ಬೆಂಗಳೂರು: ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮಗು ಸಾವು

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: ನಗರದ ದಾಸರಹಳ್ಳಿಯಲ್ಲಿ ಎಲ್ ಪಿಜಿ ಸಿಲಿಂಡರ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮೂರು ವರ್ಷದ ಮಗು ದೇವಿಕಾ ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಸಿಲಿಂಡರ್ ಸ್ಫೋಟ, ಕಟ್ಟಡ ಕುಸಿತ, 7 ಮಂದಿ ದುರ್ಮರಣ

ಇನ್ನು ಆರು ಮಂದಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ. ಗುರುವಾರ ಟಿ.ದಾಸರಹಳ್ಳಿಯಲ್ಲಿರುವ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ಗಾಯಗೊಂಡಿದ್ದರು. ಘಟನೆ ನಡೆಯುವುದಕ್ಕೆ ಸ್ವಲ್ಪ ಹೊತ್ತಿಗೆ ಮೊದಲು ದೇವರಾಜ್ ಅವರ ಐವರು ಸಂಬಂಧಿಕರು ಬೇಸಿಗೆ ರಜೆಗೆಂದು ಬಂದಿದ್ದರು.

Cylinder blast: victim 3 year baby died

ದೇವರಾಜ್ ಮತ್ತು ಲಕ್ಷ್ಮಿ ಪುತ್ರಿ ದೇವಿಕಾ ಆಗಿದ್ದು ಅಂಗನವಾಡಿಗೆ ಆಕೆಯನ್ನು ಸೇರಿಸಿದ್ದರು. ದೇವಿಕಾಳ ತಾಯಿ ಲಕ್ಷ್ಮಿ, ಆಕೆಯ ಸಂಬಂಧಿ ಅಲವೇಲಮ್ಮ ಅವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರಾದ ಸೋಮಶೇಖರ್, ನಿರಂಜನ್ ಬಾಬು, ವೆಂಕಟೇಶ್, ಮಲ್ಲೇಶ್ವರಿ ಮತ್ತು ಹೊನ್ನೂರಪ್ಪ ಅವರ ಸ್ಥತಿ ಸುಧಾರಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three year baby Devika died in Victoria hospital. She was seriously injured during cylinder blast near Dasarahalli in Bengaluru on Thursday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ