ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 10 ಕೆರೆಗೆ ಕೊಳಚೆ ನೀರು: ಡಿಸಿ ಶಂಕರ್ ಮಾಹಿತಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನ 10ಕೆರೆಗಳಿಗೆ ಕಲುಷಿತ ನೀರು ಸೇರುತ್ತಿದೆ ಎಂದು ಬೆಂಗಳೂರು ಡಿಸಿ ವಿಜಯ್ ಶಂಕರ್ ಮಾಹಿತಿ ನೀಡಿದ್ದಾರೆ.

ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದ ಸಂದರ್ಭ ಈ ಮಾಹಿತಿಯನ್ನು ನೀಡಿದ್ದು, ಕೆರೆಗಳಿಗೆ ಕಲುಷಿತ ನೀರು ಸೇರುತ್ತಿದ್ದು, ಜಲಚರಗಳು ಸಂಪೂರ್ಣವಾಗಿ ಸಾವನ್ನಪ್ಪುತ್ತಿವೆ, ಜತೆಗೆ ಸುತ್ತಮುತ್ತಲಿನ ಜನತೆಗೂ ಇದು ಅಪಾಯಕಾರಿಯಾಗಿದೆ ಎಂದಿದ್ದಾರೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಎರಡು ಬಾರಿ ಸಭೆ ಕರೆಯಲಾಗಿದೆ.

ಸೆಪ್ಟಿಕ್ ಟ್ಯಾಂಕ್‌ನಂತೆ ಬೆಳ್ಳಂದೂರು ಕೆರೆ ಬಳಕೆ: ಆಯೋಗ ವರದಿ ಸೆಪ್ಟಿಕ್ ಟ್ಯಾಂಕ್‌ನಂತೆ ಬೆಳ್ಳಂದೂರು ಕೆರೆ ಬಳಕೆ: ಆಯೋಗ ವರದಿ

ಮಾರ್ಕಿಂಗ್ ಮಾಡಿರೋ ಜಾಗವನ್ನು ಸ್ಥಳೀಯರು ಅಳಿಸುತ್ತಿದ್ದಾರೆ, ಒತ್ತುವರಿ ಮುಗಿಯುವವರೆಗೂ ಸರ್ವೆಯವರು ಜೊತೆಯಲ್ಲೇ ಇರಲಿ ಎಂದು ಸೂಚಿಸಲಾಗಿದೆ. ತೆರವು ಕಾರ್ಯಾಚರಣೆ ಶೀಘ್ರ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

DC reveals drain water flowing into 10 lakes in Bengaluru

ಬೆಳ್ಳಂದೂರು ಕೆರೆ: ಸಿದ್ದರಾಮಯ್ಯ ವಿರುದ್ಧ ರಾಜೀವ್ ಚಂದ್ರಶೇಖರ್ ಟೀಕೆ ಬೆಳ್ಳಂದೂರು ಕೆರೆ: ಸಿದ್ದರಾಮಯ್ಯ ವಿರುದ್ಧ ರಾಜೀವ್ ಚಂದ್ರಶೇಖರ್ ಟೀಕೆ

ಬೆಳ್ಳಂದೂರು ಹಾಗೂ ವರ್ತೂರು ಕೆರೆಯಲ್ಲಿ ಕಾರ್ಖಾನೆಗಳಿಂದ ಬರುವ ನೀರು ಸೇರಿ ಅಲ್ಲಿರುವ ಜಲಚರಗಳು ಸಾವನ್ನಪ್ಪುವಂತೆ ಮಾಡುತ್ತಿದೆ. ಅದರ ಜತೆಗೆ ನೊರೆ ಉತ್ಪತ್ತಿಯಾಗುತ್ತಿದ್ದು ಅಲ್ಲಿನ ಜನತೆ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದ್ದರೆ ಎಲ್ಲಾ ಕೆರೆಗಳನ್ನು ಶುದ್ಧಗೊಳಸಿಉವ ಅಗತ್ಯವಿದೆ ಎಂದು ಹೇಳಿದರು.

English summary
Bengaluru urban deputy commissioner Vijay Shankar has revealed that the drain water is flowing into 10 lakes in the city and action will be taken soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X