ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಕುರಿತು ಸರ್ಕಾರಕ್ಕಿರುವ ಕಾಳಜಿ ಬಿಜೆಪಿಗಿಲ್ಲ: ಪರಮೇಶ್ವರ

|
Google Oneindia Kannada News

ಬೆಂಗಳೂರು, ನವೆಂಬರ್ 19: ರೈತರ ಬಗ್ಗೆ ಸಮ್ಮಿಶ್ರ ಸರ್ಕಾರಕ್ಕಿರುವ ಕಾಳಜಿ ಬಿಜೆಪಿಗಿಲ್ಲ, ಬಿಜೆಪಿ ಆಡಳಿತ ಎಲ್ಲೆಲ್ಲಿದೆ ಅಲ್ಇ ರೈತರ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಗುಡುಗಿದ್ದಾರೆ.

ರೈತರ ಪ್ರತಿಭಟನೆ ಕುರಿತು ಮಾತನಾಡಿದ ಅವರು, ನಾವು ರೈತರ ಪರವಾಗಿದ್ದೇವೆ, ಅವರ ಪರವಾಗಿಯೇ ನಿರ್ಧಾರಗಳನ್ನು ಕೈಗೊಂಡಿದ್ದೇವೆ, ಆದರೆ ಬಿಜೆಪಿಗೆ ರೈತರ ಬಗ್ಗೆ ಯಾವುದೇ ಕಾಳಜಿ ಇದ್ದಂತಿ್ಲ ಅವರು ಕೇವಲ ಬಾಯಿ ಮಾತಿನಲ್ಲಿ ಕಾಳಜಿ ತೋರಿಸುತ್ತಾರೆ ಎಂದು ಹೇಳಿದ್ದಾರೆ.

ವಿಧಾನಸೌಧಕ್ಕೆ ಅನ್ನದಾತರ ಮುತ್ತಿಗೆ: LIVE:ಸಿಎಂ ಧರಣಿ ಸ್ಥಳಕ್ಕೆ ಬರುವಂತೆ ಪಟ್ಟುವಿಧಾನಸೌಧಕ್ಕೆ ಅನ್ನದಾತರ ಮುತ್ತಿಗೆ: LIVE:ಸಿಎಂ ಧರಣಿ ಸ್ಥಳಕ್ಕೆ ಬರುವಂತೆ ಪಟ್ಟು

ನಮ್ಮ ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿಯನ್ನು ಭೇಟಿ ಮಾಡಿ ತಿಳಿಸಿದ್ದರೂ ನಮಗೆ ಇನ್ನೂ ಯಾವ ಸ್ಪಂದನೆ ಸಿಕ್ಕಿಲ್ಲ. ಸಾಲಮನ್ನಾಕ್ಕೆ ನೆರವು ನೀಡುವುದಕ್ಕೂ ಕೇಂದ್ರ ಸ್ಪಂದಿಸಿಲ್ಲ. ನಮ್ಮನ್ನು ಟೀಕೆ ಮಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆಯಿಲ್ಲ ಎಂದರು.

DCM hitbacks to BJP and asks what BJP has given to farmers

ರೈತ ಮಹಿಳೆ ಕುರಿತು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ ರೈತ ಮಹಿಳೆ ಕುರಿತು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ

ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಒಂದು ಟನ್​ ಕಬ್ಬಿಗೆ 450 ರೂ.​ ಬೆಂಬಲ ಬೆಲೆ ನೀಡುವಂತೆ ಕ್ರಮ ಕೈಗೊಂಡಿದ್ದೆವು. ಬಿಜೆಪಿಯವರು ಏನೇ ಟೀಕೆ ಟಿಪ್ಪಣಿ ಮಾಡಿದರೂ ನಾವು ರೈತರ ಪರವಾಗಿದ್ದೇವೆ. ಹಾಗಾಗಿಯೇ ನಾನು 49 ಕೋಟಿ ರೂ. ಸಾಲಮನ್ನಾ ಮಾಡುವ ಬಹುದೊಡ್ಡ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದರು.

ದುರಹಂಕಾರಕ್ಕೆ ಮಿತಿ ಇರಬೇಕು: ಎಚ್‌ಡಿಕೆ ವಿರುದ್ಧ ಯಡಿಯೂರಪ್ಪ ಗರಂದುರಹಂಕಾರಕ್ಕೆ ಮಿತಿ ಇರಬೇಕು: ಎಚ್‌ಡಿಕೆ ವಿರುದ್ಧ ಯಡಿಯೂರಪ್ಪ ಗರಂ

ರೈತರ ಪ್ರತಿಭಟನೆಯನ್ನು ನಾವು ತಡೆಯುವುದಿಲ್ಲ. ಕಾನೂನಿನಡಿ ಅವರಿಗೆ ಪ್ರತಿಭಟನೆ ಮಾಡಲು ಹಕ್ಕಿದೆ. ಆದರೆ, ಕಾನೂನು ಕೈಗೆತ್ತಿಕೊಂಡರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದ ಅವರು, ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಸಿಎಂ ಎಚ್​.ಡಿ.ಕುಮಾರಸ್ವಾಮಿ ನಾಳೆ ರೈತರ ಪ್ರತಿನಿಧಿಗಳನ್ನು ಕರೆದಿದ್ದಾರೆ. ನಾಳೆ ನಡೆಯಲಿರುವ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಪರಿಹಾರ ಒದಗಿಸಲಾಗುವುದು ಎಂದರು.

English summary
Deputy cheif minister Parameshwar asks BJP that what their government given to farmers. He assures that govt is caring about farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X