ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ನಾಲ್ಕು ದಿನ ಕಾವೇರಿ ನೀರು ಬರಲ್ಲ, ಎಲ್ಲೆಲ್ಲಿ ?

By Nayana
|
Google Oneindia Kannada News

Recommended Video

ಬೆಂಗಳೂರಿನಲ್ಲಿ ಕಾವೇರಿ ನೀರು 4 ದಿನ ಬರೋದಿಲ್ಲ | Oneindia Kannada

ಬೆಂಗಳೂರು, ಜು.18: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ ಇದರ ಪರಿಣಾಮ ಮಣ್ಣು ಮಿಶ್ರಿತ ನೀರು ಬರುತ್ತಿದೆ ಅದನ್ನು ದಿನಬಳಕೆಗೆ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಗರದಲ್ಲಿ ನಾಲ್ಕು ದಿನ ಕಾವೇರಿ ನೀರು ವ್ಯತ್ಯಯವಾಗಲಿದೆ.

ಕಾವೇರಿ ನಾಲ್ಕನೇ ಹಂತದ ಎರಡನೇ ಘಟ್ಟದ ನೀರನ್ನು ತೊರೆಕಾಡನಹಳ್ಳಿಯಲ್ಲಿ ಶುದ್ಧೀಕರಿಸಿ ಪೂರೈಸಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಮಿಶ್ರಿತ ನೀರು ಹರಿದುಬರುವುದರಿಂದ ಶುದ್ಧೀಕರಣ ಪ್ರಕ್ರಿಯೆಗೆ ಅಡ್ಡಿ ಉಂಟಾಗುತ್ತಿದೆ.

ಮೈದುಂಬಿದ ಕಾವೇರಿಗೆ ಜುಲೈ 20ರಂದು ಎಚ್ಡಿಕೆ ದಂಪತಿ ಬಾಗಿನ ಮೈದುಂಬಿದ ಕಾವೇರಿಗೆ ಜುಲೈ 20ರಂದು ಎಚ್ಡಿಕೆ ದಂಪತಿ ಬಾಗಿನ

ನಾಲ್ಕನೇ ಹಂತದ ಎರಡನೇ ಘಟ್ಟದಲ್ಲಿ ಪ್ರತಿನಿತ್ಯ 500 ದಶಲಕ್ಷ ಲೀಟರ್‌ ನೀರು ಪೂರೈಸಲಾಗುತ್ತಿದ್ದು, ನಗರದ ಅರ್ಧ ಭಾಗದಷ್ಟು ಪ್ರದೇಶಗಳಿಗೆ ನೀರು ಪೂರೈಕೆಯಾಗುವುದು ಅನುಮಾನವಾಗಿದೆ. ಹಾಗಾಗಿ ಇನ್ನು ಮೂರರಿಂದ ನಾಲ್ಕು ದಿನಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಕಳೆದ ಬಾರಿನೀರು ಮಣ್ಣು ಮಿಶ್ರಿತ ನೀರಾಗಿತ್ತು, ಆದರೂ ಈ ಪ್ರಮಾಣದಲ್ಲಿ ಇರಲಿಲ್ಲ. ಹಾಗಾಗಿ ಯಾವುದೇ ಅಡಚಣೆಯಾಗಿರಲಿಲ್ಲ.ಈ ಬಾರಿ ಕಾವೇರಿ ಮತ್ತು ಕಬಿನಿ ನದಿ ಪಾತ್ರಗಳಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಭಾರಿ ಪ್ರಮಾಣದಲ್ಲಿ ಮಣ್ಣು ಮಿಶ್ರಣಗೊಂಡಿದೆ. ಇದನ್ನು ಶುದ್ಧೀಕರಿಸುವುದು ಅಸಾಧ್ಯವಾಗಿದ್ದು, ತಿಳಿನೀರು ಹರಿದ ನಂತರವಷ್ಟೇ ನೀರು ಪೂರೈಕೆ ಸಾಧ್ಯವಾಗಲಿದೆ.

ಮಂಗಳವಾರವೇ ಹಲವೆಡೆ ತೊಂದರೆಯಾಗಿತ್ತು

ಮಂಗಳವಾರವೇ ಹಲವೆಡೆ ತೊಂದರೆಯಾಗಿತ್ತು

ಮಂಗಳವಾರವೇ ಹಲವೆಡೆ ನೀರು ಪೂರೈಕೆ ಸ್ಥಗಿತಗೊಂಡಿದೆ. ಕೆಆರ್‌ಪುರ ಬಳಿಯ ಹಲವು ಪ್ರದೇಶಗಳಿಗೆ ಮಂಗಳವಾರ ನೀರು ಬಂದಿಲ್ಲ. ಯಾವುದೇ ಮಾಹಿತಿಯಿಲ್ಲದೆ ಪೂರೈಕೆ ಸ್ಥಗಿತಗೊಂಡಿದ್ದರಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.,

ಕಾವೇರಿ ನೀರು ವ್ಯತ್ಯಯವಾಗುವ ಸ್ಥಳಗಳು

ಕಾವೇರಿ ನೀರು ವ್ಯತ್ಯಯವಾಗುವ ಸ್ಥಳಗಳು

ನಾಲ್ಕನೇ ಹಂತದ 2 ನೇ ಘಟ್ಟಕ್ಕೆ ಒಳಪಡುವ ಪ್ರದೇಶಗಳಾದ ಜಂಬೂಸವಾರಿ ದಿಣ್ಣೆ, ಬೊಮ್ಮನಹಳ್ಳಿ, ಅಂಜನಾಪುರ, ಏರೋ ಇಂಜಿನ್‌, ಮಾರತ್‌ಹಳ್ಳಿ, ಎ ನಾರಾಯಣಪುರ, ಕೆ.ಆರ್‌. ಪುರ, ಹೂಡಿ, ಐಟಿಪಿಎಲ್‌, ಜಾಲಹಳ್ಳಿ, ಜಿಕೆವಿಕೆ, ಬಾಹುಬಲಿನಗರ, ಲಗ್ಗೆರೆ, ಟಿ ದಾಸರಹಳ್ಳಿ, ಮೂಡಲಪಾಳ್ಯ, ಬಿಇಎಲ್‌ ವೃತ್ತ, ಹೆಗ್ಗನಹಳ್ಳಿ, ನಾಗವಾರ, ವಿಜಯನಗರ, ರಾಜಾಜಿನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ವ್ಯತ್ಯಯವಾಗಲಿದೆ.

ಹೆಚ್ಚಿಗೆ ನೀರು ಬಂದರೂ ಕಷ್ಟ

ಹೆಚ್ಚಿಗೆ ನೀರು ಬಂದರೂ ಕಷ್ಟ

ಯಾವುದೇ ನೀರಿನ ಮೂಲವಿಲ್ಲದೆ ನೂರು ಕಿ.ಮೀ ದೂರದ ಕಾವೇರಿ ಕಣಿವೆ ಜಲಾಶಯಗಳನ್ನು ಅವಲಂಬಿಸಿರುವ ಬೆಂಗಳೂರಿಗೆ ಇಷ್ಟು ವರ್ಷಗಳವರೆಗೆ ತೀವ್ರ ಬೇಸಿಗೆಯಿಂದಾಗಿ ನೀರಿನ ಕೊರತೆ ಉಂಟಾಗುತ್ತಿತ್ತು. ಆದರೆ ಈ ವರ್ಷ ಮಳೆ ಹೆಚ್ಚಳಗೊಂಡು ಮಣ್ಣುಮಿಶ್ರಿತ ನೀರು ಹರಿದು ಬರುತ್ತಿರುವುದು ಅಧಿಕಾರಿಗಳಿಗೆ ಹೊಸ ತಲೆನೋವಾಗಿದೆ. ಹಿಂದಿನ ವರ್ಷದಲ್ಲಿಯೂ ಮಣ್ಣು ಮಿಶ್ರಿತ ನೀರು ಬಂದಿತ್ತಾದರೂ ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ.

ಮೈದುಂಬಿದ ಕಾವೇರಿಗೆ ಜುಲೈ 20ರಂದು ಎಚ್ಡಿಕೆ ದಂಪತಿ ಬಾಗಿನ

ಮೈದುಂಬಿದ ಕಾವೇರಿಗೆ ಜುಲೈ 20ರಂದು ಎಚ್ಡಿಕೆ ದಂಪತಿ ಬಾಗಿನ

ಮಂಡ್ಯದಲ್ಲಿ ರೈತರ ಹರುಷ ಮುಗಿಲು ಮುಟ್ಟಿದೆ. ತಾಯಿ ಕಾವೇರಿ ಭೋರ್ಗರೆಯುತ್ತಿದ್ದಾಳೆ, ಹಲವು ವರುಷಗಳ ನಂತರ ಕೃಷ್ಣ ರಾಜ ಸಾಗರದ ಮಡಿಲನ್ನು ಸಂಪೂರ್ಣವಾಗಿ ತುಂಬಿದ್ದಾಳೆ. ಕಳೆದ ವರ್ಷ ಈ ಸಮಯದಲ್ಲಿ ಬರಿದುಬರಿದಾಗಿದ್ದ ಕೆಆರ್ಎಸ್ ಈಗ ಗರಿಷ್ಠಮಟ್ಟ (124.80 ಅಡಿ) ತಲುಪುವ ಹಂತಕ್ಕೆ ಬಂದಿದೆ. ಜುಲೈ 20, ಶುಭ ಶುಕ್ರವಾರದಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಸಹಪತ್ನೀಕರಾಗಿ ಕಾವೇರಿಗೆ ಬಾಗಿನವನ್ನು ಅರ್ಪಿಸಲಿದ್ದಾರೆ.

English summary
Because of Heavy rain in Cauvery water belt, Bengaluru facing four days intteruption in water supply, BWSSB is getting mud water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X