ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಿಡ್ ನೈಟ್ ಮ್ಯಾರಥಾನ್ ಗೂ ಮುನ್ನ CXO ರನ್

By Mahesh
|
Google Oneindia Kannada News

ಬೆಂಗಳೂರು, ನ.30: ರೋಟರಿ ಬೆಂಗಳೂರು ಐಟಿ ಕಾರಿಡಾರ್ ಸಹಯೋಗದೊಂದಿಗೆ ಡಿಸೆಂಬರ್ 20 ರಂದು ವೈಟ್ ಫಿಲ್ಡ್ ನಲ್ಲಿ ಎಸ್ ಬಿಐ ಬೆಂಗಳೂರು ಮಿಡ್ ನೈಟ್ ಮ್ಯಾರಥಾನ್ 2014 ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ನ ರಾಯಭಾರಿಯಾಗಿ ಫ್ಲೈಯಿಂಗ್ ಸಿಖ್ ಮಿಲ್ಕಾ ಸಿಂಗ್ ಈ ಬಾರಿಯೂ ಪಾಲ್ಗೊಳ್ಳುತ್ತಿದ್ದಾರೆ. ಈ ಮ್ಯಾರಥಾನ್ ಗೆ ಪೂರ್ವಭಾವಿ ಕಾರ್ಯಕ್ರಮ CXO ಪವರ್ ರನ್ ನಡೆಸಲಾಯಿತು.

8ನೇ ಮಿಡ್ ನೈಟ್ ಮ್ಯಾರಥಾನ್ ಗೆ ಪ್ರಚಾರ ಹಾಗೂ ಜಾಗೃತಿ ಕಾರ್ಯಕ್ರಮವಾದ 1 ಕಿ.ಮೀ ನ ಸಿಎಕ್ಸ್ ಒ ರನ್ ಗೆ ಕೆಟಿಪಿಒ, ವೈಟ್ ಫೀಲ್ಡ್ ನಲ್ಲಿ ರೋಟರಿ ಸಂಸ್ಥೆ ಸದಸ್ಯರಿಂದ ಚಾಲನೆ ನೀಡಲಾಯಿತು. ಕಾರ್ಪೋರೇಟ್ ಸಂಸ್ಥೆ ಸಿಇಒ, ವ್ಯವಸ್ಥಾಪಕ ನಿರ್ದೇಶಕರು ಪ್ರಮುಖ ಅಧಿಕಾರಿಗಳು, ಮಕ್ಕಳು ಸೇರಿದಂತೆ ನೂರಾರು ಮಂದಿ ಈ ಪವರ್ ರನ್ ನಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

CXO Power mile run ahead of SBI marathon BMM 2014

ನಿಧಿ ಸಂಗ್ರಹ: ಮ್ಯಾರಥಾನ್ ನಲ್ಲಿ ಸರಕಾರೇತರ ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆಗಳು ಸೇರಿದಂತೆ ಸಾವಿರಾರು ಮಂದಿ ಓಟಗಾರರು ಪಾಲ್ಗೊಳ್ಳಲಿದ್ದು, ಪರಿಸರ, ಆರೋಗ್ಯ, ಸಮುದಾಯ ಕಲ್ಯಾಣ ವೃತ್ತಿಪರ ಸೇವೆಗಳಿಗೆ ನಿಧಿ ಸಂಗ್ರಹಿಸಲು ಮಿಡ್ ನೈಟ್ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು Rotary Bangalore IT Corridor (RBITC) ಅಧ್ಯಕ್ಷ ರಾಜೀವ್ ರಾಯ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

2007ರಿಂದ RBITC ವಿವಿಧ ವಿಭಾಗಗಳಲ್ಲಿ ಮ್ಯಾರಥಾನ್ ನಡೆಸುತ್ತಾ ಬಂದಿದೆ. 42 ಕಿಮೀ ಮಧ್ಯರಾತ್ರಿ ಮ್ಯಾರಥಾನ್ ಓಟ, 21 ಕಿಮೀ ಅರ್ಧ ಮ್ಯಾರಥಾನ್ ಓಟ ನಡೆಯಲಿದೆ. ಇದರಲ್ಲಿ ಯಾರಾದರೂ ಪಾಲ್ಗೊಳ್ಳಬಹುದು.ಸುಮಾರು 2400 ರನ್ ಗಳಿಂದ ಆರಂಭವಾದ ಮ್ಯಾರಥಾನ್ ನಲ್ಲಿ ಈಗ ಸುಮಾರು 10,000ಕ್ಕೂ ಅಧಿಕ ಓಟಗಾರರನ್ನು ನಿರೀಕ್ಷಿಸಲಾಗಿದೆ.

ಮ್ಯಾರಥಾನ್ ರಾಯಭಾರಿ ಮಿಲ್ಕಾ ಸಿಂಗ್ ಅವರಲ್ಲದೆ, ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಅವರು ಕೂಡಾ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮ್ಯಾರಥಾನ್ ಗೆ ಹೆಸರು ನೋಂದಾಯಿಸಲು ವೆಬ್ ತಾಣ ಇಲ್ಲಿ ಕ್ಲಿಕ್ ಮಾಡಿ

ಎಸ್ ಬಿಐ ಪ್ರಮುಖ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. 10K ರನ್ ಟಾರ್ಗೆಟ್ ಕಾರ್ಪೋರೇಷನ್, ಐಟಿ ಸಿಟಿ ರನ್ ಗೆ ಶಿನೈಡರ್ ಎಲೆಕ್ಟ್ರಿಕ್, ಸಮುದಾಯ ರಿಲೇಗೆ ನಂಬಿಯಾರ್ ಬಿಲ್ಡರ್ಸ್, ಸಿಎಕ್ಸ್ ಒ ಪವರ್, ಕೇರ್ ವೆಲ್, ಮಣಿಪಾಲ್, ಫಿವರ್ 104 ಎಫ್ ಎಂ ವಾಹಿನಿ, ಮಹೀಂದ್ರಾ ರೇವಾ ಮುಂತಾದ ಸಂಸ್ಥೆಗಳು ಇನ್ನಿತರ ಪ್ರಾಯೋಜಕ, ಸಹಯೋಗ ಸಂಸ್ಥೆಗಳಾಗಿವೆ.

English summary
CXO Power mile run ahead of SBI marathon BMM 2014. The 1-km CXO Power Mile was flagged off from KTPO, Whitefield, by Rajeeb Roy, president, Rotary Bangalore IT Corridor (RBITC). Milkha Singh is the brand ambassador of the 8th edition of SBI BMM
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X