ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಬಲ್‌ ಮಾಫಿಯಾ ಮೇಲೆ ಡಿಸಿಎಂ ಕೆಂಗಣ್ಣು: ಬಿಬಿಎಂಪಿ-ಪೊಲೀಸ್‌ ಜಂಟಿ ಕ್ರಮ

By Nayana
|
Google Oneindia Kannada News

ಬೆಂಗಳೂರು, ಜು.27: ಬೆಂಗಳೂರಲ್ಲಿ ಅನಧಿಕೃತ ಫ್ಲೆಕ್ಸ್‌ ಹಾಗೂಕೇಬಲ್‌ಗಳ ತೆರವುಗೊಳಿಸಲು ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ನೋಡಲ್‌ ಅಧಿಕಾರಿ ನೇಮಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಪ್ರತಿಯೊಂದಕ್ಕೂ ಆಯುಕ್ತರ ಬಳಿ ಬಂದು ವಿಚಾರಗಳೆಲ್ಲವನ್ನೂ ತಿಳಿಸಿ ಕ್ರಮ ಕೈಗೊಳ್ಳುವುದರಿಂದ ವಿಳಂಬವಾಗಲಿದೆ. ಹಾಗಾಗಿ ಆಯಾ ವಲಯಗಳಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿದರೆ ಅನಧಿಕೃತ ಕೇಬಲ್ ತೆರವು ಮತ್ತು ಫ್ಲೆಕ್ಸ್‌ ತೆರವು ಬಗ್ಗೆ ತುರ್ತಾಗಿ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಸಂಚಾರ ಸೂಚನಾ ಫಲಕಗಳಿಗೆ ಅಡ್ಡವಾಗಿದ್ದ ಫ್ಲೆಕ್ಸ್‌ಗಳ ತೆರವುಸಂಚಾರ ಸೂಚನಾ ಫಲಕಗಳಿಗೆ ಅಡ್ಡವಾಗಿದ್ದ ಫ್ಲೆಕ್ಸ್‌ಗಳ ತೆರವು

ನಗರದಲ್ಲಿ ಅನಧಿಕೃತ ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಕೆ ವಿರುದ್ಧ ಸಮರ ಸಾರಿರುವ ಬಿಬಿಎಂಪಿ, ಇದುವರೆಗೆ 8,300 ಕಿ.ಮೀ ಉದ್ದದಷ್ಟು ಕೇಬಲ್‌ನ್ನು ತೆರವುಗೊಳಿಸಿದೆ. ಪಾಲಿಕೆ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿರುವ ಅನಧಿಕೃತ ಕೇಬಲ್‌ ಮಾಫಿಯಾ ಜಿ ಪರಮೇಶ್ವರ್‌ ಅವರು ಕಟ್ಟು ನಿಟ್ಟಿನ ಆದೇಶ ನೀಡಿದ್ದರು.

DCM insists BBMP to join hands with police to curb cable mafia

ಬೆಂಗಳೂರಲ್ಲಿ 2 ಸಾವಿರ ಸ್ಲಂಗಳು, ಸರ್ಕಾರ ಹೇಳೋದು 597 ಏಕೆ?ಬೆಂಗಳೂರಲ್ಲಿ 2 ಸಾವಿರ ಸ್ಲಂಗಳು, ಸರ್ಕಾರ ಹೇಳೋದು 597 ಏಕೆ?

ಅನುಮತಿ ಪಡೆಯದೆ ಎಲ್ಲೆಂದರಲ್ಲಿ ಕೇಬಲ್‌ಗಳನ್ನು ಹಾಕಿರುವ ಕಂಪನಿಗಳಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ಪಾಲಿಕೆಯ ಕಾರ್ಯಾಚರಣೆಯಿಂದ ಬೆಚ್ಚಿ ಬಿದ್ದಿರುವ ಕೇಬಲ್‌ ಸೇವಾ ಸಂಸ್ಥೆಗಳು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಮುಂದಿಟ್ಟು ತೆರವು ಕಾರ್ಯ ನಿಲ್ಲಿಸಲು ಬಿಬಿಎಂಪಿ ಮೇಲೆ ಒತ್ತಡ ತರುತ್ತಿವೆ. ಆದರೆ ಇದಕ್ಕೆ ತಲೆಕಡೆಸಿಕೊಳ್ಳದ ಡಿಸಿಎಂ ಕಾರ್ಯಾಚರಣೆ ತೀವ್ರಗೊಳಿಸುವಂತೆ ತಿಳಿಸಿದ್ದಾರೆ.

English summary
Deputy chief minister Dr.G. Parameshwar has insisted BBMP officials to remove illegal cable and flex in the city with help of police personnel without any delay.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X