ಗರ್ಭಪಾತ, ಮಗಳ ಆರೋಪಕ್ಕೆ ಇಬ್ರಾಹಿಂ ಉತ್ತರವೇನು?

Posted By:
Subscribe to Oneindia Kannada

ಬೆಂಗಳೂರು, ಜನವರಿ 6: ನಮ್ಮ ತಂದೆಯೇ ತನಗೆ ಜೂಸಿನಲ್ಲಿ ಏನೋ ಹಾಕಿ ಕುಡಿಸಿ ಗರ್ಭಪಾತ ಮಾಡಿಸಿದ್ದಾರೆ ಎಂದು ಇಬ್ರಾಹಿಂ ಮಗಳು ಇಫಾ ಮಾಡಿದ್ದ ಆರೋಪಕ್ಕೆ ಶುಕ್ರವಾರ ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಇಬ್ರಾಹಿಂ ಮತನಾಡಿ ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು ಮಗಳೇ ಹೀಗೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾಳೆ ಮುಂದೆ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು.[ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಮಗಳ ಗರ್ಭಪಾತ ಮಾಡಿಸಿದರಾ?]

dauther Abortion case what is the reaction of CM Ibrahim

ಶೀಕೃಷ್ಣನ ವಿರುದ್ಧವೂ ಆರೋಪಗಳು ಕೇಳಿಬಂದಿದ್ದವು. ಒಳ್ಳೆಯವರ ಬಗ್ಗೆ ಆರೋಪಗಳು ಜನರು ಮಾಡುತ್ತಲೇ ಇರುತ್ತಾರೆ. ನ್ಯಾಯಾಲಯದಲ್ಲಿ ಒಳ್ಳೆಯ ತೀರ್ಪು ಬರದೇ ಇರಬಹುದು ಆದರೆ ದೇವರ ನ್ಯಾಯಾಲಯದಲ್ಲಿ ಸರಿಯಾದ ನ್ಯಾಯ ದೊರೆತೇ ದೊರೆಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ನಾಲ್ಕುವರೆ ತಿಂಗಳ ಗರ್ಭಿಣಿ ಇಫಾ ತವರು ಮನೆಗೆ ಬಂದಾಗ ಹಣ್ಣಿನ ರಸದಲ್ಲಿ ಗರ್ಭಪಾತದ ಮಾತ್ರೆಯನ್ನು ಸೇರಿಸಿ ಕುಡಿಸಿ ತನಗೆ ಗರ್ಭಪಾತ ಮಾಡಿಸಿದ್ದಾರೆ ಎಂದು ಸ್ವತಃ ಸಿಎಂ ಇಬ್ರಾಹಿಂ ಅವರ ಮಗಳೇ ಆರೋಪಿಸಿ ಮಾಧ್ಯಮದ ಮುಂದೆ ಆಳಲನ್ನು ತೋಡಿಕೊಂಡಿದ್ದರು. ಅಲ್ಲದೆ ತನ್ನ ಪತಿಯ ವಿರುದ್ಧ ತಂದೆಗೆ ಅಸಮಾಧಾನವಿರುವುದನ್ನು ಹೇಳಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka planning board deputy chairman CM Ibrahim has been accused of forcing his daughter to have an abortion,what is the reaction of CM Ibrahim.
Please Wait while comments are loading...