಿವೆ ಆದರೂ ಕಾರ್ಯಾರಂಭವಾಗಿಲ್ಲ.

ಖಾಸಗಿ ಮಾಹಿತಿ ಅಪ್‌ಲೋಡ್‌

ಖಾಸಗಿ ಮಾಹಿತಿ ಅಪ್‌ಲೋಡ್‌

ಪಿಯು ಉಪನ್ಯಾಸಕರಿಗೆ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಮಾತ್ರವಲ್ಲದೆ ಅವರ ಎಲ್ಲಾ ಮಾಹಿತಿಗಳನ್ನು ಇಲಾಖೆಯ ಆನ್‌ಲೈನ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲು ಇಲಾಖೆಯು ಸುತ್ತೋಲೆ ಹೊರಡಿಸಿದೆ. ಕಾಲೇಜಿನಲ್ಲಿ ಈ ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಹೆಸರು, ಜನ್ಮದಿನಾಂಕ, ಸೇರಿದಂತೆ ಆಧಾರ್‌ ಕಾರ್ಡ್‌ ನಂಬರ್‌ ಅಪ್‌ಲೋಡ್‌ ಮಾಡಬೇಕು.

ಬಯೋಮೆಟ್ರಿಕ್‌ ವೇತನ ಹೆಚ್ಚಳಕ್ಕೂ ಮಾನದಂಡ

ಬಯೋಮೆಟ್ರಿಕ್‌ ವೇತನ ಹೆಚ್ಚಳಕ್ಕೂ ಮಾನದಂಡ

ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಪ್ರಾಧ್ಯಾಪಕರ ವೇತನ ಹೆಚ್ಚಳಕ್ಕೂ ಮಾನದಂಡವಾಗಲಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ವೇತನ ಹೆಚ್ಚಳಕ್ಕೆ ಬಯೋಮೆಟ್ರಿಕ್‌ ಹಾಜರಾತಿ ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

English summary
Pu colleges installed and made mandatory for lecturers and staff to attend duties with punctual as biometric system installed. There were huge complaints about lecturers on this regard. Government delays the supply of Biometric equipments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X