ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ಜನರ ನಂಬಿಕೆ ಉಳಿಸಿಕೊಳ್ಳಲಿ ಎಂದ ಪರಮೇಶ್ವರ್

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 21: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕುರಿತು ಜನರಲ್ಲಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಜೊತೆಗೆ ಆಡಳಿತ ವೈಖರಿಯನ್ನು ಇನ್ನಷ್ಟು ಪಾರದರ್ಶಕವಾಗಿ ನಡೆಸುವಂತೆ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಡಿಎ ಅಧಿಕಾರಗಳೊಂದಿಗೆ ಮಂಗಳವಾರ ಬಿಡಿಎ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ಬಿಡಿಎ ಸ್ಥಾಪನೆಗೊಂಡ‌ ಉದ್ದೇಶವೇ ಸಂಪೂರ್ಣ ಬದಲಾಗಿದೆ.‌ ಬಡವರು, ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಿಸಿಕೊಡುವ ಜವಾಬ್ದಾರಿ ಬಿಡಿಎ ಮೇಲಿತ್ತು. ಇಂದು ಈ ಕೆಲಸಕ್ಕಿಂತ ರಸ್ತೆ , ಮೇಲ್ಸೇತುವೆ ನಿರ್ಮಾಣ, ಕಮರ್ಷಿಯಲ್‌ ಇತರೆ ಕ್ಷೇತ್ರದತ್ತ ವಿಸ್ತರಿಸಿಕೊಂಡಿದೆ.

ಇಂದಿರಾನಗರದಲ್ಲಿ ಮರಗಣತಿ ನಡೆಸಿದ ಯುನೈಟೆಡ್‌ ಬೆಂಗಳೂರುಇಂದಿರಾನಗರದಲ್ಲಿ ಮರಗಣತಿ ನಡೆಸಿದ ಯುನೈಟೆಡ್‌ ಬೆಂಗಳೂರು

‌ ಇಲ್ಲಿಯೂ ಪಾರದರ್ಶಕ ಆಡಳಿತವಿಲ್ಲ ಎಂಬ ದೂರು ಬರುತ್ತಿದೆ. ಹಿಂದೊಮ್ಮೆ ಬಿಡಿಎ ಮುಚ್ಚುವ ಚರ್ಚೆ ಕೂಡ ನಡೆದಿತ್ತು. ಹೀಗಾಗಿ ಬಿಡಿಎನನ್ನು ಆರೋಗ್ಯಕರ ದಾರಿಯಲ್ಲಿ‌ ನಡೆಸಿಕೊಂಡು ಹೋಗುವಂತೆ ನಿರ್ದೇಶನ ನೀಡಿದರು. ಟೆಂಡರ್‌ದಾರರು ಕಾಮಗಾರಿ ಪೂರ್ಣಗೊಳಿಸುವಲ್ಲಿ ತಡ ಮಾಡಿದರೆ ಮುಲಾಜಿಲ್ಲದೇ ಟೆಂಡರ್ ರದ್ದುಪಡಿಸಿ ಬೇರೆಯವರಿಗೆ ನೀಡಿ.

DCM insists BDA should be more transparent with people

ಆಗಸ್ಟ್‌ನಲ್ಲಿ ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ ಸಾಧ್ಯತೆಆಗಸ್ಟ್‌ನಲ್ಲಿ ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ ಸಾಧ್ಯತೆ

ಯಾವುದೇ ಕಾಮಗಾರಿಯಾದರೂ ಅವಧಿಯೊಳಗೆ ನಡೆಯಬೇಕು, ಅನಗತ್ಯ ವೆಚ್ಚಕ್ಕೆ ಅವಕಾಶ ನೀಡಬೇಡಿ ಎಂದು ಸೂಚನೆ ನೀಡಿದರು. ಸಭೆಯಲ್ಲಿ ಬಿಡಿಎ ಕೈಗೆತ್ತಿಕೊಂಡಿರುವ ಯೋಜನೆಗಳ ವಿವರವನ್ನು ಪಡೆದರು. ಈ ವೇಳೆ ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಎಸ್‌ಪಿ‌ ಜಗದೀಶ್, ಅಧಿಕಾರಿಗಳು ಉಪಸ್ಥಿತರಿದ್ದರು.

English summary
Deputy chief minister Dr.G. Parameshwara has said that Bengaluru Development Authority should have more transparent in policy and implementation of projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X