ವಾರ್ಧಾ ಚಂಡಮಾರುತದಲ್ಲಿ ಕವಿದ ಕರುನಾಡು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: ತಮಿಳುನಾಡು ಮತ್ತು ಆಂಧ್ರದಲ್ಲಿ ರುದ್ರನರ್ತನ ಮಾಡಿದ ವಾರ್ಧಾ ಚಂಡಮಾರುತ ಕರ್ನಾಟಕ್ಕೂ ಕೆಲವೊಂದು ಕಡೆ ತಮ್ಮ ಪರಿಣಾಮ ಬೀರಿದೆ ರಾಮನಗರ, ಹುಬ್ಬಳ್ಳಿ, ಬೆಂಗಳೂರು, ಮೈಸೂರು ಕೆಲವೆಡೆ ಜಿಟಿಜಿಟಿ ಮಳೆ, ಬಿರುಗಾಳಿ ಮೋಡಕವಿದ ವಾತಾವರಣವನ್ನುಂಟು ಮಾಡಿದೆ.

ರಾಮನಗರದಲ್ಲಿ ವಾರ್ಧಾ ಪರಿಣಾಮದಿಂದಾಗಿ ಉತ್ತಮ ಮಳೆಯಾಗಿದೆ. ಸೋಮವಾರ ರಾತ್ರಿ ಶುರುವಾದ ಮಳೆ ಬೆಳಗ್ಗೆ ಏಳುಗಂಟೆವರೆಗೆ ಸತತವಾಗಿ ಸುರಿದಿದೆ.ರಾಮನಗರದಲ್ಲಿ 40 ಮಿಲಿ ಮೀಟರ್ ಮಳೆಯಾಗಿದೆ. ಕನಕಪುರದಲ್ಲಿ ತಾಲ್ಲೂಕಿನಾದ್ಯಂತ 49 ಮಿ.ಮೀ ಹಾಗು ಮಾಗಡಿಯಲ್ಲಿ 31 ಮಿ.ಮೀ, ಚನ್ನಪಟ್ಟಣ 37 ಮಳೆ ಪ್ರಮಾಣ ದಾಖಲಾಗಿದೆ.[ಕರ್ನಾಟಕಕ್ಕೂ ತಟ್ಟಿದ ವಾರ್ಧಾ ಚಂಡಮಾರುತ ಭೀತಿ!]

vardah

ವಾರ್ಧಾ ಮೈಸೂರಿನಲ್ಲಿ ಬೇರೆ ರೀತಿಯ ಪರಿಣಾಮವನ್ನೇ ಬೀರಿದೆ. ಮೈಸೂರಿನಿಂದ ಚೆನ್ನೈಗೆ ತರೆಳಬೇಕಿದ್ದ ರೈಲು ಸಂಚಾರ ಸ್ಥಗಿತವಾಗಿದೆ. ಶತಾಬ್ಧಿ ಎಕ್ಸ್‌ಪ್ರೆಸ್‌ ಮತ್ತು ತಿರುಪತಿಗೆ ತೆರಳಬೇಕಿದ್ದ ಪ್ಯಾಸೆಂಜರ್ ರೈಲುಗಳು ರದ್ದಾಗಿವೆ. ಉಳಿದಂತೆ ಮೊಡಕವಿದಿದ್ದು ಇಲ್ಲಿಯೂ ಜಿಟಿಮಳೆ ಸುರಿದಿದೆ.

vardah

ವಾರ್ಧಾ ಚಂಡಮಾರುತದಿಂದಾಗಿ ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ಶುರುವಾದ ಜಿಟಿಜಿಟಿಮಳೆ ಮಂಗಳವಾರವೂ ಮುಂದುವರೆದಿದೆ. ಬೆಂಗಳೂರಿನ ಕೆಲವೆಡೆ ಮರಳುಗಳು ಧರೆಗುರುಳಿವೆ. ಮೋಡ ಕವಿದ ವಾತಾವರಣದಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಚಂಡಮಾರುತದಿಂದಾಗಿ ಸೋಮವಾರ ಸಂಜೆಯೇ ಕೋಲಾರದ ಕೆಲವೆಡೆ ಬಿರುಗಾಳಿ ಸಹಿತ ಮಳೆಯಾಗಿತ್ತು. ಅಲ್ಲದೆ ಮುಂದುವರೆದಂತೆ ಜಿಟಿಜಿಟಿ ಮಳೆಯಾಗಿದ್ದು, ಕೆಲವೆಡೆ ಅಧಿಕ ಮಳೆ ಉಂಟಾಗಿದೆ. ಕೆಲವೆಡೆ ಮರಗಳು ನೆಲಕ್ಕುರುಳಿವೆ.[ವಾರ್ಧಾ ಎಫೆಕ್ಟ್: ಮಳೆಗೆ ತೋಯ್ದ ಗುಬ್ಬಚ್ಚಿಯಂತಾದ ಬೆಂಗಳೂರು]

vardah

ಇನ್ನು ಮಂಗಳೂರು, ಕೊಡಗಿನ ಕಡೆಯಲ್ಲಿ ಹುತ್ತರಿ ಹಬ್ಬವನ್ನೇ ಮಾಡದಂತೆ ಮೋಡ ಕವಿದು ಮಳೆ ಸುರಿದಿದೆ. ಉತ್ತರ ಕರ್ನಾಟಕದ ಕೆಲವೆಡೆ ಮಳೆಯಾಗಿದೆ. ಕರ್ನಾಟಕದಾದ್ಯಂತ ಮೋಡಕವಿದ ವಾತಾವರಣವೇ ಹೆಚ್ಚು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cyclone Vardah will reach Karnataka effect is hole day is Cloudy weather, bengaluru heavy winds and rain and Mysore, kolar, ramanagar and some district have verious effect.
Please Wait while comments are loading...