ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶಾದ್ಯಂತ ನವರಾತ್ರಿ ಮೊದಲ ದಿನ ಭಕ್ತರ ಸಂಭ್ರಮ

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 13 : ದೇಶಾದ್ಯಂತ ನವರಾತ್ರಿ ಸಂಭ್ರಮ ಮುಗಿಲುಮುಟ್ಟಿದೆ. ಅಕ್ಟೋಬರ್ 13ರ ಮಂಗಳವಾರದಂದು ನವರಾತ್ರಿ ಸಡಗರ ಆರಂಭವಾಗಿದ್ದು, ಅಕ್ಟೋಬರ್ 23ರವರೆಗೆ ಹಬ್ಬ ನಾಡಿನಾದ್ಯಂತ ಕಳೆಗಟ್ಟಲಿದೆ.

ಮೈಸೂರಿನ ದಸರಾಕ್ಕೆ ವಿಜೃಂಭಣೆ ಚಾಲನೆ ದೊರೆತಿದ್ದು, ಪ್ರಗತಿಪರ ರೈತ ಪುಟ್ಟಯ್ಯ ದಸರಾಕ್ಕೆ ಚಾಲನೆ ನೀಡಿದ್ದಾರೆ. ಕರಾದ್ ರಾಂಚಿ ಕಾತ್ರಾ ದೇಶದ ಹಲವಾರು ಭಾಗಗಳಲಲ್ಇ ರೈತರು ಬಹಳ ಚೈತನ್ಯಭರಿತವಾಗಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.[ಸಿಂಹಾಸನವೇರಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್]

ನವರಾತ್ರಿ ನಾಡಿನಾದ್ಯಂತ ಒಂಭತ್ತು ದಿನಗಳ ಕಾಲ ನಡೆಯಲಿದ್ದು, ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ರಕ್ಷಿಸಿದ್ದಾಳೆ. ನವರಾತ್ರಿ ಒಂದೊಮದು ದಿನವೂ ಬಹಳ ವಿಶೇಷವಾಗಿದ್ದು ನಿಲ್ಲುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ.

ಏಳನೇ ದಿನ ಅಂದರೆ ಸಪ್ತಮಿಯಿಂದ ಮೂರುದಿನ ದುರ್ಗಾಪೂಜಾ ಮಾಡಲಾಗುತ್ತದೆ. ಅಂದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ಸಪ್ತಮಿ ಮೂಲ ನಕ್ಷತ್ರದಂದು ಪುಸ್ತಕ, ಪವಿತ್ರಗಂಥಗಳನ್ನು, ಚಿನ್ನ, ಬೆಳ್ಳಿ ಪೂಜೆಗೆ ಇಡಲಾಗುತ್ತದೆ.

ನವಮಿಯಂದು ಆಯುಧಗಳನ್ನು ಪೂಜೆ ಮಾಡಲಾಗುತ್ತದೆ. ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸನನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ಇದು ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನನ್ನು ಕೊಂದ ದಿನ ಹಾಗೂ ದ್ವಾಪರ ಯುಗದಲ್ಲಿ ಪಾಂಡವರು ಕೌರವರನ್ನು ಸೋಲಿಸಿದ ದಿನವೂ ಹೌದು. ಆದ್ದರಿಂದ ಈ ವಿಜಯದ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ.[ಮೈಸೂರು ದಸರಾ ಉದ್ಘಾಟಿಸಿದ ರೈತ ಪುಟ್ಟಯ್ಯ]

ದೇವಿಗೆ ಡೊಳ್ಳುದನಿ

ದೇವಿಗೆ ಡೊಳ್ಳುದನಿ

ದಸರಾ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ಕಲಾವಿದರು ತಮ್ಮ ಡೊಳ್ಳುದನಿಯನ್ನು, ಅವರ ಪ್ರತಿಭಾ ಪ್ರದರ್ಶನಕ್ಕೆ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ದಸರಾ ಇವರ ಡೊಳ್ಳುನಾದದಿಂದ ಕಳೆಗಟ್ಟಿದೆ.

ಬಾರಮ್ಮ ತಾಯಿ

ಬಾರಮ್ಮ ತಾಯಿ

ಮಹಾರಾಷ್ಟ್ರದ ಕರಾದ್ ನಲ್ಲಿ ದೇವಿ ದುರ್ಗೆಯನ್ನು ಟ್ಯಾಕ್ಟರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದು, ಆಕೆ ದಸರಾ ಮುಗಿಯುವವರೆಗೆ ಭಕ್ತರ ಮನೆಯಲ್ಲಿ ನೆಲೆ ಕಂಡುಕೊಳ್ಳಲಿದ್ದಾಳೆ.

ನೇಪಾಳಿ ಭಕ್ತರ ಭಕ್ತಿ

ನೇಪಾಳಿ ಭಕ್ತರ ಭಕ್ತಿ

ರಾಂಚಿಯಲ್ಲಿ ನೇಪಾಳಿ ಮಹಿಳಾ ಭಕ್ತರು ಮೊದಲ ದಿನ ದುರ್ಗಾಪೂಜೆ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಭಕ್ತರ ಸೇವೆಯೇ ದೇವರ ಸೇವೆ

ಭಕ್ತರ ಸೇವೆಯೇ ದೇವರ ಸೇವೆ

ಜಮ್ಮು ಕಾಶ್ಮೀರದ ಖಾತ್ರಾದಲ್ಲಿ ನವರಾತ್ರಿ ಸಂಭ್ರಮ ಹದಗೆಡಬಾರದು. ಅವಘಡಗಳಿಗೆ ಭಕ್ತರು ಸಿಲುಕಬಾರದೆಂದು ಪೊಲೀಸರು ಸುತ್ತಮುತ್ತಲೂ ನಾಡನ್ನು ಕಾದರು.

ಒಳ್ಳೆಯದು ಮಾಡು ತಾಯಿ

ಒಳ್ಳೆಯದು ಮಾಡು ತಾಯಿ

ಅಲಹಾಬಾದ್ ನಲ್ಲಿ ನವರಾತ್ರಿ ಹಬ್ಬದ ಮೊದಲ ದಿನ ದೇವಿ ಅಲ್ಪೋಶಂಕರಿಯ ಪೂಜೆಯಲ್ಲಿ ತೊಡಗಿ ದೇವರ ಕೃಪೆಗೆ ಪಾತ್ರರಾದರು.

English summary
Dasara festival starts in all over India,on Tuesday, October 13th. Devotees offering prayers to Goddess Alopsankari on the occasion of navratri festival at Alopidevi temple in Allahabad. Nepalee devotees offer prayers on the first day of Durga Puja in Ranchi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X