ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾಲೇಜು ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್‌ ಕಡ್ಡಾಯಕ್ಕೆ ಸರ್ಕಾರ ಚಿಂತನೆ'

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 24: ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್‌ ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದರು.

ಶುಕ್ರವಾರ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಎಲ್ಲಾ ವಿದ್ಯಾರ್ಥಿಗು ಎನ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಎನ್‌ಎಸ್‌ಎಸ್‌ ಕಡ್ಡಾಯಗೊಳಿಸುವ ಚಿಂತನೆ ಮಾಡಲಾಗಿದೆ. ಎನ್‌ಎಸ್‌ಎಸ್‌ ಗೆ ಹೆಚ್ಚಾಗಿ ಬಡ ಮತ್ತು ಮಧ್ಯಮದ ವರ್ಗದ ವಿದ್ಯಾರ್ಥಿಗಳೇ ಸೇರುತ್ತಾರೆ ಎಂದರು.

ಕೇರಳಕ್ಕೊಂದು ಕರ್ನಾಟಕಕ್ಕೊಂದು ನೀತಿ: ಕೇಂದ್ರದ ವಿರುದ್ಧ ಪರಂ ಆಕ್ರೋಶಕೇರಳಕ್ಕೊಂದು ಕರ್ನಾಟಕಕ್ಕೊಂದು ನೀತಿ: ಕೇಂದ್ರದ ವಿರುದ್ಧ ಪರಂ ಆಕ್ರೋಶ

ಅನುಕೂಲಸ್ಥ ವಿದ್ಯಾರ್ಥಿಗಳು ಇದರಿಂದ ದೂರು ಉಳಿಯುತ್ತಿದ್ದಾರೆ. ಇವರು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಸಂಸ್ಕಾರ, ಸಂಸ್ಕೃತಿ ನಡವಳಿಕೆಯ ಜ್ಞಾನವಿರಬೇಕು. ಹೀಗಾಗಿ ಎನ್‌ಎಸ್‌ಎಸ್‌ ಕಡ್ಡಾಯಗೊಳಿಸಿದರೆ ಎಲ್ಲರೂ ಪಾಲ್ಗೊಳ್ಳಬೇಕಿರುತ್ತದೆ. ಹಿಂದೆಲ್ಲ ಎನ್‌ಸಿಸಿ ಕಡ್ಡಾಯವಿತ್ತು ಎಂದರು. ಅದೇ ಮಾದರಿಯಲ್ಲಿ ಇದನ್ನೂ ಕಡ್ಡಾಯಗೊಳಿಸಿದರೆ ಉತ್ತಮ‌ ಎಂದು ಅಭಿಪ್ರಾಯಪಟ್ಟರು.

DCM intends NSS activities mandatory in colleges

ಎನ್‌ಎಸ್‌ಎಸ್‌ನನ್ನು ಸಂಪೂರ್ಣ ಬದಲಿಸುವ ಅಗತ್ಯವಿದೆ. ಸಭೆಯಲ್ಲಿ ಯುವಕರಿಗೆ ಅನುಕೂಲವಾಗುವ ರೀತಿ ಕ್ರಿಯಾತ್ಮಕ ಸಲಹೆ ಬಂದೆ. ಕಾನೂನು , ಸಂಸ್ಕೃತಿ, ಭವಿಷ್ಯ, ಕೌಶಲ್ಯಾಭಿವೃದ್ಧಿ, ಉದ್ಯೋಗದ ಬಗ್ಗೆ ಎನ್‌ಎಸ್ಎಸ್‌ ನಲ್ಲೇ ಅರಿವು ಮೂಡಿಸುವ ಬಗ್ಗೆ ಸಲಹೆ ಬಂದಿದೆ. ಎನ್‌ಎಸ್‌ಎಸ್‌ನನ್ನು ಬಲಿಷ್ಠಗೊಳಿಸಲು ಸಮಿತಿ ರಚಿಸಿ ಅಂತಿಮ‌ ನಿರ್ಧಾರ ಮಾಡಲಾಗುವುದು ಎಂದರು.‌

ಬಿಡಿಎ ಅಧ್ಯಕ್ಷರಾದ ಪರಮೇಶ್ವರ, ಸಿದ್ದರಾಮಯ್ಯಗೆ ಹಿನ್ನಡೆ! ಬಿಡಿಎ ಅಧ್ಯಕ್ಷರಾದ ಪರಮೇಶ್ವರ, ಸಿದ್ದರಾಮಯ್ಯಗೆ ಹಿನ್ನಡೆ!

ಕೊಡಗಿನ ಜನರ ನೆರವಿಗೆ ಮಂಗಳೂರು‌ ಸೇರಿದಂತೆ ಹತ್ತಿರದ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಧಾವಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಹಳೇ ವಿದ್ಯಾರ್ಥಿಗಳು ಕೂಡ ವಿವಿಧ ಭಾಗದಿಂದ ತೆರಳಿದ್ದಾರೆ. ಎಲ್ಲ ಕಾಲೇಜು ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಗ್ಗೆ ವಿಶ್ವವಿದ್ಯಾಲಯ ಕುಲಪತಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

English summary
Deputy Chief Minister Dr. G. Parameshwara had said that the state government is thinking to mandate National Service Scheme activities for all the students in colleges to create commitment towards the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X