ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1000 ಸ್ಮಾರ್ಟ್ ಕಾರ್ಡ್, 47 ಸಾವಿರ ಜನ... ಇದು ಮೆಟ್ರೋ ಮಹಿಮೆ!

|
Google Oneindia Kannada News

ಬೆಂಗಳೂರು, ಜೂನ್ 19: ಸದ್ಯಕ್ಕೆ ಬೆಂಗಳೂರಿನ ಜನರ ಬಾಯಲ್ಲಿ ಮೆಟ್ರೋದ್ದೇ ಜಪ! ಜೂನ್ 17 ರಂದು ಉದ್ಘಾಟನೆಗೊಂಡ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗಿನ ನಮ್ಮ ಮೆಟ್ರೋ ಗ್ರೀನ್ ಲೈನ್, ಜೂನ್ 18 ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿತ್ತು. ಮೊಟ್ಟ ಮೊದಲ ಬಾರಿಗೆ ಈ ಹಾದಿಯಲ್ಲಿ ಪ್ರಯಾಣಿಸುವುದಕ್ಕಾಗಿ ನಿನ್ನೆ (ಜೂನ್ 18) ಹಲವು ಮೆಟ್ರೋ ನಿಲ್ದಾಣಗಳಲ್ಲಿ ಜನಜಾತ್ರೆಯೇ ನೆರೆದಿತ್ತು.

ವೈರಲ್ ಆಯ್ತು ಮುಂಗಾರು ಮಳೆಯೇ ಧಾಟಿಯ ನಮ್ಮ ಮೆಟ್ರೋ ಹಾಡುವೈರಲ್ ಆಯ್ತು ಮುಂಗಾರು ಮಳೆಯೇ ಧಾಟಿಯ ನಮ್ಮ ಮೆಟ್ರೋ ಹಾಡು

ಭಾನುವಾರ ಬೇರೆ! ಭಾರತ-ಪಾಕಿಸ್ತಾನ ಪಂದ್ಯದ ಹಣೆಬರಹವನ್ನು ಮೊದಲೇ ಊಹಿಸಿದ್ದ ಜನರೆಲ್ಲ, ಟಿವಿ ಮುಂದೆ ಕೂತು ಕಾಲಹರಣ ಮಾಡೋದು ಬೇಡ ಅಂತ ಮೆಟ್ರೋ ಪ್ರಯಾಣದ ಅನುಭವ ಪಡೆಯುವುದಕ್ಕೆ ಹೊರಟಿದ್ದರು.

ಅಪರಾಹ್ನ 4 ಗಂಟೆಗೆ ಕನಕಪುರ ರಸ್ತೆಯ ಯಲಚೇನಹಳ್ಳಿಯಿಂದ ಹೊರಟ ಮೊದಲ ಮೆಟ್ರೋ ರೈಲಿನಲ್ಲಿ ಹೆಚ್ಚು ಜನ ಕಂಡುರಲಿಲ್ಲವಾದರೂ, ನಂತರದ ಎಲ್ಲಾ ರೈಲುಗಳಲ್ಲೂ ತುಂಬಿ ತುಳುಕುತ್ತಿದ್ದ ಜನರು, ಬೆಂಗಳೂರಿಗರ ಮೆಟ್ರೋ ಪ್ರೇಮವನ್ನು ಪ್ರತಿನಿಧಿಸುತ್ತಿದ್ದರು. ನಿನ್ನೆ ಒಂದೇ ದಿನ 47 ಸಾವಿರಕ್ಕೂ ಹೆಚ್ಚು ಜನ ಈ ಮಾರ್ಗದಲ್ಲಿ ಸಂಚರಿಸಿದ್ದು, ಈ ಭಾಗಕ್ಕೆ ಮೆಟ್ರೋ ಅಗತ್ಯವೆಷ್ಟಿತ್ತು ಅನ್ನುವುದಕ್ಕೆ ಸಾಕ್ಷಿ.

ನಮ್ಮ ಮೆಟ್ರೋ ಟಿಕೆಟ್ ದರ ಜೂನ್ 19 ರಿಂದ ಹೆಚ್ಚಳನಮ್ಮ ಮೆಟ್ರೋ ಟಿಕೆಟ್ ದರ ಜೂನ್ 19 ರಿಂದ ಹೆಚ್ಚಳ

ಈಗಿನ್ನೂ ಮೆಟ್ರೋ ಕಾರ್ಯಾರಂಭಮಾಡಿದ್ದು, ಕೆಲವೇ ತಿಂಗಳುಗಳಲ್ಲಿ ಈ ಭಾಗದ ಮೆಟ್ರೋ ಪ್ರಯಾಣಿಕರ ಸಂಖ್ಯೆ 3 ಲಕ್ಷವನ್ನು ಮೀರಬಹುದು ಎಂದು ಅಂದಾಜಿಸಲಾಗಿದೆ.

ಮೊದಲ ಮೆಟ್ರೋ ಪ್ರಯಾಣ!

ಮೊದಲ ಮೆಟ್ರೋ ಪ್ರಯಾಣ!

ಬೆಂಗಳೂರು ಉತ್ತರ -ದಕ್ಷಿಣವನ್ನು ಬೆಸೆಯುವ ನಾಗಸಂದ್ರದಿಂದ ಯಲಚೇನಹಳ್ಳಿ ವರೆಗಿನ 24.2 ಕಿ.ಮೀ. ಮಾರ್ಗದಲ್ಲಿ ಭಾನುವಾರ ಅಪರಾಹ್ನ 4 ರಿಂದ 9ರವರೆಗೆ ಓಡಿದ ಮೆಟ್ರೋ ಟ್ರೇನಿಲ್ಲಿ 47 ಸಾವಿರಕ್ಕೂ ಹೆಚ್ಚು ಜನ ಸಂಚರಿಸಿ ಹೊಸ ಮೆಟ್ರೋ ಮಾರ್ಗದ ಅನುಭವ ಪಡೆದರು.

ಸ್ಮಾರ್ಟ್ ಕಾರ್ಡ್ ಗೆ ಡಿಮ್ಯಾಂಡೋ ಡಿಮ್ಯಾಂಡು

ಸ್ಮಾರ್ಟ್ ಕಾರ್ಡ್ ಗೆ ಡಿಮ್ಯಾಂಡೋ ಡಿಮ್ಯಾಂಡು

ದಿನಂಪ್ರತಿ ಮೆಟ್ರೋ ಪ್ರಯಾಣ ಮಾಡುವವರು ಟೋಕನ್ ಗಾಗಿ ಕಾಯುವ ಕಷ್ಟವನ್ನು ತಪ್ಪಿಸುವುದಕ್ಕಾಗಿ ಬಿಎಂಆರ್ ಸಿ ಎಲ್ ಸ್ಮಾರ್ಟ್ ಕಾರ್ಡ್ ಅನ್ನು ಸಹ ಪರಿಚಯಿಸಿ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವನ್ನುಂಟುಮಾಡಿದೆ. ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗೆ ಸಂಚರಿಸುವುದಕ್ಕೆ ನಿನ್ನೆ (ಜೂನ್ 18) ಒಂದು ಸಾವಿರಕ್ಕೂ ಹೆಚ್ಚು ಜನ ಸ್ಮಾರ್ಟ್ ಕಾರ್ಡ್ ಖರೀದಿಸಿ ದಾಖಲೆ ಬರದರು. ಈ ಸ್ಮಾರ್ಟ್ ಕಾರ್ಡ್ ಬೆಲೆ 50 ರೂ. ಆಗಿದ್ದು, ನಂತರ 50 ರೂ. ನಿಂದ 1500 ರೂ.ವರೆಗೂ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಮೆಟ್ರೋ ಸ್ಟೇಶನ್ ನಲ್ಲಿ ಮಾತ್ರವಲ್ಲದೆ, ಬಿಎಂಆರ್ ಸಿಎಲ್ ವೆಬ್ ಸೈಟ್ ಮೂಲಕವೂ ಈ ಸ್ಮಾರ್ಟ್ ಕಾರ್ಡ್ ಪಡೆಯಬಹುದು.

ಸ್ಮಾರ್ಟ್ ಕಾರ್ಡ್ ಗೆ ಶೇ. 15 ರಿಯಾಯಿತಿ

ಸ್ಮಾರ್ಟ್ ಕಾರ್ಡ್ ಗೆ ಶೇ. 15 ರಿಯಾಯಿತಿ

ಸ್ಮಾರ್ಟ್ ಕಾರ್ಡ್ ಗೆ ಟೋಕನ್ ಗಿಂತ ಶೇ.15 ರಷ್ಟು ರಿಯಾಯಿತಿ ಸಹ ಇರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಕ್ಯಾಶ್ ಲೆಸ್ ಪದ್ಧತಿಗೆ ಪ್ರೋತ್ಸಾಹ ನೀಡುವ ಉದ್ದೇಶವೂ ಇದರ ಹಿಂದಿದೆ.

ಎಲ್ಲಾ ಸ್ಟೇಶನ್ ಗಳಲ್ಲೂ ಜನಜಾತ್ರೆ

ಎಲ್ಲಾ ಸ್ಟೇಶನ್ ಗಳಲ್ಲೂ ಜನಜಾತ್ರೆ

ಬೆಂಗಳೂರು ಉತ್ತರದ ನಾಗಸಂದ್ರ ದಿಂದ ದಕ್ಷಿಣದ ಯಲಚೇನಹಳ್ಳಿ ವರೆಗಿನ ಗ್ರೀನ್ ಲೈನ್ ಮಾರ್ಗದ ಒಟ್ಟು 24 ಸ್ಟೇಶನ್ ಗಳಲ್ಲೂ ಜನಜಂಗುಳಿ ಕಂಡುಬರುತ್ತಿದ್ದುದು ಸಾಮಾನ್ಯವಾಗಿತ್ತು. ಟೋಕನ್ ಖರೀದಿಸುವುದಕ್ಕೆಂದೇ ನೂರಾರು ಜನರು ಟಿಕೇಟ್ ಕೌಂಟರ್ ಬಳಿ ಸಾಲಿನಲ್ಲಿ ನಿಂತಿದ್ದುದು ಕಂಡುಬಂತು.

English summary
More than 47,000 people travelled by bengaluru Namma Metro greenline which is from nagasandra to yalachenahalli on June 18th. And more than 1000 people bought smart cards for future travels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X