ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲಿವೇಟೆಡ್ ಕಾರಿಡಾರ್‌ ಯೋಜನೆ ಇನ್ನೂ ಅಂತಿಮವಾಗಿಲ್ಲ: ಪರಮೇಶ್ವರ್‌

By Nayana
|
Google Oneindia Kannada News

ಬೆಂಗಳೂರು, ಜುಲೈ31: ಎಲಿವೇಟೆಡ್‌ ಕಾರಿಡಾರ್ ಬಗ್ಗೆ ಚರ್ಚೆ ಈಗಷ್ಟೇ ಆರಂಭವಾಗಿದೆ, ಅದರ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.

ಎಲೆವೇಟೆಡ್‌ ಕಾರಿಡಾರ್‌ ನಿರ್ಮಾಣ ಮಾಡದಂತೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಪರಮೇಶ್ವರ, ಈಗಿನ್ನು ಚರ್ಚೆ ಆರಂಭವಾಗಿದೆ, ಡಿಪಿಆರ್‌ ಆಗಬೇಕಷ್ಟೆ, ಹಣಕಾಸು ಚರ್ಚೆ ಆಗಬೇಕಿದೆ.

ಎಲಿವೇಟೆಟ್‌ ಕಾರಿಡಾರ್‌ ವಿರೋಧಿಸಿ ಫೇಸ್‌ಬುಕ್‌ನಲ್ಲಿ ಒಂದು ಅಭಿಯಾನ ಎಲಿವೇಟೆಟ್‌ ಕಾರಿಡಾರ್‌ ವಿರೋಧಿಸಿ ಫೇಸ್‌ಬುಕ್‌ನಲ್ಲಿ ಒಂದು ಅಭಿಯಾನ

ಲೋಕೋಪಯೋಗಿ ಇಲಾಖೆ ಇದನ್ನು ಸೂಕ್ತವಾಗಿ ಅನುಷ್ಠಾನ ಮಾಡಲಿದೆ. ಅದರಿಂದ ಹವಾಮಾನದ ಮೇಲೆ ಆಗುವ ದುಷ್ಪರಿಣಾಮ ಕುರಿತು ವರದಿ ಕೇಳಲಾಗಿದೆ. ವರದಿ ಬಂದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

DCM says elevated corridor project yet to be finalized

ಪ್ರತ್ಯೇಕ ರಾಜ್ಯ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ, ರಾಜ್ಯದ ನೆಲ ಜಲಕ್ಕಾಗಿ ನಾವು ಹೋರಾಟ ಮಾಡಿದ್ದೇವೆ, ಈ ರೀತಿ ಪ್ರತ್ಯೇಕತೆ ಬಗ್ಗೆ ಮಾತನಾಡಬಾರದು, ಕರ್ನಾಟಕದ ಏಕೀಕರಣಕ್ಕೆ ಬಹಳಷ್ಟು ಜನ ಹೋರಾಡಿದ್ದಾರೆ.

, ಈ ಹಿಂದೆ ಎಸ್‌ಎಂ ಕೃಷ್ಣ ಅವರ ಕಾಲದಲ್ಲಿ ನಾವೇ ಹಿಂದುಳಿದ ತಾಲೂಕುಗಳನ್ನು ಗುರುತಿಸಿದ್ದೆವು 2014 ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

English summary
Deputy chief minister Dr. G. Parameshwara said that the proposed elevated corridor yet to be finalized and detailed project report to be prepared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X