ಬೆಂಗಳೂರು ರಾಜಕೀಯ : ಮಹದೇವಪ್ಪ ಚಿತ್ತ ರಾಮನ್ ನಗರದತ್ತ!

Posted By: Gururaj
Subscribe to Oneindia Kannada

ಬೆಂಗಳೂರು, ಡಿಸೆಂಬರ್ 27 : 2018ರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ರಾಜ್ಯದ ಪ್ರಭಾವಿ ಸಚಿವರೊಬ್ಬರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.

ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಹದೇವಪ್ಪ ಚಿತ್ತ ನಂಜನಗೂಡಿನ ಮೇಲೆ?!

ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ ಸಿ.ವಿ.ರಾಮನ್ ನಗರವೂ ಒಂದು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ ಮತ್ತು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರಂಗೆ ಕಾಂಗ್ರೆಸ್ ಅಭ್ಯರ್ಥಿ ಅಂತಿಮ?

ಕಳೆದ ಚುನಾವಣೆಯಲ್ಲಿ ಕ್ಷೇತ್ರದಿಂದ ಪಿ.ರಮೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿ. ಆದರೆ, ಎಚ್.ಸಿ.ಮಹದೇವಪ್ಪ ಪ್ರಭಾವಿ ಸಚಿವರು, ಸಿದ್ದರಾಮಯ್ಯ ಅವರ ಆಪ್ತರು. ಅವರ ವಿರುದ್ಧ ಹೋರಾಡಿ ಟಿಕೆಟ್ ಪಡೆಯುವುದು ಕಷ್ಟ.

ಸಂದರ್ಶನ - ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ದೋಣಿ!

ಎಚ್.ಸಿ.ಮಹದೇವಪ್ಪ ಅವರು ತಿ.ನರಸೀಪುರ ಕ್ಷೇತ್ರದ ಹಾಲಿ ಶಾಸಕರು. ಮುಂದಿನ ಚುನಾವಣೆಯಲ್ಲಿ ಕ್ಷೇತ್ರವನ್ನು ಮಗ ಸುನೀಲ್ ಬೋಸ್‌ ಅವರಿಗೆ ಬಿಟ್ಟುಕೊಟ್ಟು ಸಿ.ವಿ.ರಾಮನ್ ನಗರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂಬುದು ಸದ್ಯದ ಸುದ್ದಿ. ಮುಂದೇನಾಗುತ್ತದೆ? ಎಂದು ಕಾದು ನೋಡಬೇಕು...

ಸ್ಥಳೀಯ ನಾಯಕರೇ ರಮೇಶ್‌ಗೆ ವಿರುದ್ಧ

ಸ್ಥಳೀಯ ನಾಯಕರೇ ರಮೇಶ್‌ಗೆ ವಿರುದ್ಧ

ಪಿ.ರಮೇಶ್ ಅವರೂ ಈ ಬಾರಿಯೂ ಟಿಕೆಟ್ ಆಕಾಂಕ್ಷಿ. ಆದರೆ, ಸ್ಥಳೀಯ ನಾಯಕರೇ ರಮೇಶ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಚುನಾವಣೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.

ಬ್ಯಾನರ್‌ನಲ್ಲಿ ಮಹದೇವಪ್ಪ ಅವರ ಫೋಟೋ

ಬ್ಯಾನರ್‌ನಲ್ಲಿ ಮಹದೇವಪ್ಪ ಅವರ ಫೋಟೋ

ಸಿ.ವಿ.ರಾಮನ್‌ ನಗರದಲ್ಲಿ ಕ್ರಿಸ್‌ಮಸ್ ಶುಭಾಶಯ ಕೋರಿ ಹಲವು ಬ್ಯಾನರ್‌ ಹಾಕಲಾಗಿತ್ತು. ಎಲ್ಲಾ ಬ್ಯಾನರ್‌ಗಳಲ್ಲಿ ಎಚ್.ಸಿ.ಮಹದೇವಪ್ಪ ಅವರ ಫೋಟೋ ಇತ್ತು. ಅವರು ಮುಂದಿನ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿದೆ.

ಹೈಕಮಾಂಡ್‌ನಿಂದ ಹಸಿರು ನಿಶಾನೆ

ಹೈಕಮಾಂಡ್‌ನಿಂದ ಹಸಿರು ನಿಶಾನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಥಳೀಯ ನಾಯಕರು ಎಚ್.ಸಿ.ಮಹದೇವಪ್ಪ ಅವರ ಪರವಾಗಿ ನಿಂತರೆ ಕಾಂಗ್ರೆಸ್ ಹೈಕಮಾಂಡ್ ಕ್ಷೇತ್ರದ ಟಿಕೆಟ್‌ ಅನ್ನು ಅವರಿಗೆ ನೀಡುವ ಸಾಧ್ಯತೆ ಇದೆ.

ಅಪ್ಪ-ಮಗನಿಗೆ ಟಿಕೆಟ್

ಅಪ್ಪ-ಮಗನಿಗೆ ಟಿಕೆಟ್

ತಿ.ನರಸೀಪುರ ಕ್ಷೇತ್ರದ ಹಾಲಿ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಸಿ.ವಿ.ರಾಮನ್ ನಗರಕ್ಕೆ ಬಂದರೆ ಅವರ ಪುತ್ರ ಸುನೀಲ್ ಬೋಸ್ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಆದರೆ, ಅಪ್ಪ-ಮಗ ಇಬ್ಬರಿಗೂ ಟಿಕೆಟ್ ಸಿಗಲಿದೆಯೇ? ಕಾದು ನೋಡಬೇಕು.

ಜೆಡಿಎಸ್ ಅಭ್ಯರ್ಥಿ ಪ್ರಬಲವಾಗಿದ್ದಾರೆ

ಜೆಡಿಎಸ್ ಅಭ್ಯರ್ಥಿ ಪ್ರಬಲವಾಗಿದ್ದಾರೆ

ಸಿ.ವಿ.ರಾಮನ್ ನಗರದಲ್ಲಿ 2013ರ ಚುನಾವಣೆಯಲ್ಲಿ ಬಿಜೆಪಿಯ ಎಸ್.ರಾಘು 53,444 ಮತಗಳನ್ನು ಪಡೆದು ಜಯಗಳಿಸಿದ್ದರು. ಪಿ.ರಮೇಶ್ 44,982 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಜೆ.ಹೇಮಲತಾ ಸುರೇಶ್ ರಾಜ್ 3,179 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದರು. (ಚಿತ್ರ : ಪಿ.ರಮೇಶ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka PWD minister and Close aide of chief minister Siddaramaiah Dr.H.C.Mahadevappa may contest for 2018 assembly elections form CV Raman Nagar assembly constituency, Bengaluru city. P.Ramesh is also aspirant for ticket. Dr.H.C.Mahadevappa is a sitting MLA of T. Narsipur (Tirumakudal Narsipur) Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ