ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೀ-ಕೀ ಡ್ಯಾನ್ಸ್‌ ಚಾಲೆಂಜ್‌ ಸ್ವೀಕರಿಸಿದರೆ ತಕ್ಕ ಶಾಸ್ತಿ ಸರ್ಕಾರ ಎಚ್ಚರಿಕೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 1: ದೇಶಾದ್ಯಂತ ಯುವ ಜನಾಂಗದಲ್ಲಿ ಹುಚ್ಚೆಬ್ಬಿಸಿರುವ ಕೀ-ಕೀ ಡ್ಯಾನ್ಸ್‌ ನಿಗ್ರಹಕ್ಕೆ ಕೇಂದ್ರ ಸರ್ಕಾರ ಮುಂದಾಗುತ್ತಿದ್ದಂತೆಯೇ ರಾಜ್ಯದಲ್ಲೂ ಕೀಕೀ ಡ್ಯಾನ್ಸ್‌ ತಡೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿಯಾಗಿರುವ ಡಾ. ಜಿ. ಪರಮೇಶ್ವರ ಈ ಕುರಿತು ಬುಧವಾರ ತಮ್ಮ ಟ್ವಿಟ್ಟರ್‌ನಲ್ಲಿ ಸಂದೇಶ ಒಂದನ್ನು ನೀಡಿದ್ದು ರಾಜ್ಯದಲ್ಲಿ ಯುವಕರು ಕೀಕೀ ಡ್ಯಾನ್ಸ್‌ ಚಾಲೆಂಜ್‌ನ ಕುಮ್ಮಕ್ಕಿಗೆ ಓಗೊಡುತ್ತಿದ್ದಾರೆ ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತದೆ ಆದ್ದರಿಂದ ಯುವಜನಾಂಗವು ಇಂತಹ ಕೃತ್ಯಗಳಿಗೆ ಬಲಿಯಾದಂತೆ ಪಾಲಕರು ಗಮನ ಹರಿಸಬೇಕೆಂದು ತಮ್ಮ ಟ್ವಿಟ್ಟರ್‌ನಲ್ಲಿ ಕೋರಿದ್ದಾರೆ.

ಕಿಕಿ ನೃತ್ಯ ಮಾಡಿದ ನಿವೇದಿತಾ ಗೌಡ ವಿರುದ್ಧ ದೂರುಕಿಕಿ ನೃತ್ಯ ಮಾಡಿದ ನಿವೇದಿತಾ ಗೌಡ ವಿರುದ್ಧ ದೂರು

ಈಗಾಗಲೇ ರಾಜ್ಯದಲ್ಲಿ ಬಿಗ್‌ ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಸೇರಿದಂತೆ ಹಲವಾರು ಚಿತ್ರನಟರು ಕೀಕೀ ಡ್ಯಾನ್ಸ್‌ ಚಾಲೆಂಜ್‌ ಸ್ವೀಕರಿಸಿ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇಂತಹ ವಿಡಿಯೋಗಳಿಗೆ ಲಕ್ಷಾಂತರ ಯುವಕರು ಮೆಚ್ಚುಗೆ ವ್ಯಕ್ತಪಡಿಸಿ ತಾವು ಚಾಲೆಂಜ್‌ ಸ್ವೀಕರಿಸುವುದಾಗಿ ಹೇಳಿದ್ದಾರೆ.

DCM warns key key challenge is illegal

ಇನ್ನೂ ಕೆಲವರು ಇಂತಹ ಅಪಾಯಕಾರಿ ಆಟಗಳಿಗೆ ಬಲಿಯಾಗದಂತೆ ಸೆಲೆಬ್ರಿಟಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿರುವ ಪರಮೇಶ್ವರ ರಾಜ್ಯದಲ್ಲಿ ಯುವಕರು ಕೀಕೀ ಡ್ಯಾನ್ಸ್‌ ಚಾಲೆಂಜ್‌ ಸ್ವೀಕರಿಸಿ ಇಂತಹ ಹುಚ್ಚು ಸಾಹಸಕ್ಕೆ ಮುಂದಾದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

English summary
Deputy chief minister Dr G Parameshwar as stated key-key challenge is illegal and dangerous to the people, he also appeal the parents that children stay away from this challenge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X