• search

ಸುನಿಲ್ ಹತ್ಯೆಗೆ ಸುಪಾರಿ, ಬೆಳೆಗೆರೆ ವಿರುದ್ಧ ಎಫ್ಐಆರ್ : ಎಸಿಪಿ ಸತೀಶ್

By Mahesh
Subscribe to Oneindia Kannada
For bangalore Updates
Allow Notification
For Daily Alerts
Keep youself updated with latest
bangalore News
    ರವಿ ಬೆಳಗೆರೆ ಬಂಧನ | ಹೆಚ್ಚುವರಿ ಆಯುಕ್ತರು ಸತೀಶ್ ಕುಮಾರ್ ಕೇಸ್ ಬಗ್ಗೆ ಹೇಳೋದು ಹೀಗೆ | Oneindia Kannada

    ಬೆಂಗಳೂರು, ಡಿಸೆಂಬರ್ 08: ಪತ್ರಕರ್ತ ರವಿ ಬೆಳಗೆರೆ ಅವರು ಹಾಯ್ ಬೆಂಗಳೂರು ಪತ್ರಿಕೆಯ ಮಾಜಿ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ ಪ್ರಕರಣದ ಬಗ್ಗೆ ವಿವರಣೆ ನೀಡಲು ಬೆಂಗಳೂರು ಕ್ರೈಂ ವಿಭಾಗದ ಹೆಚ್ಚುವರಿ ಆಯುಕ್ತ ಸತೀಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿದರು.

    ಆಗಸ್ಟ್ 28ರಂದು ಸುನಿಲ್ ಹೆಗ್ಗರವಳ್ಳಿಯ ಹತ್ಯೆಯಾಗಬೇಕಿತ್ತು. ಆದರೆ, ಸುಪಾರಿ ಪಡೆದ ಹಂತಕ ತಾಂತ್ರಿಕ ಕಾರಣಗಳಿಗಾಗಿ ತನ್ನ ಯೋಜನೆಯನ್ನು ಹಿಂಪಡೆಯುತ್ತಾನೆ. ಪತ್ರಕರ್ತೆ ಗೌರಿ ಹತ್ಯೆಗೂ ಈ ಕೇಸಿಗೂ ಸಂಬಂಧವಿಲ್ಲ.

    ಸುನೀಲ್ ಕೊಲೆಗೆ ಸುಪಾರಿ ಕೊಟ್ಟಿದ್ದನ್ನು ಒಪ್ಪಿಕೊಂಡ ರವಿ ಬೆಳಗೆರೆ?

    ಆದರೆ, ಗೌರಿ ಹತ್ಯೆ ಪ್ರಕರಣಕ್ಕೆ ಬಳಸಿದ್ದ ಆಯುಧ(ಗನ್)ದ ಮೂಲ ಹುಡುಕಿಕೊಂಡು ಹೋದಾಗ ಈ ಕೇಸ್ ಬಗ್ಗೆ ತಿಳಿದು ಬಂದಿದೆ ಎಂದುಆಯುಕ್ತ ಸತೀಶ್ ಕುಮಾರ್ ಅವರು ಹೇಳಿದರು. ಸುದ್ದಿಗೋಷ್ಠಿಯ ಮುಖ್ಯಾಂಶಗಳು ಹೀಗಿವೆ:

    *ವೆಪನ್ ಡೀಲರ್ ಆಗಿರುವ ತಾಹೀರ್ ಹುಸೇನ್ ಅಲಿಯಾಸ್ ಅನೂಪ್ ಗೌಡ ಎಂಬಾತನನ್ನು ಹೊಸೂರಿನ ಲಾಡ್ಜಿನಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

    *ವಿಚಾರಣೆ ವೇಳೆ ಮತ್ತೊಬ್ಬ ವೆಪನ್ ಡೀಲರ್ ವಿಜಯಪುರದ ಚಡಚಣದ ಶಶಿಧರ ಮುಂಡೆವಾಡಗಿ ಹೆಸರು ತಿಳಿಸಿದ.

    Crime Branch ACP Satish Kumar on Ravi Belagere Supari Killing Sunil Heggaravalli

    *ಶಶಿಧರ ಮುಂಡೆವಾಡಗಿ ಎಂಬಾತನನ್ನು ಡಿಸೆಂಬರ್ 07ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆತ ರವಿ ಬೆಳಗೆರೆ ಅವರು ಸುಪಾರಿ ನೀಡಿರುವ ಬಗ್ಗೆ ಮಾಹಿತಿ ನೀಡಿದ. ಈತನ ಬಳಿ 02 ಜೀವಂತ ಗುಂಡುಗಳು ಪತ್ತೆಯಾಗಿತ್ತು.

    * ಶಶಿಧರ ನೀಡಿದ ಹೇಳಿಕೆಯಂತೆ: ಆಗಸ್ಟ್ 28, 2017ರಂದು ಶಶಿಧರ ಹಾಗೂ ಆತನ ಸಹಚರ ವಿಜು ಬಡಿಗೇರ್ ಅವರು ಹಾಯ್ ಬೆಂಗಳೂರು ಕಚೇರಿಗೆ ಹೋಗಿರುತ್ತಾರೆ.

    ನನಗೆ ನಿಜಕ್ಕೂ ಆಘಾತವಾಗಿದೆ: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ

    * ಈ ಸಂದರ್ಭದಲ್ಲಿ ಒಂದು ಗನ್, 04 ಜೀವಂತ ಗುಂಡುಗಳು, 01 ಚಾಕು ನೀಡಿ ಸುನೀಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲುವಂತೆ ರವಿ ಬೆಳಗೆರೆ ಸೂಚಿಸುತ್ತಾರೆ. ಆತನ ಮೇಲೆ ವೈಯಕ್ತಿಕ ದ್ವೇಷವಿದೆ ಎಂದು ರವಿ ಹೇಳಿರುತ್ತಾರೆ.

    * ಸುಪಾರಿ ಮೊತ್ತದ ಮುಂಗಡವಾಗಿ 15,000 ರು ನೀಡಿರುತ್ತಾರೆ. ಆದರೆ, ಸುನಿಲ್ ಹತ್ಯೆ ಮಾಡುವಲ್ಲಿ ವಿಫಲರಾದ ಶಾರ್ಪ್ ಶೂಟರ್ಸ್ ಗಳು ಆಯುಧಗಳನ್ನು ವಾಪಸ್ ಮಾಡಿ ಮುಂದಿನ ತಿಂಗಳು ಮತ್ತೆ ಪ್ರಯತ್ನಿಸುವುದಾಗಿ ಹೇಳುತ್ತಾರೆ.

    *ಸುನೀಲ್ ಹೆಗ್ಗರವಳ್ಳಿ ಮರ್ಡರ್ ಬಗ್ಗೆ ಮಾಹಿತಿ ಸಿಕ್ಕಿದಾಗ ಎಫ್ ಐಆರ್ ಹಾಕಿದ್ದೇವೆ. ರವಿ ಬೆಳಗೆರೆ ಮನೆಯಿಂದ ರಿವಾಲ್ವರ್, ಡಬ್ಬಲ್ ಬ್ಯಾರಲ್ ಗನ್ ಸಿಕ್ಕಿದೆ.

    * ರವಿ ಬೆಳೆಗೆರೆ ವಿರುದ್ಧ ಐಪಿಸಿ ಸೆಕ್ಷನ್ 307 ಹಾಗೂ 120 (ಬಿ) ಅನ್ವಯ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 3 ಹಾಗೂ 25ರ ಅನ್ವಯ ಸುಬ್ರಮಣ್ಯ ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    * ರವಿ ಬೆಳಗೆರೆ ಅವರ ಮನೆ, ಕಚೇರಿ, ಕಾರು ತಪಾಸಣೆ ನಡೆಸಲಾಗುತ್ತಿದೆ. ಸಿಸಿಬಿ ಪೊಲೀಸರು ಸಂಜೆ ವೇಳೆಗೆ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ.

    ಇನ್ನಷ್ಟು ಬೆಂಗಳೂರು ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Satish Kumar, Additional Commissioner of police, City Crime confirms a case booked against Hai Bangalore editor Ravi Belagere for giving Supari to Kill his ex colleague Journalist Sunil Heggaravalli.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more