ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ತಲೆನೋವಿನ ನಡುವೆಯೂ ಅಧಿಕಾರಿಗಳ ಸಭೆ ನಡೆಸಿದ ಡಿಕೆಶಿ

By Manjunatha
|
Google Oneindia Kannada News

ಬೆಂಗಳೂರು, ಜೂನ್ 20: ಐಟಿ ರೇಡ್‌, ಐಟಿ ಇಲಾಖೆ ಸಮನ್ಸ್, ಡೈರಿ ಪತ್ತೆ ಆರೋಪ ಇನ್ನೂ ಹಲವು ತಲೆನೋವುಗಳ ನಡುವೆಯೂ ನೀರಾವರಿ ಹಾಗೂ ಉನ್ನತ ವೈದ್ಯಕೀಯ ಸಚಿವ ಡಿಕೆ ಶಿವಕುಮಾರ್ ಅವರು ಇಂದು ಅಧಿಕಾರಿಗಳ ಸಭೆ ನಡೆಸಿದರು.

ವಿಧಾನಸೌಧದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯ ಪುರ್ವಭಾವಿ ಸಭೆ ನಡೆಸಿದ ಡಿ.ಕೆ.ಶಿವಕುಮಾರ್‌ ಅವರು ಕೆಂಪೇಗೌಡ ಜಯಂತಿ ಆಚರಣೆ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನಿಡಿದರು.

ನನ್ನ ಬಳಿಯೂ ಸಾಕಷ್ಟು ಡೈರಿಗಳಿವೆ,ಈಗ ಓಪನ್ ಮಾಡಲ್ಲ : ಡಿಕೆಶಿನನ್ನ ಬಳಿಯೂ ಸಾಕಷ್ಟು ಡೈರಿಗಳಿವೆ,ಈಗ ಓಪನ್ ಮಾಡಲ್ಲ : ಡಿಕೆಶಿ

ಎಲ್ಲಾ ಕಾರ್ಪೊರೇಟರ್‌ಗಳು ಕೆಂಪೇಗೌಡ ಜಯಂತಿ ಆಚರಣೆಗೆ ಸ್ವಪ್ರೇರಿತವಾಗಿ ಹಣ ನೀಡಲು ಮುಂದೆ ಬಂದಿದ್ದಾರೆ ಹಾಗಾಗಿ ಅದ್ಧೂರಿಯಾಗಿ ಜಯಂತಿ ಆಚರಣೆ ಮಾಡಬೇಕು ಎಂದು ಅವರು ಸೂಚಿಸಿದರು.

D.K.Shivakumar did meeting with officers regarding Kempegowda jayanthi

ಬೆಂಗಳೂರಿನ ನಾಲ್ಕು ಗಡಿ ಗೋಪುರಗಳಿಂದ ಬರುವ ಮೆರವಣಿಗೆ ಸ್ವಾತಂತ್ರ್ಯ ಉದ್ಯಾನವನವನದಲ್ಲಿ ಒಟ್ಟಾಗಿ ಆ ನಂತರ ಅರಮನೆ ಮೈದಾನದಲ್ಲಿ ಆಯೋಜಿತವಾಗುವ ವೇದಿಕೆ ಕಾರ್ಯಕ್ರಮಕ್ಕೆ ಬರುತ್ತದೆ ಎಂದು ಅವರು ಕಾರ್ಯಕ್ರಮದ ನೀಲ ನಕ್ಷೆ ವಿವರಿಸಿದರು.

ನಾಳೆಯಿಂದಲೇ ಕೆಂಪೇಗೌಡ ಜಯಂತಿಯ ಬಗ್ಗೆ ಜಾಹೀರಾತನ್ನು ನೀಡಬೇಕು. ಕಳೆದ ಬಾರಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದಾಗ ಸ್ಥಳದ ಅಭಾವ ಉಂಟಾಗಿತ್ತು ಹಾಗಾಗಿ ಈ ಬಾರಿ ಅರಮನೆ ಮೈದಾನದಲ್ಲಿ ಆಯೋಜಿಸುತ್ತಿದ್ದೇವೆ ಎಂದರು.

ವಿಕ್ಟೋರಿಯಾ ಆಸ್ಪತ್ರೆಗೆ ಡಿಕೆ ಶಿವಕುಮಾರ್ ದಿಢೀರ್ ಭೇಟಿವಿಕ್ಟೋರಿಯಾ ಆಸ್ಪತ್ರೆಗೆ ಡಿಕೆ ಶಿವಕುಮಾರ್ ದಿಢೀರ್ ಭೇಟಿ

ಕವಿ ದೊಡ್ಡರಂಗೇಗೌಡ ಮಾತನಾಡಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ದೊಡ್ಡ ಕೆಂಪೇಗೌಡರ ಮೂರ್ತಿ ಸ್ಥಾಪಿಸಬೇಕು, ವಿದ್ಯಾರ್ಥಿಗಳಿಗೆ ಕೆಂಪೇಗೌಡರ ಪರಿಚಯ ಪುಸ್ತಕ ನೀಡಬೇಕು, ಬೆಂಗಳೂರು ವಿವಿಗೆ ಕೆಂಪೇಗೌಡರ ಹೆಸರಿಡಬೇಕು ಎಂದು ಅವರು ಒತ್ತಾಯಿಸಿದರು.

English summary
Water resource and medical education minister D.K.Shivakumar did meeting with officers and many leader of Okkaliga community about forth coming Kempe Gowda jayanthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X