ಬೆಂಗಳೂರಿನಿಂದ ನೀಲಗಿರಿ ಶ್ರೇಣಿ ತನಕ ರೈಡ್‍ಎಸೈಕಲ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 04: ರೈಡ್‍ಎಸೈಕಲ್ ಪ್ರತಿಷ್ಠಾನ (ಆರ್‍ಎಸಿ-ಎಫ್) ಲಾಭದ ಉದ್ದೇಶ ಹೊಂದದ, ಜನಸಾಮಾನ್ಯರಲ್ಲಿ ಸೈಕ್ಲಿಂಗ್‍ನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ಪ್ರಮುಖ ಸಂಸ್ಥೆ. ವಿರಾಮದ ವೇಳೆ ಸಾಮಾಜಿಕ ಬದಲಾವಣೆ ಹಾಗೂ ಮುಖ್ಯವಾಗಿ ರಾಷ್ಟ್ರಮಟ್ಟದಲ್ಲಿ ಸೈಕ್ಲಿಂಗ್ ಪ್ರತಿಭೆಯನ್ನು ಪ್ರೋತ್ಸಾಹಿಸುವುದಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ 128 ಸೈಕ್ಲಿಸ್ಟ್ ಗಳು ಟೂರ್ ಆಫ್ ನೀಲಗಿರೀಸ್‍ನಲ್ಲಿ (ಟಿಎಫ್‍ಎನ್) ಭಾಗವಹಿಸುತ್ತಿದ್ದಾರೆ.

10ನೇ ವರ್ಷದ ಈ ಮಹತ್ವದ ಪ್ರವಾಸ ಸೈಕಲ್ ಕಂಡು ಹಿಡಿದು 200 ವರ್ಷದ ಸಮಯದಲ್ಲಿ ನಡೆಯಲಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಕ್ರಮಿಸಲಿರುವ, ಗುಡ್ಡಗಾಡು ಪ್ರದೇಶದಲ್ಲಿ ಸಾಗಲಿರುವ ಇದರಲ್ಲಿ ಪ್ರತಿಭಾವಂತ ಸೈಕ್ಲಿಸ್ಟ್ ಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.

ಟಿಎಫ್‍ಎನ್ 2017ರ ಡಿಸೆಂಬರ್ 10 ಮತ್ತು 17 ರ ನಡುವೆ ನಿಗದಿಯಾಗಿದೆ. ಬೆಂಗಳೂರಿನಿಂದ ಪ್ರವಾಸ ಆರಂಭಿಸುವ ಸೈಕ್ಲಿಸ್ಟ್ ಗಳು ಮೈಸೂರು, ಮಡಿಕೇರಿ, ಸುಲ್ತಾನ್ ಬಡೇರಿ, ಉದಕಮಮಡಲ (ಊಟಿ) ಮೂಲಕ ಸಾಗಿ ಮತ್ತೆ ಮೈಸೂರಿಗೆ ಹಿಂದಿರುಗಲಿದ್ದಾರೆ.

ಕಠಿಣ ತಿರುವು, ಇಳಿಜಾರು, ಸಮತಟ್ಟಾದ ರಸ್ತೆ, ಬೆಟ್ಟ, ಕಾಫಿ ಮತ್ತು ಚಹಾ ತೋಟದ ಮೂಲಕ ಸುಮಾರು 1,000 ಕಿ.ಮೀ ದೂರ ಕ್ರಮಿಸಲಿದ್ದಾರೆ. ಅಲ್ಲದೆ ಸ್ಪರ್ಧಾತ್ಮಕ ವಿಭಾಗ ಸಹ ಇದ್ದು ಇದು ಸೈಕ್ಲಿಸ್ಟ್‍ಗಳು ತಮ್ಮ ನೈಪುಣ್ಯತೆ ತೋರಲು ಅವಕಾಶ ಕಲ್ಪಿಸುತ್ತದೆ.

ಭಾರತದ 128 ಸೈಕ್ಲಿಸ್ಟ್ ಗಳು

ಭಾರತದ 128 ಸೈಕ್ಲಿಸ್ಟ್ ಗಳು

ಟಿಎಫ್‍ಎನ್ 2017ರಲ್ಲಿ ಭಾಗವಹಿಸಲಿರುವ 128 ಸೈಕ್ಲಿಸ್ಟ್ ಪೈಕಿ 120 ಮಂದಿ ಪುರುಷರು ಎಂಟು ಮಂದಿ ಮಹಿಳೆಯರು. ಇವರಲ್ಲಿ 110 ಮಂದಿ ಭಾರತದ ಇತರ ಪ್ರದೇಶಕ್ಕೆ ಸೇರಿದವರು. 18 ಮಂದಿ ನೆದರ್‍ಲೆಂಡ್, ಜರ್ಮನಿ, ಸ್ವೀಡನ್, ಡೆನ್ಮಾರ್ಕ್, ಆಸ್ಟ್ರೇಲಿಯಾ, ಅಮೆರಿಕ ಹಾಗೂ ರಷ್ಯಾದವರು. ಭಾಗವಹಿಸುತ್ತಿವವರ ಪೈಕಿ ಶೇ.65 ಮಂದಿ ಹಿರಿಯ ಮತ್ತು ಮಧ್ಯಮ ಮ್ಯಾನೇಜ್‍ಮೆಂಟ್‍ನ ವೃತ್ತಿಪರರು. ಸಾಧಕರು ಇದರಲ್ಲಿ ಭಾಗವಹಿಸುತ್ತಿರುವುದು ಟಿಎಫ್‍ಎನ್ ಜನಪ್ರಿಯತೆ ತೋರುತ್ತದೆ.

ರೈಡ್ ಎ ಸೈಕಲ್ ಪ್ರತಿಷ್ಠಾನ

ರೈಡ್ ಎ ಸೈಕಲ್ ಪ್ರತಿಷ್ಠಾನ

ಆರ್‍ಎಸಿ-ಎಫ್ ಲಾಭಗಳಿಸುವ ಉದ್ದೇಶ ಹೊಂದಿರುವ ಸಂಸ್ಥೆಯಲ್ಲ. ಸೈಕ್ಲಿಂಗ್ ಜನಪ್ರಿಯಗೊಳಿಸುವ ಆರಾಮವಾಗಿ ಸಾಮಾಜಿಕ ಬದಲಾವಣೆ, ಬಯಸುತ್ತಿರುವ ಸಂಸ್ಥೆ ರಾಷ್ಟ್ರದಲ್ಲಿ ಸೈಕಲ್ ಕ್ರಾಂತಿ ಪರಿಚಯಿಸುವ ಮೂಲಕ ದೈನಂದಿನ ಸಾಗಣೆ, ಸವಾರಿಗೆ, ಅದನ್ನು ಜನಪ್ರಿಯ ಮಾಡುವುದಾಗಿದೆ. ಆರ್‍ಎಸಿ-ಎಫ್ ಸೈಕಲ್ ಪ್ರೇಮಿಗಳು, ಸೈಕಲ್ ತಯಾರಕರು, ಸೈಕ್ಲಿಂಗ್ ಸಮುದಾಯ ಹಾಗೂ ಸರ್ಕಾರದ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದೆ.

ಅನೇಕ ವರ್ಷಗಳಿಂದ ಪ್ರತಿಷ್ಠಾನ ಟೂರ್ ಆಫ್ ನೀಲಗಿರೀಸ್, ನಮ್ಮ ಸೈಕಲ್, ಸೈಕಲ್ ರೀಸೈಕಲ್, ಸಹಾಯಕ ಚಟುವಟಿಕೆಗಳಲ್ಲಿ ತೊಡಗಿದೆ.

ಸೈಕಲ್ ಅನ್ವೇಷಣೆ 200ನೇ ವರ್ಷ

ಸೈಕಲ್ ಅನ್ವೇಷಣೆ 200ನೇ ವರ್ಷ

ದೀಪಕ್ ಮಾಜಿಪಾಟೀಲ್, ಸಹ ಸಂಸ್ಥಾಪಕ ಆರ್‍ಎಸಿ-ಎಫ್ ಹೇಳುತ್ತಾರೆ: ಟೂರ್ ಆಫ್ ನೀಲಗಿರೀಸ್ ಸಾಕಷ್ಟು ದೂರ ಕ್ರಮಿಸಿದೆ. ಭಾರತದ ಖ್ಯಾತ ಸೈಕಲ್ ಟೂರ್‍ನಲ್ಲಿ ಇದೂ ಒಂದು. ಜಾಗತಿಕ ಸೈಕ್ಲಿಂಗ್ ಭೂಪಟದಲ್ಲಿ ಸ್ಥಾನ ಪಡೆಯುವಂತೆ ಮಾಡಿದೆ. ಸೈಕ್ಲಿಂಗ್ ಜನಪ್ರಿಯತೆಗಾಗಿ ಸೈಕ್ಲಿಂಗ್ ಪ್ರೋತ್ಸಾಹಿಸಲು ನಡೆಸುತ್ತಿರುವ ಬೃಹತ್ ಮಹತ್ವದ ಕಾರ್ಯಕ್ರಮ ಇದಾಗಿದೆ. ಸೈಕಲ್ ಅನ್ವೇಷಣೆ 200ನೇ ವರ್ಷದ ವೇಳೆ ನಡೆಯುತ್ತಿರುವ ಟಿಎಫ್‍ಎನ್ 2017 ತನ್ನದೇ ಆದ ವಿಶೇಷತೆ ಹೊಂದಿದೆ ಎಂದರು.

ಸ್ಪೆಷಾಲಿಟಿ ಆಸ್ಪತ್ರೆಗೆ ನಿಧಿ ಸಂಗ್ರಹ

ಸ್ಪೆಷಾಲಿಟಿ ಆಸ್ಪತ್ರೆಗೆ ನಿಧಿ ಸಂಗ್ರಹ

ಸಾಹಸ, ಪ್ರಕೃತಿ, ಪ್ರವಾಸ ಸೈಕ್ಲಿಸ್ಟ್‍ಗಳು ಟಿಎಫ್‍ಎನ್ ನಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತದೆ. ಅಲ್ಲದೆ ಇದು ಪ್ರತಿಯಾಗಿ ಸಮಾಜಕ್ಕೆ ತನ್ನ ಕಿರುಕಾಣಿಕೆಯನ್ನು ನೀಡುತ್ತಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಮೂರು ಚಾರಿಟಿ ಸವಾರರೂ ಇದರಲ್ಲಿದ್ದಾರೆ.

ರಜನಿಕಾಂತ್ ಪುಟ್ಟಬುದ್ಧಿ, ಕೆನೆತ್ ಅಂಡರ್‍ಸನ್ ನೇಚರ್ ಸೊಸೈಟಿ ಪ್ರತಿನಿಧಿಸಿದರೆ, ಶಂಕರ್ ಜಯರಾಮನ್, ಸೀತಾ ಭತೇಜ ಸ್ಪೆಷಾಲಿಟಿ ಆಸ್ಪತ್ರೆಗೆ ನಿಧಿ ಸಂಗ್ರಹಿಸಲಿದ್ದಾರೆ. ಇಕ್ಷ ಪ್ರತಿಷ್ಠಾನಕ್ಕಾಗಿ ವಿವೇಕ್ ರಾಧಾಕೃಷ್ಣನ್ ಹಾಗೂ ರಾಜಕುಮಾರ್ ನಾಟ್ ಭಾಗವಹಿಸುತ್ತಿದ್ದಾರೆ.

ಪೊಲೀಸ್ ಪಡೆಯ ಸೈಕ್ಲಿಸ್ಟ್ ಗಳು

ಪೊಲೀಸ್ ಪಡೆಯ ಸೈಕ್ಲಿಸ್ಟ್ ಗಳು

ಸಾಧಕರಲ್ಲಿ ಅಲೆಕ್ಸಿಗ್ರೇವಲ್, ಭಾರತೀಯ ಅಮೆರಿಕನ್, 1984 ರ ರೋಡ್ ಸೈಲ್ಕಿಂಗ್ ಒಲಿಂಪಿಕ್ ಸ್ವರ್ಣ ಪದಕ ವಿಜೇತ; ಲೆ|ಕ| ಡಾ. ಶ್ರೀನಿವಾಸ್, ಗೋಕುಲನಾಥ್, ರೇಸ್ ಅಕ್ರಾಸ್ ಅಮೆರಿಕ - 5,000 ಕಿ.ಮೀ, 11 ದಿನ 18 ತಾಸು ಮತ್ತು ನಮ್ಮ ಬೆಂಗಳೂರಿನ ಕಿರಣ್ ಕುಮಾರ್ ರಾಜು, ರಾಷ್ಟ್ರೀಯ ಎಂಟಿಬಿ ಚಾಂಪಿಯನ್ 2015 ಮತ್ತು 2016 ಸೇರಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಸೈಕ್ಲಿಸ್ಟ್ ಗಳು ಸಹ ಭಾಗವಹಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Experience Nature through Cycle! Yes this what a bunch of 900 passionate cyclists have done over the last 10 years. Come December 2017 and a lucky bunch of cyclists will usher in a decade of cycling for Tour of Nilgiris (TfN) by pedaling around 1000+ kms across the Nilgiris Biosphere Reserve.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ