ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತರಕಾರಿ ಲಾರಿಯಲ್ಲಿ ಪರಾರಿಯಾಗಿದ್ದ ಕೈದಿ ಸಿಕ್ಕಿಬಿದ್ದ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 03 : ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಿದ್ದ ಕೈದಿ ಡೇವಿಡ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 31ರಂದು ತರಕಾರಿ ವಾಹನದಲ್ಲಿ ಕುಳಿತು ಡೇವಿಡ್ ಪರಾಗಿಯಾಗಿದ್ದ.

ಕೈದಿ ಡೇವಿಡ್ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಶನಿವಾರ ಸಂಜಯನಗರದ ಜಗ್ಗನಹಳ್ಳಿಯಲ್ಲಿದ್ದ ತನ್ನ ಅಜ್ಜಿಯನ್ನು ನೋಡಲು ಡೇವಿಡ್ ಬರುವ ಬಗ್ಗೆ ಪೊಲೀಸರಿಗೆ ಖಚಿತವಾದ ಮಾಹಿತಿ ಸಿಕ್ಕಿತ್ತು.[ಪರಪ್ಪನ ಅಗ್ರಹಾರ : ತರಕಾರಿ ವಾಹನದಲ್ಲಿ ಕೈದಿ ಪರಾರಿ!]

Parappana Agrahara

ಬೆಂಗಳೂರು-ಬಳ್ಳಾರಿ ರಸ್ತೆಯ ಬಾರ್‌ ಮುಂದೆ ಅನಾಮಿಕ ನಂತೆ ಕುಳಿತಿದ್ದ ಡೇವಿಡ್ ಬಂಧಿಸಲು ಪೊಲೀಸರು ತೆರಳಿದಾಗ ಆತ ಓಡಲು ಆರಂಭಿಸಿದ. ಪೊಲೀಸರು ಆತನನ್ನು ಅಟ್ಟಿಸಿಕೊಂಡು ಹೋದರು. ಓಡಿ ಓಡಿ ಸುಸ್ತಾದ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.[ಸೈಕೋ ಜೈಶಂಕರ್ ಸೆರೆಸಿಕ್ಕಿದ್ದು ಹೇಗೆ?]

ಬೆಂಗಳೂರಿನ ದೇವನಹಳ್ಳಿ ಮೂಲದ ಡೇವಿಡ್ ಮನೆಗಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ. ಕಳೆದ ಮೂರು ವರ್ಷದಿಂದ ಸೆರೆವಾಸದಲ್ಲಿದ್ದ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಆತನಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.[ಕೈದಿಗಳ ಬಿಡುಗಡೆಗೆ ಹೊಸ ಮಾರ್ಗಸೂಚಿ]

ಗೋಣಿಚೀಲದಲ್ಲಿ ಕುಳಿತಿದ್ದ : ಆಗಸ್ಟ್ 31ರಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಜೈಲಿಗೆ ತರಕಾರಿ ಲಾರಿ ಬಂಧಿತ್ತು. ತರಕಾರಿ ಇಳಿಸಿದ ವ್ಯಾನ್‌ನಲ್ಲಿ ಸಿಕ್ಕಿ ಗೋಣಿ ಚೀಲದಲ್ಲಿ ಕುಳಿತು ಡೇವಿಡ್ ಪರಾರಿಯಾಗಿದ್ದ.

English summary
Bengaluru police arrested David on Saturday, September 3, 2016 at Sanjay Nagar, Bengaluru. David escaped from Parappana Agrahara jail on August 31 morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X