ಆರ್.ಟಿ ನಗರ ಪ್ರಕರಣ: ಲಾಠಿ ಬೀಸಿದ ಪೊಲೀಸರದ್ದೇ ತಪ್ಪು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 20 : ಆರ್.ಟಿ ನಗರದಲ್ಲಿ ತಡರಾತ್ರಿ ತೆರೆದಿದ್ದ ಹೊಟೆಲ್ ಗೆ ನುಗ್ಗಿದ ಪೊಲೀಸರು ಮಾಲೀಕನಿಗೆ ಲಾಠಿಯಿಂದ ತಳಿಸಿದ ಪ್ರಕರಣದಲ್ಲಿ ಪೊಲೀಸರದ್ದೆ ತಪ್ಪು ಎಂದು ಡಿಸಿಪಿ ಚೇತನ್ ಸಿಂಗ್ ಹೇಳಿದ್ದಾರೆ.

ಕಳೆದ ನವೆಂಬರ್ 9ರಂದು ಆರ್.ಟಿ.ನಗರದ ದಿಣ್ಣೂರ ರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಂ ತಡರಾತ್ರಿ ರಾತ್ರಿ 11-55ರವರೆಗೆ ತರೆದಿದ್ದರಿಂದ ಮಾಲೀಕ ರಾಜೀವ್ ಶೆಟ್ಟಿಗೆ ಎಸಿಪಿ ಮಂಜುನಾಥ್ ಲಾಟಿಯಿಂದ ಹೊಡೆದಿದ್ದರು ಪೊಲೀಸರ ದೌರ್ಜನ್ಯ ಕಂಡು ಲಂಚ್ ಹೋಂನಲ್ಲಿದ್ದ ಗ್ರಾಹಕರು ಭಯಭೀತಗೊಂಡು ಓಡಿ ಹೋಗಿದ್ದರು.

DCP Chethan says its police mistake in R.T.Nagar Hotel issue

ನಂತರವೂ ಬಿಡದೆ ಪೊಲೀಸರು ಲೈಟ್ ಆಫ್ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿದರೆಂದು ಲಂಚ್ ಹೋಂ ಮಾಲೀಕ ರಾಜೀವ ಶೆಟ್ಟಿ ಆರೋಪಿಸಿದ್ದರು. ಎಸಿಪಿ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಾದ್ಯಮಗಳಲ್ಲಿ ಈ ಸುದ್ದಿ ಪ್ರಕಟಗೊಳ್ಳುತ್ತಲೇ ಎಚ್ಚರಗೊಂಡ ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ಅವರು ತನಿಖೆಗೆ ಆದೇಶಿಸಿದ್ದರು.

ಪ್ರಕರಣ ಕುರಿತಂತೆ ಎಸಿಪಿ ಮಂಜುನಾಥ್, ಪೊಲೀಸ್ ಪೇದೆ ಮತ್ತು ಹೊಟೇಲ್ ಮಾಲೀಕನ ಹೇಳಿಕೆ ಪಡೆದು ತನಿಖೆ ಮಾಡಿರುವ ಡಿಸಿಪಿ ಚೇತನ್ ಕುಮಾರ್ ಅವರು ಇದೀಗ ಎಸಿಪಿ ಮಂಜುನಾಥ ಅವರದ್ದೆ ತಪ್ಪು ಎಂಬ ವರದಿಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಸಲ್ಲಿಸಿದ್ದಾರೆ. ವರದಿಯಲ್ಲಿ ಮಾಲಿನಿ ಕೃಷ್ಣಮೂರ್ತಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
DCP Chethan Singh submits report to ADIG Malini Krishnamurthy about R.T.Nagar Hotel issue. ACP Manjunath Intentionally beaten hotel owner Rajesh Shetty.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ