ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೌರಿಂಗ್ ಇನ್ಸ್ಟಿಟ್ಯೂಟ್‌ನ ಲಾಕರ್‌ನಲ್ಲಿ ಭಾರಿ ಮೊತ್ತದ ಹಣ, ಚಿನ್ನದ ಬಿಸ್ಕತ್ತು ಪತ್ತೆ

By Manjunatha
|
Google Oneindia Kannada News

ಬೆಂಗಳೂರು, ಜುಲೈ 21: ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್ಟಿಟ್ಯೂಟ್‌ನ ಲಾಕರ್‌ಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿದ್ದು ಆದಾಯ ತೆರಿಗೆ ಇಲಾಖೆ ಹೆಚ್ಚಿನ ತನಿಖೆ ಮಾಡುತ್ತಿದೆ.

ಗುಜರಾತ್ ಮೂಲದ ಫೈನಾನ್ಸಿಯರ್ ಹಾಗೂ ಉದ್ಯಮಿ ಅವಿನಾಶ್ ಎಂಬುವರು ಬಳಸುತ್ತಿದ್ದ ಮೂರು ಲಾಕರ್‌ಗಳಲ್ಲಿ 3.9 ಕೋಟಿ ನಗದು, ಹಲವು ಚಿನ್ನದ ಬಿಸ್ಕತ್ತುಗಳು, ಒಡವೆಗಳು ಹಾಗೂ ಕೋಟ್ಯಂತರ ಮೌಲ್ಯದ ಆಸ್ತಿಯ ದಾಖಲೆಗಳು ದೊರೆತಿವೆ.

ಐಎಎಸ್‌ ಅಧಿಕಾರಿ ಮನೆಗೆ ಕನ್ನ ಹಾಕಿದ್ದ ಖದೀಮರು ಸಿಕ್ಕಿಬಿದ್ರುಐಎಎಸ್‌ ಅಧಿಕಾರಿ ಮನೆಗೆ ಕನ್ನ ಹಾಕಿದ್ದ ಖದೀಮರು ಸಿಕ್ಕಿಬಿದ್ರು

ಬೌರಿಂಗ್ ಇನ್ಸ್ಟಿಟ್ಯೂಟ್‌ನಲ್ಲಿ ಒಟ್ಟು 126 ಲಾಕರ್‌ಗಳಿವೆ, ಇವುಗಳನ್ನು ಯಾರೂ ಸರಿಯಾಗಿ ಬಳಸುತ್ತಿರಲಿಲ್ಲ, ಹಾಗಾಗಿ ಆಡಳಿತ ಮಂಡಳಿಯು ಎಲ್ಲಾ ಲಾಕರ್‌ ಮಾಲೀಕರಿಗೆ ಪತ್ರ ಬರೆದು ಲಾಕರ್ ಪರಿಶೀಲಿಸುವಂತೆ ತಿಳಿಸಿತ್ತು. ಹೀಗಾಗಿ ಎಲ್ಲಾ ಲಾಕರ್‌ಗಳ ಮಾಲೀಕರು ಲಾಕರ್ ತೆರೆಯಲು ಬಂದಿದ್ದರು ಆದರೆ ಮೂರು ಲಾಕರ್‌ಗಳ ಮಾಲೀಕರು ಮಾತ್ರ ಬಂದಿರಲಿಲ್ಲ.

crores of cash and gold biscuit found in bowring institute locker

ಇದರಿಂದ ಮತ್ತೆ ನೊಟೀಸ್ ನೀಡಿದ ಆಡಳಿತ ಮಂಡಳಿ ಸಮಯದ ಗಡುವು ನೀಡಿ, ಗಡುವು ಮುಗಿಯುವದರ ಒಳಗೆ ಬಂದು ಲಾಕರ್ ತೆಗೆದುಕೊಳ್ಳುವಂತೆ ತಿಳಿಸಿತ್ತು. ಗಡುವು ಮುಗಿದ ನಂತರ ನಾವೇ ಲಾಕರ್ ತೆಗೆಯುವುದಾಗಿಯೂ ಹೇಳಿತ್ತು.

25 ಲಕ್ಷ ಬಾಕಿ ಹಣ ಕೇಳಿದ್ದಕ್ಕೆ ಬಿತ್ತು ಗೂಸಾ, ಆರೋಪಿ ಜೈಲು ಪಾಲು 25 ಲಕ್ಷ ಬಾಕಿ ಹಣ ಕೇಳಿದ್ದಕ್ಕೆ ಬಿತ್ತು ಗೂಸಾ, ಆರೋಪಿ ಜೈಲು ಪಾಲು

ಲಾಕರ್‌ಗಳ ಮಾಲೀಕ ಅವಿನಾಶ್ ಬರದ ಕಾರಣ ತಾವೇ ಲಾಕರ್ ಒಡೆದ ಆಡಳಿತ ಸಿಬ್ಬಂದಿ ಅವಕ್ಕಾಗುವಂತೆ ಭಾರಿ ಮೊತ್ತದ ಹಣ ಹಾಗೂ ಚಿನ್ನದ ಬಿಸ್ಕೆಟ್‌ಗಳು ಕಣ್ಣಿಗೆ ಬಿದ್ದಿವೆ. ಕೂಡಲೇ ಆಡಳಿತ ಮಂಡಳಿಯು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದೆ.

ಲಾಕರ್‌ನಲ್ಲಿ ಸಿಕ್ಕ ಹಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಆದಾಯ ತೆರಿಗೆ ಅಧಿಕಾರಿಗಳು, ಈ ಲಾಕರ್ ಅವಿನಾಶ್ ಅವರದ್ದೆಯಾ ಅಥವಾ ಬೇರೆ ಯಾರಾದರೂ ಬಳಸುತ್ತಿದ್ದರಾ ಎಂದು ತನಿಖೆ ಮಾಡುತ್ತಿದೆ.

English summary
3.9 crore cash and large number of gold biscuit and some documents found in Bowring institute lockers. IT department investigating the case. Locker belongs to Gujarati bushiness man Avinash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X