ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಇಪಿ ಅಧ್ಯಕ್ಷೆ ನೌಹೀರಾ ವಿರುದ್ಧ ವಂಚನೆ ಆರೋಪ: ದೂರು

By Nayana
|
Google Oneindia Kannada News

ಬೆಂಗಳೂರು, ಮೇ 17: ಮಹಿಳಾ ಎಂಪವರ್‌ಮೆಂಟ್‌ ಪಕ್ಷದ ಅಧ್ಯಕ್ಷೆ ನೌಹೀರಾ ಶೇಖ್‌ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಪಕ್ಷದ ಅಭ್ಯರ್ಥಿಗಳಿಂದಲೇ ಹಣ ಪಡೆದಿದ್ದಲ್ಲದೆ, ಪಾರ್ಟಿ ಫಂಡ್ ನೆಪದಲ್ಲಿ ಅಭ್ಯರ್ಥಿಗಳಿಂದ ಖಾಲಿ ಚೆಕ್ ಪಡೆದು ವಂಚಿಸಿರುವ ಆರೋಪದ ಮೇಲೆ ಜೀವನ್‌ಭೀಮಾ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ರಾಜ್ಯದ 77 ಶಾಸಕರ ವಿರುದ್ಧ ದಾಖಲಾಗಿವೆ ಕ್ರಿಮಿನಲ್ ಪ್ರಕರಣ! ರಾಜ್ಯದ 77 ಶಾಸಕರ ವಿರುದ್ಧ ದಾಖಲಾಗಿವೆ ಕ್ರಿಮಿನಲ್ ಪ್ರಕರಣ!

ಸಾಗರ ಕ್ಷೇತ್ರದ ಅಭ್ಯರ್ಥಿ ಕಲಾವತಿ ಅವರು ನೌಹೀರಾ ಶೇಖ್‌ ಅವರು ಚುನಾವಣಾ ಖರ್ಚನ್ನು ಪಕ್ಷದಿಂದಲೇ ನಿರ್ವಹಿಸುವುದಾಗಿ ನನ್ನಿಂದ 5 ಲಕ್ಷ ಪಡೆದಿದ್ದರು. ಚುನಾವಣೆಯಲ್ಲಿ ನಾನು 23 ಲಕ್ಷ ಸಾಲ ಮಾಡಿಕೊಂಡು ಪ್ರಚಾರ ನಡೆಸಿದ್ದೇನೆ.

Criminal case filed against MEP chief

ಆದರೆ ಚುನಾವಣೆ ವೆಚ್ಚವನ್ನು ನೀಡದೆ ಸತಾಯಿಸಿ ನನ್ನಿಂದ ಪಡೆದಿರುವ ಖಾಲಿ ಚೆಕ್ಕನ್ನೂ ವಾಪಸ್ ನೀಡುತ್ತಿಲ್ಲ ಎಂದು ಜೀವನ್‌ಭೀಮಾ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ.

ಆದರೆ ನೌಹೀರಾ ಶೇಖ್ ಹಣ ಪಡೆದಿರುವ ಕುರಿತು ಇನ್ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ, ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ.

English summary
A criminal case has been filed against All India Mahila Empowerment Party chief Dr. Nowhera Shaik by her own party candidates alleging cheating on party fund in JB Nagar police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X