• search

ಯೂನಿವರ್ಸಲ್ ಸ್ಟಾರ್ ಕಮಲ್ ಜತೆ ಸೂಪರ್ ಕಾಪ್ ರೂಪಾ!

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಡಿ ಐ ಜಿ ರೂಪ ಡಿ ಮೌದ್ಗೀಲ್ ಜೊತೆ ನಟ ಕಮಲ್ ಹಾಸನ್ | ವೈರಲ್ ಫೋಟೋ | Oneindia Kannada

    ಬೆಂಗಳೂರು, ನವೆಂಬರ್ 27: ರಾಜಕೀಯ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿರುವ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರನ್ನು ಇತ್ತೀಚೆಗೆ ಕರ್ನಾಟಕದ ಸೂಪರ್ ಕಾಪ್ ರೂಪಾ ಡಿ ಮೌದ್ಗೀಲ್ ಅವರು ಭೇಟಿ ಮಾಡಿದ್ದಾರೆ. ಕಮಲ್ ಜತೆಗಿನ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಅನ್ಯಾಯ ಬಗ್ಗೆ ಟ್ವೀಟ್ ಮಾಡಿದ ಡಿ ರೂಪಾಗೆ ಭಾರಿ ಬೆಂಬಲ

    ಆದರೆ, ಈ ಫೋಟೋ ನೋಡಿ ಹಲವಾರು ಮಂದಿಯ ಹುಬ್ಬೇರಿದೆ. ಕಮಲ್ ಜತೆ ಫೋಟೋ ಏಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ನಿಮ್ಮನ್ನು ಅನ್ ಫಾಲೋ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ರೂಪಾ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.

    ಜೈಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾಗೆ ವರ್ಗಾವಣೆ ಶಿಕ್ಷೆ

    ಸಾರ್ವಜನಿಕರ ಟೀಕೆಗಳು ಟ್ವೀಟ್ ರೂಪದಲ್ಲಿ ಹರಿದು ಬರತೊಡಿದಾಗ ಇದಕ್ಕೆ ರೂಪಾ ಅವರು ಪ್ರತ್ಯುತ್ತರ ನೀಡಿದ್ದಾರೆ. ಮಾನವ ಸಂಘ ಜೀವಿ, ಸಾಮಾಜಿಕ ಜಾಲ ತಾಣಗಳಲ್ಲಿ ವಿಹರಿಸುವಾಗ, ವ್ಯವಹರಿಸುವಾಗ, ಪ್ರತಿಕ್ರಿಯಿಸುವಾಗ ಸಾಮಾಜಿಕ ಬದ್ಧತೆ, ಜವಾಬ್ದಾರಿ ಹೊಂದಿರಬೇಕು, ಕಮಲ್ ಅವರೊಟ್ಟಿಗೆ ತೆಗೆಸಿಕೊಂಡ ಫೋಟೋ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದು ತಿಳಿ ಹೇಳಿದ್ದಾರೆ.

    ರೂಪಾ ಅವರ ಪ್ರತಿಕ್ರಿಯೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೂಪಾ ಅವರ ಟ್ವೀಟ್ ಹಾಗೂ ಪ್ರತಿಕ್ರಿಯೆಗಳತ್ತ ಒಂದು ನೋಟ ಇಲ್ಲಿದೆ...

    ಕಮಲ್ ಹಾಸನ್ ಜತೆ ಫೋಟೋ ಬಗ್ಗೆ ಚರ್ಚೆ

    ಕಮಲ್ ಹಾಸನ್ ಜತೆ ಫೋಟೋ ಬಗ್ಗೆ ಚರ್ಚೆ

    ಕಾರಾಗೃಹ ಡಿಐಜಿಯಾಗಿದ್ದ ಡಿ ರೂಪಾ ಅವರನ್ನು ಟ್ರಾಫಿಕ್ ಇಲಾಖೆ ಡಿಐಜಿಯಾಗಿ ವರ್ಗಾವಣೆಯಾಗಿ ನಾಲ್ಕೈದು ತಿಂಗಳುಗಳು ಕಳೆದಿವೆ. ರೂಪಾ ಅವರು ತಮ್ಮ ಟ್ವಿಟ್ಟರ್ ಮೂಲಕ ಟ್ರಾಫಿಕ್ ಸಮಸ್ಯೆ ಬಗ್ಗೆ, ಜಾಗೃತಿ ಮೂಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಸಮ್ಮೇಳನವೊಂದಕ್ಕೆ ಹೋಗಿದ್ದಾಗ ನಟ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿದ್ದನ್ನು ಹಂಚಿಕೊಂಡಿದ್ದಾರೆ.

    ರೂಪಾ ಅವರು ಟ್ವೀಟ್ ಮಾಡಿದ್ದು ಹೀಗೆ

    ನನ್ನ ಎಲ್ಲಾ ತಮಿಳು ನಾಡಿನ ಅಭಿಮಾನಿಗಳಿಗೆ, ವೈವಿಧ್ಯಮಯ ನಟ, ನಿರ್ದೇಶಕ ಕಮಲ್ ಹಾಸನ್ ರನ್ನು ನಾನು ಭೇಟಿಯಾದೆ ಎಂದು ಟೈಮ್ ಲಿಟ್ರೇಚರ್ ಫೆಸ್ಟಿವಲ್ ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಆದರೆ, ಸಾರ್ವಜನಿಕರಲ್ಲಿ ಅನೇಕರು ಈ ಭೇಟಿ ಹಿಂದಿನ ಉದ್ದೇಶ ಏನಿರಬಹುದು ಎಂಬುದರ ಬಗ್ಗೆ ಅನೇಕ ರೀತಿಗಳಲ್ಲಿ ಚರ್ಚಿಸತೊಡಗಿದ್ದಾರೆ. ರಾಜಕೀಯ ಅಥವಾ ಸಿನಿಮಾಕ್ಕೆ ರೂಪಾ ಅವರು ಎಂಟ್ರಿ ಕೊಡುತ್ತಾರಾ? ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

    ಮೇಡಂ ತುಂಬಾ ಚೆನ್ನಾಗಿ ಕಾಣುತ್ತೀರಿ

    ಸುರಸುಂದರಾಂಗ ಕಮಲ್ ಹಾಸನ್ ಗಿಂತ ಚೆನ್ನಾಗಿ ಕಾಣುತ್ತಿದ್ದೀರಿ ಮೇಡಂ, ಬೋಲ್ಡ್ ಅಂಡ್ ಬ್ಯೂಟಿಫುಲ್ ಎಂಬ ವಾಕ್ಯಕ್ಕೆ ಅನ್ವರ್ಥವಾಗುವಂಥ ಲೇಡಿ ಪೊಲೀಸ್ ಆಫೀಸರ್ ನಾನು ನೋಡುತ್ತಿದ್ದೇನೆ, ನಿಮಗೆ ಶುಭವಾಗಲಿ ಎಂದು ಅಭಿಮಾನಿಯೊಬ್ಬರು ಹಾರೈಸಿದ್ದಾರೆ.

    ಫೋಟೋ ಬಗ್ಗೆ ಸ್ಪಷ್ಟನೆ ಟ್ವೀಟ್ ಮಾಡಿದ ರೂಪಾ

    ಕಮಲ್ ಹಾಸನ್ ಜತೆಗಿನ ಫೋಟೋ ಬಗ್ಗೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿರುವ ರೂಪಾ,

    ನಾನು ಯಾರನ್ನಾದರೂ ಭೇಟಿ ಮಾಡಿದೆ, ಜತೆಗೆ ಫೋಟೋ ತೆಗೆಸಿಕೊಂಡೆ ಎಂದ ಮಾತ್ರಕ್ಕೆ ನಾನು ಅವರ ತತ್ತ್ವ ಸಿದ್ಧಾಂತಕ್ಕೆ ಮಾರು ಹೋಗಿದ್ದೇನೆ ಎಂದರ್ಥವಲ್ಲ. ನಾನು ನನ್ನ ವೃತ್ತಿಗೆ, ಸಿದ್ಧಾಂತಕ್ಕೆ ಬದ್ಧಳಾಗಿದ್ದೇನೆ, ಮಾನವ ಸಂಘಜೀವಿ, ಸಮಾಜದಲ್ಲಿ ಎಲ್ಲಾ ಸ್ತರದ ಎಲ್ಲಾ ಬಗೆಯ ಜನರನ್ನು ನಾವು ಭೇಟಿಯಾಗುತ್ತಿರುತ್ತೇವೆ ಆದರೆ, ನಮ್ಮತನ ನಾವು ಉಳಿಸಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

    ಅನ್ ಫಾಲೋ ಮಾಡಿದ ವ್ಯಕ್ತಿ ಬದಲಾದ

    ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡಿರುವ ಕಮಲ್ ಅವರನ್ನು ನೀವು ಭೇಟಿ ಮಾಡಿದ್ದಕ್ಕೆ ನಾನು ನಿಮ್ಮನ್ನು ಅನ್ ಫಾಲೋ ಮಾಡುತ್ತೇನೆ ಎಂದು ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ್ದರು. ರೂಪಾ ಅವರ ಸ್ಪಷ್ಟನೆ ಟ್ವೀಟ್ ನೋಡಿದ ಮೇಲೆ ತನ್ನ ತಪ್ಪಿನ ಅರಿವಾಗಿ, ಕ್ಷಮೆ ಕೋರಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    D Roopa- Traffic department DIG of police and post of Commissioner for traffic and road safety shares a photo taken with Universal Star Kamal Haasan. Twitterati abuzz with many reactions and Roopa has clarified about it.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more