ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜಾತಿವಾರು ಹಾಸ್ಟೆಲ್ ಗಳನ್ನು ಜನರಲ್‌ ಹಾಸ್ಟೆಲ್ ಗಳೆಂದು ಬದಲಾಯಿಸಿ'

By Nayana
|
Google Oneindia Kannada News

ಬೆಂಗಳೂರು, ಜುಲೈ 31: ಶಾಲಾ ಕಾಲೇಜುಗಳ ವಿದ್ಯಾರ್ಥಿ ಗಳಿಗೆ ಸ್ಥಾಪಿಸಲಾದ ಹಾಸ್ಟೆಲ್ ಗಳು ಜಾತಿ ಆಧಾರಿತ ಆಗುತ್ತಿದ್ದು, ಜಾತಿರಹಿತವಾಗಿ ಮಕ್ಕಳು ಕಲಿಯುವಂತಾಗಲು ಜನರಲ್ ಹಾಸ್ಟೆಲ್ ಗಳೆಂದು ಪರಿಗಣಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಎಸ್‌ಸಿ ಎಸ್ಟಿ ಹಾಸ್ಟೆಲ್ ವಿಚಾರದ ಚರ್ಚೆ ವೇಳೆ ಜಾತಿ ವ್ಯವಸ್ಥೆ ತೆಗೆಯಲು ಸಲಹೆ‌ ನೀಡಿದ್ದಾರೆ, ಜಾತಿ ವ್ಯವಸ್ಥೆ ಹೆಚ್ಚಾಗಿದೆ. ಅದನ್ನು ಹೋಗಲಾಡಿಸಬೇಕು.‌ ಅದಕ್ಕೆ, ಎಸ್‌ಸಿ ಎಸ್ಟಿ ಹಾಸ್ಟೆಲ್‌ಗಳೆಲ್ಲವನ್ನೂ ಜನರಲ್ ಹಾಸ್ಟೆಲ್ ಅಂತ ಮಾಡಿ, ಜಾತಿ ಪದ್ಧತಿಯನ್ನು ಹೋಗಲಾಡಿಸಿ ಎಂದು ಸಲಹೆ ನೀಡಿದರು.

ಬೆಂಗಳೂರಲ್ಲಿ ಶೀಘ್ರ ಅಂತಾರಾಷ್ಟ್ರೀಯ ಟೆನ್ನಿಸ್ ಕೋರ್ಟ್: ಪರಮೇಶ್ವರ್ಬೆಂಗಳೂರಲ್ಲಿ ಶೀಘ್ರ ಅಂತಾರಾಷ್ಟ್ರೀಯ ಟೆನ್ನಿಸ್ ಕೋರ್ಟ್: ಪರಮೇಶ್ವರ್

ನಾವು ಓದುವಾಗ ಜಾತಿ ಆಧಾರದ ಮೇಲೆ ಹಾಸ್ಟಲ್ ಇರಲಿಲ್ಲ. ಈಗ ಜಾತಿ ವ್ಯವಸ್ಥೆ ಜಾಸ್ತಿ ಆಗಿದೆ. ನಾವೇ ಜಾತಿಯಿಂದ ಬೇರೆ ಮಾಡಿದರೆ ಜಾತಿ ವ್ಯವಸ್ಥೆಯನ್ನು ನಾವೇ‌ ಬಲ‌ಮಾಡಿದಂತೆ, ಎಲ್ಲ‌ ಜಿಲ್ಲೆಯಲ್ಲಿ ಒಂದು‌ ಜನರಲ್ ಹಾಸ್ಟಲ್ ಮಾಡಿ, ಅದರಲ್ಲಿ ಎಲ್ಲರಿಗೂ ಅವಕಾಶ ಇರಬೇಕು. ಯಶಸ್ವಿಯಾದರೆ ಎಲ್ಲೆಡೆ ಅದೇ ಮಾಡೋಣ, ಜಾತಿ ಉಲ್ಲೇಖ ಕಡಿಮೆ ಆಗುತ್ತದೆ, ಮಕ್ಕಳಲ್ಲಿ ಜಾತಿ ಮನಸ್ಥಿತಿ ತೆಗೆಸಬೇಕು.

DCM defines all hostels as general hostels!

ಸಾಮಾನ್ಯ ಹಾಸ್ಟೆಲ್‌ನಲ್ಲಿ ಶೇ.25 ಒಬಿಸಿ ಶೇ 10 ಅಂತೆಲ್ಲಾ ಅಧಿಕಾರಿಗಳೇ ವಿಭಾಗಿಸಿದರೆ , ಮಕ್ಕಳಲ್ಲಿ ಈ‌ ಮನಸ್ಥಿತಿ ಹೇಗೆ ಹೋಗತ್ತೆ. ಅದಕ್ಕೆ ಜನರಲ್ ಹಾಸ್ಟೆಲ್ ಅಂತ ಕರಾಯಿರಿ.‌ ಸಾರ್ವಜನಿಕ ವಿದ್ಯಾರ್ಥಿ‌ನಿಲಯ ಅಂತ ಕರೆಯಿರಿ ಹಿಂಗೆ ಶೇಕಡವಾರು ಬೇರೆ ಬೇರೆ ಮಾಡೋದು ಬೇಡ. ಜಾತಿ ವ್ಯವಸ್ಥೆ ಹೋಗಬೇಕು. ಎಲ್ಲರೂ ಒಂದೇ ಅನ್ನೋ ಭಾವನೆ ಮಕ್ಕಳಲ್ಲಿ‌ ಬರುವಂತೆ‌ ನಾವು‌ ಮಾಡಬೇಕು.

ಈ‌ ಪ್ರಸ್ತಾವನೆ ಕಳುಹಿಸಿಕೊಡಿ. ಪ್ರಾಯೋಗಿಕವಾಗಿ ೩೦ ಜಿಲ್ಲೆಯಲ್ಲಿ‌ ಹಾಸ್ಟೆಲ್ ಕಟ್ಟೋಣ. ಇದು ಯಶಸ್ವಿ ಆದರೆ ಎಲ್ಲೆಡೆ ಇದೇ ಮಾದರಿ ಅನುಸರಿಸೋಣ ಎಂದರು.

English summary
In an interesting development, deputy chief minister Dr.G. Parameshwara has given instructions to officials to consider all hostels as only general hostels rather caste based.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X