ಕೆ.ಆರ್.ಮಾರ್ಕೆಟ್ ಕೋಟೆ ವೆಂಕಟರಮಣ ದೇವಸ್ಥಾನದ ಗರುಡಗಂಬ ಬಿರುಕು

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 12: ಇಲ್ಲಿನ ಕೆ.ಆರ್.ಮಾರ್ಕೆಟ್ ಸಮೀಪ ಇರುವ ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನದ ಗರುಡಗಂಬದಲ್ಲಿ ಬಿರುಕು ಕಾಣಿಸಿಕೊಂಡಿದೆ. ಐತಿಹಾಸಿಕ ದೇವಸ್ಥಾನದ ಗರುಡಗಂಬವು ಮೂವತ್ತು ಅಡಿ ಎತ್ತರವಿದೆ. ಇಪ್ಪತ್ತೇಳು ಅಡಿಯಲ್ಲಿ ಇಂಗ್ಲಿಷ್ ನ ವಿ ಪದದ ಆಕಾರದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಬಂಟ್ವಾಳದ ಕಡೇಶಿವಾಲಯ ದೇವಸ್ಥಾನದಲ್ಲಿ ಕಳ್ಳತನ, ವಿಗ್ರಹ ದರೋಡೆ

ಅಂದಹಾಗೆ ಗರುಡಗಂಬವು ಕೋಟೆ ಪ್ರೌಢಶಾಲೆಯಿಂದ ಕೆ.ಆರ್.ಮಾರ್ಕೆಟ್ ಗೆ ಸಂಪರ್ಕ ಕಲ್ಪಿಸುವ ಫುಟ್ ಪಾತ್ ಮೇಲಿದೆ. ಪಕ್ಕದಲ್ಲೇ ಇರುವ ರಸ್ತೆಯಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಒಂದು ಪಕ್ಷ ಈ ಗರುಡಗಂಬ ಏನಾದರೂ ಉರುಳಿದರೆ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.

Crack found in Bengaluru Kote Venkataramana swamy temple pole

ವೆಂಕಟರಮಣ ಸ್ವಾಮಿ ದೇವಸ್ಥಾನವು 1695ರಲ್ಲಿ ಮೈಸೂರಿನ ಚಿಕ್ಕ ದೇವರಾಜ ಒಡೆಯರ್ ರಿಂದ ನಿರ್ಮಾಣವಾಗಿದೆ. ಈ ದೇವಸ್ಥಾನದ ಪಕ್ಕದಲ್ಲಿರುವ ಟಿಪ್ಪು ಸುಲ್ತಾನ್ ಅರಮನೆಯ ಮೇಲೆ 1791ರಲ್ಲಿ ಬ್ರಿಟಿಷರು ದಾಳಿ ಮಾಡಿದ ಸಂದರ್ಭದಲ್ಲಿ ಗರುಡಗಂಬ ಹಾಳಾಗಿತ್ತು. ಆ ನಂತರ 1980ರಲ್ಲಿ ಸದ್ಯಕ್ಕೆ ಇರುವ ಕಂಬದ ನಿರ್ಮಾಣ ಮಾಡಲಾಯಿತು.

ಪಲಿಮಾರು ಮಠದಲ್ಲಿ ಗ್ಯಾಸ್ ನಿಂದ ಅಡುಗೆ ಮಾಡಿದ್ರೆ ಮೈಲಿಗೆಯಂತೆ!

ಈಗ ಕಂಬದಲ್ಲಿ ಮೂಡಿರುವ ಬಿರುಕು ಯಾವ ಪ್ರಮಾಣದ್ದು ಎಂಬುದನ್ನು ಪರಿಶೀಲಿಸಬೇಕು. ಜತೆಗೆ ಬೇರೆಲ್ಲಾದರೂ ಬಿರುಕು ಇದೆಯೇ ಎಂಬುದನ್ನು ಪತ್ತೆ ಹಚ್ಚಿ, ಒಂದು ವೇಳೆ ಹಾಗಿದ್ದಲ್ಲಿ ಸರಿಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Crack found in Bengaluru Kote Venkataramana swamy temple poll (Garudagamba). V shaped crack found in 30 feet pole

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ