ನಂಬಿ, ಬೆಂಗಳೂರಲ್ಲಿ ತಾಸಿಗೆ 17 ಕಿ.ಮೀ ಮಾತ್ರ ಕ್ರಮಿಸಬಹುದು!

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 10: ನಗರದಲ್ಲಿ ಸಂಚಾರ ದಟ್ಟಣೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂಬುದನ್ನು ಓಲಾ ಸಂಸ್ಥೆ ನಡೆಸಿದ ಅಧ್ಯಯನದಿಂದ ಕಂಡುಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ನಗರದಲ್ಲಿ ಕ್ಯಾಬ್ ಚಲಿಸುತ್ತಿರುವ ವೇಗದಲ್ಲಿ ಇಳಿಕೆ ಕಂಡುಬಂದಿದೆ.

ನಗರದಲ್ಲಿ 2016 ರಲ್ಲಿ ಕ್ಯಾಬ್ ಗಳು ಪ್ರತಿ ಗಂಟೆಗೆ ಕ್ರಮಿಸುತ್ತಿದ್ದ ಸರಾಸರಿ ದೂರ 20.4 ಕಿ.ಮೀ ಅದೇ ಕ್ಯಾಬ್ ಗಳು 2017 ರಲ್ಲಿ ಕ್ರಮಿಸಿದ ದೂರ ಗಂಟೆಗೆ ಸರಾಸರಿ 17.2 ಕಿ.ಮೀ, ಇನ್ನೂ 6 ನಗರಗಳಲ್ಲಿ ನಡೆಸಿದ ಅಧ್ಯಯನದಲ್ಲೂ ಗಂಟೆಗೆ ಕ್ರಮಿಸುವ ದೂರದಲ್ಲಿ ಇಳಿಕೆಯಾಗಿದೆ.

ಓಲಾ-ಊಬರ್ ಟ್ಯಾಕ್ಸಿಗಳಿಗೆ ಸರ್ಕಾರದಿಂದಲೇ ರೇಟ್ ಫಿಕ್ಸ್!

ಓಲಾ ಅಪ್ಲಿಕೇಷನ್ ನಲ್ಲಿ ದೊರೆತ ಮಾಹಿತಿಯನ್ನು ಇಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಬೆಂಗಳೂರು, ನವದೆಹಲಿ, ಮುಂಬೈ, ಕೊಲ್ಕತ್ತ , ಹೈದರಾಬಾದ್, ಚೆನ್ನೈ, ಪುಣೆಗಳಲ್ಲಿ ಅಧದ್ಯಯನ ನಡೆಸಲಾಗಿತ್ತು.

Decline in taxi speed, courtesy Bengaluru traffic!

ಬೆಂಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಕ್ಯಾಬ್ ನ ವೇಗ 3.2 ಕಿ.ಮೀನಷ್ಟು ಇಳಿದಿದೆ. ಸಾರಿಗೆ ಇಲಾಖೆ ಮಾಹಿತಿ ಪ್ರಕಾರ, 2015 ಅಕ್ಟೋಬರ್ ನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ 22,55,792 ವಾಹನಗಳು ಸಂಚರಿಸುತ್ತವೆ. 2017 ರ ಜುಲೈನಲ್ಲಿ ಈ ಪ್ರಮಾಣ ಹೆಚ್ಚಿದ್ದು, 70,28,067 ಸಂಚಾರ ಕಂಡುಬಂದಿದೆ.

ಸಂಕ್ರಾಂತಿ ವಿಶೇಷ ಪುಟ

ವಾಹನಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವುದರಿಂದ ಬಿಎಂಟಿಸಿ ಕೂಡ ಬಸ್ಗಳ ಸಂಚಾರ ಗುರಿಯನ್ನು ಸಂಚಾರ ದಟ್ಟಣೆಗೆ ತಕ್ಕಂತೆ ಬದಲಿಸುವ ಪರಿಸ್ಥಿತಿ ಬಂದಿದೆ. ಬಿಎಂಟಿಸಿಯ ನಿಗದಿತ ಬಸ್ ಗಂಟೆಗೆ 17.5 ಕಿ.ಮೀ ದೂರ ಚಲಿಸಬೇಕು ಎಂಬ ನಿಯಮವಿದೆ. 2013 ಕ್ಕಿಂತ ಮೊದಲು ಗಂಟೆಗೆ 19.5 ಕಿ.ಮೀ ಚಲಿಸಬೇಕು ಎಂಬ ನಿಯಮವಿತ್ತು. ಸಂಚಾರ ದಟ್ಟಣೆ ಅಧಿಕವಾಗಿದ್ದರಿಂದ ಈ ನಿಯಮದಲ್ಲಿ ಬದಲಾವಣೆ ತಂದು ಚಾಲಕರಿಗೆ ಅನುವು ಮಾಡಿಕೊಡಲಾಯಿತು.

ಕನ್ಸೋರ್ಟಿಯಂ ಆಫ್ ಟ್ರಾಫಿಕ್ ಎಂಜಿನಿಯರ್ಸ್ ಅಂಡ್ ಸೇಫ್ಟಿ ಟ್ರೇನರ್ಸ್ 2014 ರಲ್ಲಿ ನಡೆಸಿದ್ದ ಅಧ್ಯಯನದಲ್ಲಿ ಸಂಚಾರ ದಟ್ಟಣೆ ಹೆಚ್ಚಲಿದೆ ಎಂಬ ಎಚ್ಚರಿಕೆ ನೀಡಲಾಗಿತ್ತು. 2020ರ ವೇಳೆಗೆ ವಾಹನಗಳು ಗಂಟೆಗೆ 5.ಕಿ.ಮೀ ವೇಗದಲ್ಲಿ ಚಲಿಸಲಿದೆ ಎಂಬ ಆತಂಕಕಾರಿ ಅಧ್ಯಯನ ಹೊರಬಿದ್ದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Average speed of traffic in Bengaluru city, 20.4 km was in 2016. It has come down to 17.2 km per hour in 2017, A study revealed.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ