ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಪ್ರತಿಷ್ಠಗೆ ಧಕ್ಕೆ ತರಲು ಬಿಜೆಪಿ ಯತ್ನ: ದಿನೇಶ್ ವಾಗ್ದಾಳಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 12 : ಕರ್ನಾಟಕ ದೇಶದಲ್ಲೇ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ ಇದನ್ನು ತಪ್ಪಿಸಲು ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್ ಗೆ ಮೋದಿ ಶುಭಾಶಯಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್ ಗೆ ಮೋದಿ ಶುಭಾಶಯ

ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಗಾಡಿಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ, ಶಾಸಕರ ಮನೆ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಾರೆ,.

ಶಿರಸಿ ಧಗಧಗ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸಶಿರಸಿ ಧಗಧಗ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ

Defame the state image is BJP's AGENDA: Dinesh slams

ಅವರ ಅಂಜೆಂಡಾ ಬೇರೆ ಇದೆ. ಸುಳ್ಳು ಹೇಳಿ ಕೆಟ್ಟದಾಗಿ ಮಾತನಾಡಿ ಅಂತರ ಈಶ್ವರಪ್ಪ ಹೇಳಿದ್ದಾರೆ. ಕೋಮುಗಲಬೆ, ಪ್ರಚೋದನೆ, ಗಲಾಟೆ, ಸುಳ್ಳು ಹೇಳುವುದು ಇದೇ ಬಿಜೆಪಿ ನಾಯಕರ ಅಜೆಂಡಾ ಆಗಿದೆ.
ಇನ್ನೂ ತನಿಖೆ ನಡೆಯಲಿ ವಾಸ್ತವ ಗೊತ್ತಾಗಲಿ, ಆದರೆ ಈಗಲೇ ಆರೋಪ ಹೊರಿಸುವುದು ಸರಿ ಅಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಉದ್ಯಮಪತಿಗಳ ಪರವಾಗಿದ್ದಾರೆ. ಬಡವರ ಪರವಾದ ಆಲೋಚನೆಯೇ ಅವರಿಗಿಲ್ಲ. ಬ್ಯಾಂಕ್ ನಲ್ಲಿಟ್ಟ ಹಣಕ್ಕೆ ಭದ್ರತೆಯಿಲ್ಲದಂತಾಗಿದೆ. ಜನರಿಗೆ ಬ್ಯಾಂಕ್ ಗಳ ಮೇಲೂ ನಂಬಿಕೆ ಹೋಗುವಂತೆ ಮಾಡಿದ್ದಾರೆ. ಜನರು ಬ್ಯಾಂಕ್ ನಲ್ಲಿಟ್ಟಿದ್ದ ಹಣವನ್ನು ಬ್ಯಾಂಕ್ ನವರು ಬಳಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತರುತ್ತಿರುವ ನೂತನ ಬಿಲ್ ನಲ್ಲಿದೆ ಎಂದರು.

ಇದು ಕಾನೂನಾಗಿ ಬಂದರೆ ಸಾಕಷ್ಟು ತೊಂದರೆಯಾಗಲಿದೆ. ಹೀಗಾಗಿ ಬಿಲ್ ಹಿಂಪಡೆಯಬೇಕು ಎಂದು ಕೇಂದ್ರದ ಹೊಸ ಕಾನೂನಿಗೆ ದಿನೇಶ್ ಗುಂಡೂರಾವ್ ಆಕ್ಷೇಪ ವ್ಯಕ್ತಪಡಿಸಿದರು. ಬಿಲ್ ಹಿಂಪಡೆಯದಿದ್ದರೆ ಕಾಂಗ್ರೆಸ್ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಮಾತನಾಡಿ, ಸಚಿವ ಎಚ್. ಆಂಜನೇಯ ಭೇಟಿ ವಿಚಾರ, ನನ್ನ ಕ್ಷೇತ್ರದಲ್ಲಿ ಅವರ ಇಲಾಖೆಯ ಕೆಲ ಕೆಲಸಗಳು ಆಗಬೇಕಿತ್ತು. ಅದಕ್ಕಾಗಿ ಚರ್ಚಿಸಲು ಹೋಗಿದ್ದೆ. ಸದಾಶಿವ ಆಯೋಗದ ವರದಿ ಜಾರಿ ಕುರಿತು ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವು ಸಹಕಾರ ನೀಡಲಿದ್ದೇವೆ. ಹಿಂದು ಮುಖಂಡರ ಹತ್ಯೆ ಎನ್ನುವ ಹೆಸರಲ್ಲಿ ಬಿಜೆಪಿಯವರು ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಕೋಮುವಾದದ ಬಣ್ಣ ಬಳೆಯುತ್ತಿದ್ದಾರೆ ಎಂದು ಆರೋಪಿಸಿದರು.

English summary
KPCC working president Dinesh gundurao slammed BJP that the opposition party is trying to defame the Karnataka's image which is number one state in the country for the investment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X