ಹಳೇ ನೋಟು ಕೊಟ್ಟರು, ಹೊಸ ಪಾಸು ಪಡೆದರು

Posted By:
Subscribe to Oneindia Kannada

ಬೆಂಗಳೂರು,ಡಿಸೆಂಬರ್ 1 : ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಡಿಸೆಂಬರ್ 1 ಬಸ್ ಪಾಸಿಗಾಗಿ ದೊಡ್ಡ ಸರತಿ ಸಾಲೇ ನಿರ್ಮಾಣವಾಗಿತ್ತು. ಕೆಲವರು ಹಳೇ ನೋಟನ್ನು ನೀಡಿ ಹೊಸ ಪಾಸು ಪಡೆಯುತ್ತಿದ್ದರೆ ಮತ್ತೆ ಕೆಲವರು ಹೊಸ ರು 2000 ನೋಟು ನೀಡಿ ಪಾಸು ಮತ್ತು ಚಿಲ್ಲರೆ ಎರಡನ್ನು ಪಡೆದರು.

ಹೊಸ ತಿಂಗಳ ಮೊದಲ ದಿನ ಬೆಂಗಳೂರಿನಲ್ಲಿ ಎಲ್ಲರೂ ಹೊಸ ಬಸ್ ಪಾಸ್ ಗಳನ್ನು ಖರೀದಿಸುವುದು ಸಾಮಾನ್ಯ. ಆದರೆ ಅಪನಗದೀಕರಣವಾದ ಮೇಲೆ ಇದೇ ಮೊದಲ ಬಾರಿಗೆ ಹೊಸ ಬಸ್ ಪಾಸ್ ಪಡೆದ ಪ್ರಯಾಣಿಕರು ಹಳೇ ನೋಟು ಕೊಡಬೇಕೋ, ಬೇಡವೋ, ಹೊಸ ನೋಟು ಎಲ್ಲಿಂದ ತರೋದು ಹೀಗೆ ಕೆಲವರು ಗೊಂದಲದಲ್ಲಿದ್ದರು. ಕೆಲವರು ಹಳೇ ರು 500 ನೋಟುಗಳನ್ನು ನೀಡಿ ಪಾಸ್ ಗಳನ್ನು ಪಡೆದರು. ಮತ್ತೆ ಕೆಲವರು ರು 100 ನೋಟುಗಳನ್ನೇ ಎರಡೆರಡು ಬಾರಿ ಎಣಿಸಿ ಕೊಟ್ಟು ಪಾಸ್ ಪಡೆದುಕೊಂಡರು.[500 ರು ನೋಟಿನ ಕೊರತೆಗೆ ಕಾರಣವೇನು?]

December 1: people take a bus pass to give old notes

ಕೆಲವು ಪ್ರಯಾಣಿಕರು ರು 2000 ನೋಟುಗಳನ್ನು ನೀಡಿ ಚಿಲ್ಲರೆಯೂ ಆಗುತ್ತ, ಬಸ್ ಪಾಸು ದೊರೆಯುತ್ತೆ ಎಂಬ ಚಾಕಚಕ್ಯತೆ ಮೆರೆದರು. ಆದರೂ ಬಸ್ ಪಾಸ್ ವಿರತಣಾಧಿಕಾರಿಗಳು ಹೆಚ್ಚು ರು 500 ನೋಟುಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಪ್ರಯಾಣಿಕರಿಗೆ ಎಚ್ಚರಿಸುತ್ತಲೇ ಇದ್ದರು.

ವಿದ್ಯಾರ್ಥಿಯೊಬ್ಬ ನನ್ನ ಹತ್ತಿರ ಬಹಳದಿನದಿಂದ ಇದ್ದ ಹಳೇ ನೋಟನ್ನು ಇಂದು ಕೊಟ್ಟು ಬಿಟ್ಟೆ ಎಂದರೆ, ಮತ್ತೊಬ್ಬ ಚಿಲ್ಲರೆಯೇ ಸಿಗದೆ ಇದ್ದ ರು 2000 ನೋಟು ಅಂತೂ ಇಂತೂ ಕೈಬಿಟ್ಟು ಹೋಯಿತು ಎಂದು ಪರಸ್ಪರ ಮಾತಾಡಿಕೊಳ್ಳುತ್ತಿದ್ದರು.[ಬ್ಯಾಂಕಿನಲ್ಲಿ ಹಣವಿಲ್ಲ: ಸಾಮಾನ್ಯನ ಸಹನೆಗೆ ಮಿತಿಯಿಲ್ಲವೇ?]

December 1: people take a bus pass to give old notes

ತಿಂಗಳ ಮೊದಲಲ್ಲಿ ಹಣವೇ ಸಿಗದಿರುವ ಪರಿಸ್ಥಿತಿಯಲ್ಲಿ ಜನರು ಹಳೇ ನೋಟುಗಳನ್ನು ಕೊಟ್ಟು ಪಾಸು ಪಡೆದು ನಿಟ್ಟಸಿರು ಬಿಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
December first in Bangaluru some people have Bus pass. To give money old Rs 500 note, some give Rs 2000 notes, some give 100 rupee notes.
Please Wait while comments are loading...