ದೊಡ್ಡ ಬೇಟೆ: ಜೆಟ್ ಪಂಪ್ ನಲ್ಲಿ ಸಾಗಿಸುತ್ತಿದ್ದ 33 ಕೇಜಿ ಚಿನ್ನ ವಶಕ್ಕೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 23: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 33 ಕೇಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಎಷ್ಟು ಗೊತ್ತಾ? 9.4 ಕೋಟಿ ರುಪಾಯಿ. ಜೆಟ್ ಪಂಪ್ ನೊಳಗಿಟ್ಟು ದುಬೈನಿಂದ ಸಾಗಣೆ ಮಾಡುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದೆಹಲಿ ವ್ಯಾಪಾರಿ ಬಲೆಗೆ, ಎರಡು ವರ್ಷದಲ್ಲಿ ಟನ್ ಗಟ್ಟಲೆ ಚಿನ್ನ ಕಳ್ಳಸಾಗಣೆ

ತಪಾಸಣೆ ವೇಳೆ ಜೆಟ್ ಪಂಪ್ ಗಳನ್ನು ಬಿಡಿಸಿ ನೋಡಿದಾಗ ಒಳಗೆ ಎಲೆಕ್ಟ್ರಿಕ್ ವಸ್ತುವಂಥದ್ದು ಪತ್ತೆಯಾಗಿದೆ. ಅದರ ಜತೆ ಚಿನ್ನದ ಮೌಲ್ಡಿಂಗ್ ಮಾಡಿರುವುದು ತಿಳಿದುಬಂದಿದೆ. ಇಪ್ಪತ್ತೆರಡು ಕ್ಯಾರಟ್ ನ ಚಿನ್ನವನ್ನು ಕರಗಿಸಿ ಆ ನಂತರ ಪಂಪ್ ನೊಳಗೆ ಸೇರಿಸಿದ್ದಾರೆ. ಅದು ಚಿನ್ನ ಎಂದು ಗೊತ್ತಾಗದಿರಲಿ ಎಂದು ಪೇಂಟ್ ಮಾಡಿದ್ದಾರೆ.

Customs finds 33 kg gold moulded into jet pumps at Bengaluru airport

ಈ ವರ್ಷದಲ್ಲಿ ವಶಪಡಿಸಿಕೊಳ್ಳಲಾದ ಅತಿ ದೊಡ್ಡ ಪ್ರಮಾಣದ ಚಿನ್ನವಿದು. ದುಬೈನಿಂದ ಬಂದ ಈ ಸರಕನ್ನು ಇಲ್ಲಿ ಯಾರು ಪಡೆಯುತ್ತಿದ್ದರು ಎಂಬುದರ ಪತ್ತೆ ಮಾಡಲಾಗುತ್ತಿದೆ. ಆದರೆ ಕಾರ್ಗೋ ವಿಭಾಗದಲ್ಲೇ ಇರುವ ಈ ಚಿನ್ನ ಯಾರಿಗೆ ಸೇರಬೇಕಾಗಿತ್ತು ಎಂಬುದು ತಿಳಿದುಬಂದಿಲ್ಲ. ಇನ್ನು ಇಂಥ ಎಷ್ಟು ಜೆಟ್ ಪಂಪ್ ಗಳಿದ್ದವು ಎಂಬ ವಿಚಾರವನ್ನು ಅಧಿಕಾರಿಗಳು ಬಾಯಿ ಬಿಟ್ಟಿಲ್ಲ.

ಆದರೆ, ಮೂಲಗಳ ಪ್ರಕಾರ ಗಲ್ಫ್ ನಲ್ಲಿ ಪ್ರಬಲವಾಗಿ ಬೇರು ಬಿಟ್ಟಿರುವ ಹಾಗೂ ಬೆಂಗಳೂರಿನಲ್ಲಿ ನಂಟು ಹೊಂದಿರುವ ಕೇರಳ ಕಳ್ಳ ಸಾಗಾಣಿಕೆದಾರರ ಕೆಲಸ ಇದು. "ಈ ತಂಡ ದುಬೈನಲ್ಲಿ ವರ್ಕ್ ಶಾಪ್ ಇಟ್ಟುಕೊಂಡಿದ್ದು, ಅಲ್ಲಿ ಕೆಲಸ ಮಾಡುವವರು ಚಿನ್ನವನ್ನು ಕರಗಿಸಿ, ಇಸ್ತ್ರಿ ಪೆಟ್ಟಿಗೆ, ಮೈಕ್ರೋವೇವ್ ಓವನ್ ಸೇರಿದಂತೆ ವಿವಿಧ ವಸ್ತುಗಳನ್ನು ಮಾಡಿ ಭಾರತ ಸೇರಿದಂತೆ ವಿವಿಧೆಡೆ ಕಳಿಸುತ್ತಾರೆ. ಚಿನ್ನದ ಬಿಸ್ಕತ್ ಸಾಗಣೆಗಿಂತ ಇದು ಸುಲಭ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A consignment of jet pumps had landed from Dubai contains 33kg of gold, worth Rs 9.4crore seized by customs officers at Kempegowda International Airport, Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ