ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿದ್ದಾರೆ 123 ಆಫ್ರಿಕನ್‌ ಪ್ರಜೆಗಳು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 2: ಅಕ್ರಮವಾಗಿ ಬೆಂಗಳೂರಿನಲ್ಲಿ ವಲಸಿರುವ 123 ಆಫ್ರಿಕನ್ನರನ್ನು ಗುರುತಿಸಲಾಗಿದ್ದು ಅವರನ್ನು ಹೊರಹಾಕುವ ಪ್ರಯತ್ನ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದರು.

ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿಚಾರ ಕುರಿತು ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಅಕ್ರಮ ವಲಸಿಗರನ್ನು ಈಗಾಘಲೇ ಹೊರಹಾಕುವ ಪ್ರಯತ್ನವನ್ನು ಕೈಗೊಂಡಿದ್ದೇವೆ, ಇದೀಗ 123 ಆಫ್ರಿಕನ್ನರನ್ನು ಪತ್ತೆ ಹಚ್ಚಿದ್ದು ಅವರನ್ನು ದೇಶದಿಂದ ಹೊರಗೆ ಕಳುಹಿಸುವ ಪ್ರಯತ್ನ ನಡೆದಿದೆ ಎಂದರು.

ಬೆಂಗಳೂರಲ್ಲಿ ಅಕ್ರಮ ವಲಸಿಗರು: 117 ಜನರಿಗೆ ನೋಟಿಸ್‌ ಜಾರಿ ಬೆಂಗಳೂರಲ್ಲಿ ಅಕ್ರಮ ವಲಸಿಗರು: 117 ಜನರಿಗೆ ನೋಟಿಸ್‌ ಜಾರಿ

ಸರಿಯಾದ ಕಾಗದ ಪತ್ರ ಇಲ್ಲದ ಯಾರೇ ಆದರೂ ಕ್ರಮ ಕೈಗೊಳ್ಳಲಾಗುತ್ತದೆ ಇಲ್ಲಿ ಇರಲು ಅವಕಾಶವಿರುವುದಿಲ್ಲ, ಅವರು ಬಾಂಗ್ಲಾ ವಲಸಿಗರಿರಲಿ ಅಥವಾ ಬೇರೆ ದೇಶದವರಿರಲಿ ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ.

DCM reveals 123 Africans over stay in Bengaluru

ಕೆಲವು ವಿದೇಶಿಗರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಇಂತವರಿಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ. ಅಸ್ಸಾಂನಲ್ಲಿ ಅಕ್ರಮ ವಲಸಿಗರಿಗೆ ಶಾಕ್‌ ಕೊಟ್ಟ ಬೆನ್ನಲ್ಲೇ ರಾಜ್ಯದಲ್ಲೂ ಹಲವು ಬೆಳವಣಿಗೆಯಾಗಿದೆ. ನಗರದಲ್ಲಿ ಸಾವಿರಾರು ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ. ಹೀಗೆ ತಳವೂರಿರುವ ವಿದೇಶಿಗರನ್ನು ಜೈಲಿಗೆ ಕಳುಹಿಸುವ ಕಾರ್ಯ ಚುರುಕುಗೊಂಡಿದೆ.

ಬೆಂಗಳೂರು ನಗರವೊಂದರಲ್ಲೇ 975 ಮಂದಿ ಅಕ್ರಮ ವಿದೇಶಿಗರು ವಾಸ್ತವ್ಯ ಹೂಡಿದ್ದಾರೆ, ಬೆಂಗಳೂರು ಇದೀಗ ಅಕ್ರಮ ವಿದೇಶಿಗರ ಅಡಗು ತಾಣವಾಗಿದೆ. 1076 ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪೊಲೀಸರು ಪತ್ತೆ ಮಾಡಿದ್ದಾರೆ, ಇವರ ವಿರುದ್ಧ ಕ್ರಮಕ್ಕೆ ರಾಜ್ಯ ಪೊಲೀಸ್‌ ಇಲಾಖೆ ಮುಂದಾಗಿದೆ.

English summary
Deputy chief minister Dr. G. Parameshwara has revealed that the police have found over stayed 123 African national and action will be taken to sent back them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X