ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್‌ ಪಾರ್ಕ್‌ನಲ್ಲಿ ಅತ್ಯಾಚಾರ, ಇಬ್ಬರಿಗೆ ಜೀವಾವಧಿ ಶಿಕ್ಷೆ

By Gururaj
|
Google Oneindia Kannada News

ಬೆಂಗಳೂರು, ಜುಲೈ 31 : ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತೆಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಭದ್ರತಾ ಸಿಬ್ಬಂದಿಗಳಾಗಿದ್ದ ಅಸ್ಸಾಂ ಮೂಲದ ರಾಜು ಮೇಧಿ (28), ಬೋಲಿನ್ ದಾಸ್ (38) ಶಿಕ್ಷೆಗೆ ಗುರಿಯಾದವರು. 2015ರ ನವೆಂಬರ್‌ನಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದರು.

ಕಬ್ಬನ್ ಪಾರ್ಕ್ ಬಳಿ ಗ್ಯಾಂಗ್ ರೇಪ್, ಇಬ್ಬರ ಬಂಧನಕಬ್ಬನ್ ಪಾರ್ಕ್ ಬಳಿ ಗ್ಯಾಂಗ್ ರೇಪ್, ಇಬ್ಬರ ಬಂಧನ

Cubbon Park gangrape case : Two awarded life sentence

ನಗರದ 54ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಲತಾ ಕುಮಾರಿ ಅವರು ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತ ಮಹಿಳೆಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ.

ಅತ್ಯಾಚಾರಿಗಳು ಕಬ್ಬನ್ ಪಾರ್ಕಿನ ಟೆನ್ನಿಸ್ ಸ್ಟೇಡಿಯಂನ ಸಿಬ್ಬಂದಿಗಳಲ್ಲಅತ್ಯಾಚಾರಿಗಳು ಕಬ್ಬನ್ ಪಾರ್ಕಿನ ಟೆನ್ನಿಸ್ ಸ್ಟೇಡಿಯಂನ ಸಿಬ್ಬಂದಿಗಳಲ್ಲ

ಘಟನೆ ವಿವರ : 2015ರ ನವೆಂಬರ್‌ನಲ್ಲಿ ತುಮಕೂರು ಮೂಲದ ಮಹಿಳೆ ಕಬ್ಬನ್ ಪಾರ್ಕ್ ಆವರಣದಲ್ಲಿರುವ ಟೆನಿಸ್ ಕ್ಲಬ್ ಸದಸ್ಯತ್ವ ಪಡೆಯಲು ಆಗಮಿಸಿದ್ದರು. ಆದರೆ, ಆ ಸಮಯಕ್ಕೆ ಕ್ಲಬ್ ಕಚೇರಿಯ ಅವಧಿ ಮುಗಿದಿತ್ತು.

ಪಾರ್ಕ್‌ನಿಂದ ಹೊರ ಹೋಗುವ ದಾರಿಯನ್ನು ಆಕೆ ಭದ್ರತಾ ಸಿಬ್ಬಂದಿಗಳಾಗಿದ್ದ ರಾಜು ಮೇಧಿ (28), ಬೋಲಿನ್ ದಾಸ್ (38) ಬಳಿ ಕೇಳಿದ್ದರು. ದಾರಿ ತೋರಿಸುವ ನೆಪದಲ್ಲಿ ಆಕೆಯನ್ನು ಕರೆದುಕೊಂಡು ಹೋದ ಇಬ್ಬರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು.

ಸಿದ್ದಲಿಂಗಯ್ಯ ವೃತ್ತದ ಬಳಿ ಅಳುತ್ತಾ ನಿಂತುಕೊಂಡಿದ್ದ ಆಕೆಯನ್ನು ರಾತ್ರಿ ಗಸ್ತಿನಲ್ಲಿದ್ದ ಕಬ್ಬನ್ ಪಾರ್ಕ್ ಠಾಣೆಯ ಎಎಸ್‌ಐ ಗುರುತಿಸಿದ್ದರು. ಆಗ ಅತ್ಯಾಚಾರ ನಡೆದ ವಿಷಯ ಬೆಳಕಿಗೆ ಬಂದಿತ್ತು. ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿ, ಮರುದಿನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಅಪರಾಧಿಗಳು ಕ್ರೂರವಾಗಿ ವರ್ತಿಸಿ ಅತ್ಯಾಚಾರ ನಡೆಸಿದ್ದಾರೆ. ಆದ್ದರಿಂದ, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳ್ಳುವ ಅವಕಾಶವನ್ನು ಸಹ ನ್ಯಾಯಾಲಯ ನೀಡಿಲ್ಲ.

English summary
Raju Medhi and Balin Das two security guards who raped a 30 year old woman inside Cubbon Park, Bengaluru in November 2015 have been sentenced to life by a city court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X