ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರುಣಾನಿಧಿ ಸದಾ ಯುಪಿಎ ಸರ್ಕಾರದ ಸಂಗಾತಿ: ಪರಮೇಶ್ವರ್ ಬಣ್ಣನೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 8: ತಮಿಳುನಾಡು ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕರುಣಾನಿಧಿ ಅವರ ನಿಧನ ರಾಜಕಾರಣದಲ್ಲಿ ತುಂಬಲಾರದ ನಷ್ಟ ಉಂಟು ಮಾಡಿದ್ದು, ಅವರ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ತೆರಳುತ್ತಿರುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿ.ಎಸ್. ನಿಜಲಿಂಗಪ್ಪ ಅವರ 18ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧ ಮುಂಭಾಗ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಸಮರ್ಪಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು‌. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರು ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿದ್ದರು.

ಮರೀನಾಬೀಚ್ ನ ಮಣ್ಣಲ್ಲಾದರೂ ಒಂದಾಗಲಿ ಜಯಲಲಿತಾ-ಕರುಣಾನಿಧಿ! ಮರೀನಾಬೀಚ್ ನ ಮಣ್ಣಲ್ಲಾದರೂ ಒಂದಾಗಲಿ ಜಯಲಲಿತಾ-ಕರುಣಾನಿಧಿ!

ಯುಪಿಎ ಎರಡು ಬಾರಿ ಕೇಂದ್ರದಲ್ಲಿ ಸರ್ಕಾರ ರಚಿಸಿದಾಗ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು. ಕಾಂಗ್ರೆಸ್ ಪರ ನಿಂತಿದ್ದಕ್ಕೆ ನಾವೆಲ್ಲಾ ಕರುಣಾನಿಧಿ ಅವರಿಗೆ ಅಭಾರಿಯಾಗಿದ್ದೇವೆ. ಈಗಲೂ ಡಿಎಂಕೆ ಪಕ್ಷ ಕಾಂಗ್ರೆಸ್ ಜೊತೆಗಿದೆ ಎಂದರು.

DCM recalls MK was always with UPA govt

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಮಂಗಳವಾರ ಸಂಜೆ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ 12 ದಿನಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ರಾಜೀವ್ ಗಾಂಧಿ ಹತ್ಯೆ, ಕರುಣಾನಿಧಿ ಮತ್ತು ಕಾಂಗ್ರೆಸ್‌: ಏನೀ ಸಂಬಂಧ?ರಾಜೀವ್ ಗಾಂಧಿ ಹತ್ಯೆ, ಕರುಣಾನಿಧಿ ಮತ್ತು ಕಾಂಗ್ರೆಸ್‌: ಏನೀ ಸಂಬಂಧ?

ಮರೀನಾ ಬೀಚ್‌ ಬಳಿ ಚೆನ್ನೈ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಸಮಾಧಿ ಪಕ್ಕದಲ್ಲಿಯೇ ಅವರ ಅಂತಿಮ ಕ್ರಿಯೆಯನ್ನು ನೆರವೇರಿಸಲಾಗುತ್ತದೆ. ಬುಧವಾರ ಸಂಜೆ 6 ಗಂಟೆಗೆ ಅಂತ್ಯಸಂಸ್ಕಾರ ತೆರವೇರಲಿದೆ.

English summary
Deputy chief minister Dr. G. Parameshwar had described former Tamil Nadu chief minister M. Karunanidhi was always with UPA government and with secular forces in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X