ಇದು ಬೆಂಗಳೂರು ಮಳೆ ಬರೆದ ಚಿತ್ರ! ಸ್ವಲ್ಪ ಸಿಹಿ, ಜಾಸ್ತಿ ಕಹಿ!

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 9: ಗಿಡಮರಗಳ ಮೇಲೆ ಮುತ್ತು ಪೋಣಿಸಿಟ್ಟಂತೆ ಕಾಣುವ ತುಂತುರು ಹನಿ, ಮಡಿಕೇರಿಯನ್ನು ಬೆಂಗಳೂರಿಗೆ ಎಳೆದುತಂದ ಮಂಜುಮುಸುಕಿದ ವಾತಾವರಣ, ಕಚೇರಿ, ಶಾಲೆಯನ್ನೆಲ್ಲ ಬಿಟ್ಟು ಲಗುಬಗೆಯಲ್ಲಿ ಮನೆಸೇರಿಕೊಳ್ಳುವ ತವಕ, ಇಳೆಗೆ ಮುತ್ತಿಕ್ಕಲು ಸಿದ್ಧನಾದ ವರುಣ ಬೆಂಗಳೂರಿಗೊಂದು ಆಹ್ಲಾದಕರ ಮೂಡ್ ತಂದಿಟ್ಟಿದ್ದಂತೂ ನಿಜ.

ಎಲ್ಲೋ ನಾಲ್ಕು ಹನಿ ಬೀಳಿಸಿ ಹೊರಟು ಹೋಗಪ್ಪ ಅಂದ್ರೆ ಈ ವರುಣ ಹೀಗಾ ಸುರ್ಯೋದು?! ಅದೂ ಈ ಬೆಂಗಳೂರಲ್ಲಿ! ಸೆ.8 ರಂದು ಉದ್ಯಾನ ನಗರಿಯಲ್ಲಿ ಎಡಬಿಡದೆ ನರ್ತಿಸಿದ ವರುಣ, ಮರಣ ಮೃದಂಗವನ್ನೂ ಬಾರಿಸಿದ್ದು ಮಾತ್ರ ಶೋಚನೀಯ ಸಂಗತಿ! ಮರದ ಕೆಳಗೆ ಕಾರು ನಿಲ್ಲ್ಲಿಸಿದ ತಪ್ಪಿಗೆ ಮೃತರಾದ ಮೂವರ ಸಾವು ಮಳೆ ಎಂದರೆ ಸಾಕು ಬೆಂಗಳೂರಿಗರು ಬೆಚ್ಚಿಬೀಳುವಂಥ ಸನ್ನಿವೇಶ ನಿರ್ಮಿಸಿದೆ.

ಕರ್ನಾಟಕದ ಜಲಾಶಯಗಳ ಶನಿವಾರದ ನೀರಿನ ಮಟ್ಟ

ಒಂದೆಡೆ ಸೊಬಗಿನ ಚಿತ್ರ ಬರೆದ ಬೆಂಗಳೂರು ಮಳೆ ಇನ್ನೊಂದೆಡೆ ತನ್ನ ರುದ್ರ ನರ್ತನದಿಂದ ಅಮಾಯಕರ ಕಣ್ಣೀರಿಗೆ ಕಾರಣವಾಗಿದೆ.

ಇನ್ನೆರಡು ದಿನ ಬೆಂಗಳೂರಿಗರಿಗೆ ಮಳೆಕಾಟ ತಪ್ಪಿದ್ದಲ್ಲ!

ಇತ್ತ ಮಳೆಯಿಂದಾಗಿ ಕುಟುಂಬ ಸದಸ್ಯರನ್ನು ಕಳೆದುಕೊಂಡ ಬೆಂಗಳೂರಿನ ಕತೆಯೊಂಡೆಯಾದರೆ ಅತ್ತ ಗುರುಗಾಂವ್ ನಲ್ಲಿ ಶಾಲೆಯ ಶೌಚಾಲಯದಲ್ಲಿ ಹತ್ಯೆಯಾದ ಏಳು ವರ್ಷದ ಬಾಲಕನ ತಂದೆ ತಾಯಿಯ ಆಕ್ರಂದನ ಇನ್ನೊಂದೆಡೆ. ಹೀಗೆ ಸಿಹಿಗಿಂತ ಹೆಚ್ಚಾಗಿ ಕಹಿಯಿಂದಲೇ ಸೆ.8 ರ ಶುಕ್ರವಾರ ಕಳೆದಿದೆ!

ಇದು ಮಳೆ ಬರೆದ ಚಿತ್ರ

ಇದು ಮಳೆ ಬರೆದ ಚಿತ್ರ

ಬೆಂಗಳೂರಿನಲ್ಲಿ ಧೋ ಎಂದು ಸುರಿದ ಮಳೆ ಅದೆಷ್ಟು ತೀವ್ರವಾಗಿತ್ತೆಂದರೆ ರಸ್ತೆಯಲ್ಲಿ ಛತ್ರಿ ಹಿಡಿದು ಸಾಗುತ್ತಿದ್ದ ವ್ಯಕ್ತಿಯ ಛತ್ರಿಯಷ್ಟೇ ಕಣ್ಣಿಗೆ ಬಿದ್ದು, ಅಲ್ಲೊಂದು ವ್ಯಕ್ತಿಯಿರುವುದೇ ಅನುಮಾನ ಎಂಬಷ್ಟು ಮಸುಕಾಗಿತ್ತು!

ನಮ್ಮ ಆಕ್ರಂದನ ಕೇಳೋರ್ಯಾರು?

ನಮ್ಮ ಆಕ್ರಂದನ ಕೇಳೋರ್ಯಾರು?

ಗುರುಗಾಂವ್ ನ ರಿಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಹತ್ಯೆಯಾದ ಏಳು ವರ್ಷದ ಪುಟ್ಟ ಬಾಲಕನ ತಾಯಿಯನ್ನು ಸಂಬಂಧಿಗಳು ಸಂತೈಸುತ್ತಿರುವ ದೃಶ್ಯ ಹೃದಯಕಲಕುವಂತಿದೆ.

ಗದ್ಗದಿತರಾದ ತಂದೆ

ಗದ್ಗದಿತರಾದ ತಂದೆ

ಗುರುಗಾಂವ್ ನ ರಿಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಹತ್ಯೆಯಾದ ಮಗುವಿನ ತಂದೆ ವರುಣ್ ಠಾಕೂರ್ ತಮ್ಮ ಮಗುವನ್ನು ನೆನಪಿಸಿಕೊಂಡು ಗದ್ಗದಿತರಾದ ದೃಶ್ಯ.

ಪ್ರಾರ್ಥನೆ

ಪ್ರಾರ್ಥನೆ

ಮಂಗಳೂರಿನಲ್ಲಿ ಶುಕ್ರವಾರ ತಾಯಿ ಮೇರಿಯ ಜನ್ಮದಿನವನ್ನು ಭಕ್ತರು ಭಕ್ತಿ, ಶ್ರದ್ಧೆಯಿಂದ ಆಚರಿಸಿದ್ದು ಹೀಗೆ.

ನಜ್ಜುಗುಜ್ಜಾದ ಆಟೋ

ನಜ್ಜುಗುಜ್ಜಾದ ಆಟೋ

ಬೆಂಗಳೂರಿನಲ್ಲಿ ಸೆ.8 ರಂದು ಸುರಿದ ಮಳೆಗೆ ಆಟೋ ರಿಕ್ಷಾ ಮೇಲೆ ಮರವೊಂದು ಬಿದ್ದ ಪರಿಣಾಮ ಆಟೋ ನಜ್ಜುಗುಜ್ಜಾದ ದೃಶ್ಯ.

ಸಾಂಪ್ರದಾಯಿಕ ಧಿರಿಸಿನಲ್ಲಿ ಯುವರಾಜ!

ಸಾಂಪ್ರದಾಯಿಕ ಧಿರಿಸಿನಲ್ಲಿ ಯುವರಾಜ!

ಮರಾಠ್ವಾಡ ಮೆಳವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಹಾರಾಷ್ಟ್ರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇಲ್ಲಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ್ದು ಹೀಗೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Heavy rain in capital city Bengaluru creates so many problems in the city. Here are few pictures which shows Bengaluru rains effect and some important pictures of various incidents of Sep 8th in india.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ