ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಚಾರಿಗಳು ಕಬ್ಬನ್ ಪಾರ್ಕಿನ ಟೆನ್ನಿಸ್ ಸ್ಟೇಡಿಯಂನ ಸಿಬ್ಬಂದಿಗಳಲ್ಲ

By Vanitha
|
Google Oneindia Kannada News

ಬೆಂಗಳೂರು, ನವೆಂಬರ್, 13 : ಅತ್ಯಾಚಾರ ಆರೋಪದ ಮೇಲೆ ಬಂಧಿತರಾದ ಇಬ್ಬರು ಸೆಕ್ಯುರಿಟಿ ಗಾರ್ಡ್ ಗಳು ಕಬ್ಬನ್ ಪಾರ್ಕಿನ ಟೆನ್ನಿಸ್ ಸ್ಟೇಡಿಯಂಗೆ ಸೇರಿದ ಸಿಬ್ಬಂದಿಗಳಲ್ಲ. ಅವರು ತೋಟಗಾರಿಕಾ ಇಲಾಖೆಗೆ ಸೇರಿದ ಸಿಬ್ಬಂದಿಗಳು ಎಂದು ಕಬ್ಬನ್ ಪಾರ್ಕಿನ ಟೆನ್ನಿಸ್ ಕೋರ್ಟಿನ ಸಹ ಕಾರ್ಯನಿರ್ವಾಹಕ ಪ್ರಕರಣದ ಗೊಂದಲ ನಿವಾರಿಸಿದ್ದಾರೆ.

ಅತ್ಯಾಚಾರಕ್ಕೆ ತುತ್ತಾದ ಮಹಿಳೆ ಟೆನ್ನಿಸ್ ಕೋರ್ಟಿನ ಸದಸ್ಯತ್ವಕ್ಕಾಗಿ ಕೆಲವು ಗಂಟೆಗಳ ಮೊದಲು ಆಗಮಿಸಿದ್ದರು. ಸಮಯಾವಧಿ ಮುಗಿದ ನಂತರ ಬಂದ ಕಾರಣ ಯಾರು ಅಧಿಕಾರಿಗಳು ಇಲ್ಲ. ಮಾರನೇ ದಿನ ಬರುವಂತೆ ಹೇಳಿ ಕಳುಹಿಸಿದ್ದೆವು. ಅಲ್ಲದೇ ಟೆನ್ನಿಸ್ ಕೋರ್ಟಿನ ಒಳಗೆ ಸಿಸಿಟಿವಿ ಇದ್ದು, ಬಹಳ ಕಟ್ಟುನಿಟ್ಟಿನ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ.[ಕಬ್ಬನ್ ಪಾರ್ಕ್ ಬಳಿ ಗ್ಯಾಂಗ್ ರೇಪ್, ಇಬ್ಬರ ಬಂಧನ]

Cubbon park rape: Arrested two security guards working in Horticuture department, Bengaluru

ತುಮಕೂರು ಮಹಿಳೆ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಸಿದ್ದಲಿಂಗಯ್ಯ ಸರ್ಕಲ್ ಬಳಿ ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಮಹಿಳೆಯು ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳಿಗೆ ಕಬ್ಬನ್ ಪಾರ್ಕಿನಿಂದ ಹೊರಗೆ ಹೋಗಲು ದಾರಿ ಕೇಳಿದ್ದಾಳೆ.

ದಾರಿ ತೋರಿಸುವಂತೆ ಕರೆದೊಯ್ದ ಗಾರ್ಡ್ ಗಳು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

English summary
Cubbon park rape attempt: Arrested two security guards working at Horticuture department and are part of the security of the cubbon park
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X