ಡಿಸೈನ್ ನಂಬರ್ ಪ್ಲೇಟ್ ಇಟ್ಟುಕೊಂಡ್ರೆ ದಂಡ ಗ್ಯಾರಂಟಿ!

Subscribe to Oneindia Kannada

ಬೆಂಗಳೂರು,ಆಗಸ್ಟ್, 30: ಎಲ್ಲಾ ವಾಹನ ಸವಾರರು, ಮಾಲೀಕರು ಈ ಸುದ್ದಿಯನ್ನು ಓದಲೇಬೇಕು. ಇದೇನು ಹೊಸ ಕಾನೂನಲ್ಲ, ಆದರೆ ಮತ್ತೊಮ್ಮೆ ನೆನಪು ಮಾಡುತ್ತಿದ್ದೇವೆ ಅಷ್ಟೆ.

ವಾಹನದ ನಂಬರ್ ಪ್ಲೇಟ್ ನ್ನು ಹೇಗೆ ಬೇಕೋ ಹಾಗೆ ನಿಮ್ಮ ಮನಸಿಗೆ ಕಂಡಂತೆ ಬರೆದರೆ ದಂಡ ಕಟ್ಟಬೇಕಾಗಿ ಬರುತ್ತದೆ. ಇಂಥದ್ದೇ ವಿಭಿನ್ನ ವಿಚಿತ್ರ ನಂಬರ್ ಪ್ಲೇಟ್ ಹೊಂದಿದ್ದ ಮೂರು ವಾಹನಗಳಿಗೆ ಬೆಂಗಳೂರು ಪೊಲೀಸರು ದಂಡ ಹಾಕಿದ್ದಾರೆ.[ಸುರಕ್ಷಿತ ಪ್ರಯಾಣ: ದಂಡಂ ದಶಗುಣಂ ಎಂದ ಕೇಂದ್ರ ಸರ್ಕಾರ]

Defective number plates: vehicle owners fined

ವಿಚಿತ್ರ ನಂಬರ್ ಪ್ಲೇಟ್ ಹೊಂದಿದ್ದ ಮೂರು ವಾಹನಗಳಿಗೆ ಯಲಹಂಕ ಪೊಲೀಸರು ದಂಡ ಹಾಕಿದ್ದಾರೆ. ಆಯತಾಕಾರದ ಹಲಗೆಯ ಮೇಲೆ ಸ್ಪಷ್ಟವಾಗಿ ಇಂಗ್ಲಿಷ್ ನಲ್ಲಿ ನಂಬರ್ ಬರೆದಿದ್ದರೆ ಯಾವ ತಾಪತ್ರಯ ನಿಮಗೆ ಎದುರಾಗಲ್ಲ.[ನವದಂಪತಿಗೆ ಇದಕ್ಕಿಂತ ಉತ್ತಮ ಉಡುಗೊರೆ ಕೊಡಲು ಸಾಧ್ಯವಿಲ್ಲ]

Defective number plates: vehicle owners fined

ಆಪಲ್ ಫೋನಿನ ಆಕಾರದ ಮೇಲೆ ನಂಬರ್ ಬರೆಸಿಕೊಂಡ ವಾಹನ, ತ್ರಿಕೋನಾಕೃತಿಯಲ್ಲಿ ನಂಬರ್ ಬರೆಸಿಕೊಂಡ ಡ್ಯೂಕ್, ವಿಚಿತ್ರವಾಗಿ ನಂಬರ್ ಪ್ಲೇಟ್ ಹೊಂದಿದ್ದ ಕಾರು ಸಹ ದಂಡ ಕಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru City Traffic Police personnel, Yelahanka Division had imposed fine to vehicle owners for using unauthorised number plates. Were found using number plates with the different designs like Apple Phone,Tringale etc.
Please Wait while comments are loading...