ಕೇರಳದ ದುರಂತ : ಬೆಂಗಳೂರು ಕರಗದಲ್ಲಿ ಪಟಾಕಿ ನಿಷೇಧ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 12 : ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್‌ನ ದೇವಾಲಯದಲ್ಲಿ ನಡೆದ ಅಗ್ನಿ ದುರಂತದ ಹಿನ್ನಲೆಯಲ್ಲಿ ಬೆಂಗಳೂರಿನ ಕರಗದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ. ಏ.12ರಿಂದ 24ರ ವರೆಗೆ ಕರಗ ಮಹೋತ್ಸವ ನಡೆಯಲಿದೆ.

ಧರ್ಮರಾಯಸ್ವಾಮಿ ದೇವಾಲಯ ಕರಗ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷ ಪಿ.ಆರ್.ರಮೇಶ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಏ.22ರಂದು ನಡೆಯುವ ಕರಗದಂದು ಪಟಾಕಿ ಹೊಡೆಯುವ ಬದಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ' ಎಂದು ಹೇಳಿದ್ದಾರೆ. [ಪಟಾಕಿ ಹೊಡೆಯಬೇಡಿ ಎಂಬ ಅಜ್ಜಿ ಮಾತು ಕೇಳಲಿಲ್ಲ]

karaga

'ಹಿಂದಿನಿಂದಲೂ ಬೆಂಗಳೂರು ಕರಗದಲ್ಲಿ ಪಟಾಕಿಗಳನ್ನು ಹೊಡೆಯಲಾಗುತ್ತಿದೆ. ಕೇರಳದ ದುರ್ಘಟನೆ ಮತ್ತು ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ಬಾರಿ ಪಟಾಕಿ ಹೊಡೆಯುವುದಿಲ್ಲ. ಭಕ್ತರು ಮತ್ತು ಸಂಘಟನೆಗಳು ಪಟಾಕಿ ಹೊಡೆಯದಂತೆ ನೋಡಿಕೊಳ್ಳಲಾಗುತ್ತದೆ' ಎಂದು ರಮೇಶ್ ತಿಳಿಸಿದ್ದಾರೆ. [ಕೇರಳ ಪಟಾಕಿ ದುರಂತ, 5 ಜನರ ಬಂಧನ]

ಭಾನುವಾರ ಮುಂಜಾನೆ ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್‌ನ ಮೂಕಾಂಬಿಕ ದೇವಸ್ಥಾನದ ಜಾತ್ರೆಯಲ್ಲಿ ಪಟಾಕಿ ಸಿಡಿದು ನಡೆದ ಅಗ್ನಿ ದುರಂತದಲ್ಲಿ 106 ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಭಕ್ತರು ಗಾಯಗೊಂಡಿದ್ದರು. ಆದ್ದರಿಂದ, ಕರಗದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ. [ಸುದ್ದಿ ದನಿ : ಪಟಾಕಿ ಹೊಡೆಯಬೇಡಿ ಎಂದ ಅಜ್ಜಿ]

ಕರಗಕ್ಕೆ ಸಕಲ ಸಿದ್ಧತೆ : ಬೆಂಗಳೂರು ನಗರದ ಪಾರಂಪರಿಕ ಆಚರಣೆಯಾದ ಕರಗಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಏ.14ರಿಂದ 24ರ ತನಕ ಹನ್ನೊಂದು ದಿನಗಳ ಕಾಲ ಕರಗ ಮಹೋತ್ಸವ ನಡೆಯಲಿದೆ. ಈ ಬಾರಿ ಅರ್ಚಕ ಲಕ್ಷ್ಮೀಶ ಕರಗ ಹೊರಲಿದ್ದಾರೆ.

ಚೈತ್ರ ಶುಕ್ರ ಸಪ್ತಮಿಯಿಂದ ಬಹುಳ ಬಿದಿಗೆಯವರೆಗೆ ಕರಗ ಮಹೋತ್ಸವ ನಡೆಯಲಿದೆ. ಕರಗ ಉತ್ಸವದ ಕೇಂದ್ರಬಿಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ರಥೋತ್ಸವ ಏ.22ರಂದು ನಡೆಯಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಬಾರಿಯ ಕರಗ ಮಹೋತ್ಸವಕ್ಕಾಗಿ ಒಂದು ಕೋಟಿ ರೂ.ಅನುದಾನ ಮೀಸಲಾಗಿಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Karaga festival committee has taken a decision to ban crackers this time in the wake of Sunday's Kerala Puttingal temple fire accident that has taken lives of over 106 people. 2016 Karaga festival will be held from April 14 to 22.
Please Wait while comments are loading...