• search

ಬಿಬಿಎಂಪಿಗೆ ಶೀಘ್ರ ಹೊಸ ಕಾನೂನು ರಚನೆ: ಪರಮೇಶ್ವರ್

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜು.16: ಬಿಬಿಎಂಪಿಯನ್ನು ಸಮರ್ಪಕವಾಗಿ ನಿರ್ವಹಿಸಲು ಶೀಘ್ರವೇ ನೂತನ ಕಾನೂನು ತರಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

  ಬೆಂಗಳೂರಿನ ಅಭಿವೃದ್ಧಿ ಹಾಗೂ ಸಮಸ್ಯೆ ಬಗ್ಗೆ ಎಂಎಲ್‌ಎ, ಎಂಎಲ್‌ಸಿ ಹಾಗೂ ಎಂಪಿ ಅವರೊಂದಿಗೆ ವಿಧಾನಸೌಧದಲ್ಲಿ ಸೋಮವಾರ ಸಭೆ ನಡೆಸಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

  ಮುಖ್ಯಮಂತ್ರಿ ಕಣ್ಣೀರು ಹಾಕಿದ್ದಕ್ಕೆ ಉಪಮುಖ್ಯಮಂತ್ರಿ ಹೀಗಂದರು

  ಬಿಬಿಎಂಪಿಗೆ ಹೊಸ ಕಾನೂನು ತರಲು ಸದಸ್ಯರು ಸಲಹೆ ನೀಡಿದ್ದಾರೆ. ಪ್ರಸ್ತುತ ಈಗಿರುವ ಮುನಿಸಿಪಾಲಿಟಿ ಆ್ಯಕ್ಟ್ ಅಡಿಯಲ್ಲಿ ಬಿಬಿಎಂಪಿ ನಡೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹೊಸ ಕಾನೂನು ತರಲು ಸಲಹೆ ನೀಡಿದ್ದಾರೆ. ಆದಷ್ಟು ಶೀಘ್ರವಾಗಿ ಕಾನೂನು ಜಾರಿ ಮಾಡಲಿದ್ದೇವೆ ಎಂದರು.

  DCM asks Bengaluru authorities to curb illegal cable on ground

  ಶೀಘ್ರವೇ ಹಲವು ಸವಲತ್ತು ಪಡೆಯಲು ಸಕಾಲ ಕಾರ್ಯಕ್ರಮವನ್ನು ಇನ್ನುಹ ಪರಿಣಾಮಕಾರಿಯಾಗಿ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದರೂ, ಪ್ಲಾಸ್ಟಿಕ್ ಮಾರಾಟ, ಉತ್ಪಾದನೆ ನಡೆಯುತ್ತಿದೆ. ಹೀಗಾಗಿ ಪರಿಣಾಮಕಾರಿಯಾಗಿ ಬ್ಯಾನ್ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲೆಂದರಲ್ಲಿ ಫ್ಲೆಕ್ಸ್ ‌ಹಾಕಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಅನುಮತಿ ಇಲ್ಲದೇ ಮರದ ಮೇಲೆಲ್ಲಾ ಕೇಬಲ್ ಲೈನ್ ಹಾಕಿದ್ದಾರೆ ಅವರ ಮೇಲೆ‌ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

  ಕಸದ ಸೂಕ್ತ ವಿಲೇವಾರಿ, ಸಂಸ್ಕರಣೆಗೆ ಸಲಹೆ ಕೊಟ್ಟಿದ್ದಾರೆ, ವೇಸ್ಟ್ ಎನರ್ಜಿ ಬಗ್ಗೆಯೂ ಶೀಘ್ರವಾಗಿ ನಿರ್ಧಾರ ಮಾಡಿ, ಒಂದೆರೆಡು ಕಡೆ ಪ್ರಾಯೋಗಿಕವಾಗಿಯೂ ಪ್ರಾರಂಭಿಸುತ್ತೇವೆ. ನಿರ್ಭಯ ಯೋಜನೆಯಲ್ಲಿ 5 ಸಾವಿರ ಸಿಸಿ ಟಿವಿ ಅಳವಡಿಕೆಗೆ ತೀರ್ಮಾನ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಈ ಕಾರ್ಯಕ್ರಮದಡಿ ಕ್ರಮ ತೆಗೆದುಕೊಳ್ತೇವೆ.

  156 ಸರಕಾರಿ ಶಾಲೆ ಬಿಬಿಎಂಪಿಯಡಿ ನಡೆಯುತ್ತಿದೆ. ಈ ವ್ಯಾಪ್ತಿನಲ್ಲೇ 76 ಸರಕಾರಿ ಶಾಲೆಗಳಿವೆ. ಇದನ್ನೂ ಸಹ ಬಿಬಿಎಂಪಿಯೇ ನಡೆಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶಾಸಕರು ಸಲಹೆ‌ ನೀಡಿದ್ದಾರೆ.

  ಇಡೀ ಬೆಂಗಳೂರಿನಲ್ಲಿ ಎಲ್‌ಇಡಿ ಬಲ್ಡ್ ಹಾಕಲು ಯೋಜನೆ ಸಿದ್ಧವಾಗಿದೆ. ಮೆಟ್ರೋ, ಬಿಡಬ್ಲ್ಯೂಎಸ್‌ಎಸ್‌ಬಿ ಹೊರತು ಪಡಿಸ 10 ಸಾವಿರ ಕೋಟ ರೂ.. ಹಣವನ್ನ ಬಿಬಿಎಂಪಿಗೆ ಸರಕಾರ ಬಜೆಟ್ ಅನುಮೋದಿಸಿ ಕೊಟ್ಟಿದೆ ಎಂದರು.

  ಮುಂದಿನ ವಾರದಿಂದ 28ಕ್ಷೇತ್ರಗಳಿಗೂ ಸಿಟಿ ರೌಂಡ್ ತೆರಳಲಿದ್ದೇನೆ. ಜನರ ಹಾಗೂ ಶಾಸಕರ ಸಮಸ್ಯೆ ಆಲಿಸಲು ತೀರ್ಮಾನಿಸಿದ್ದೇನೆ. ದಿನಕ್ಕೆ ಮೂರು ನಾಲ್ಕು ಕ್ಷೇತ್ರಕ್ಕೆ ಭೇಟಿ ನೀಡಲಿದ್ದೇನೆ. ಬಿ.ಎಸ್. ಪಾಟೀಲ್ ಅವರು ಐದು ಭಾಗ ಮಾಡಲು ಸಲಹೆ‌ ನೀಡಿದ್ದಾರೆ. ಆದರೆ‌ ನಾವು ಪ್ರತ್ಯೇಕ ಕಾನೂನು ತರುತ್ತಿದ್ದೇವೆ. ಈಗಷ್ಟೇ ಸಲಹೆ ಬಂದಿದೆ. ಮುಂದೆ ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಬಿಎಂಪಿ ವಿಭಜನೆ ಸಂಬಂಧ ಈಗಷ್ಟೇ ಶಿಫಾರಸು ಬಂದಿದೆ. ಸರಕಾರ ಅದನ್ನು ಪರಿಶೀಲನೆ ಮಾಡಲಿದೆ.

  ಇನ್ನು, ರಸ್ತೆ ಗುಂಡಿಗಳ ಶಾಶ್ವತ ಪರಿಹಾರಕ್ಕೆ ಟೆಂಡರ್‌ಶ್ಯೂರ್ ಕಾರ್ಯಕ್ರಮ ತಂದಿದ್ದೇವೆ. ಇದರಿಂದ ಮುಂದಿನ‌ದಿನಗಳಲ್ಲಿ ಸಮಸ್ಯೆ ನೀಗಲಿದೆ. ಪೌರಕಾರ್ಮಿಕರ ಹಣ ಆಯಾ ಸಂದರ್ಭದಲ್ಲಿ ಕೊಡಲು ಅಧಿಕಾರಿಗಳಿಗೆ ಹೇಳಿದ್ದೇವೆ. ರಾಜಕಾಲುವೆಯಲ್ಲಿ ಹೂಳು ತೆಗೆಯಲು, ಬಫರ್‌ಜೋನ್ ಮಾಡಲು ಅಧಿಕಾರಿಗಳಿಗೆ ಸೂಚನೆ‌ ನೀಡಿದ್ದೇವೆ. ರಾಜಕಾಲುವೆ ಸರ್ವೆ ಆಗುತ್ತಿದೆ. ತೆರವು ಕೆಲಸ ಮುಂದಿನ ದಿನದಲ್ಲಿ ಆಗತ್ತದೆ ಎಂದು ತಿಳಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Deputy chief minister Dr. G. Parameshwar haa said that he has given instructions to officials to complete work of installation of OFC and curb illegal cable wire on the ground. He was talking to reporters after having meeting with Bengaluru MLAs.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more