ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 13: ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯಲ್ಲಿ ಬೆಂಗಳೂರು ನಗರ ದೇಶದ ಎರಡನೇ ಅತಿಹೆಚ್ಚು ಮಾಲಿನ್ಯ ನಗರವಾಗಿ ಪರಿಗಣಿಸಿದ್ದು, ರಾಷ್ಟ್ರ ರಾಜಧಾನಿ ದೆಹಲಿಯನ್ನೂ ಮೀರಿಸಿದೆ.

ಬೆಂಗಳೂರು ನಗರದ ಹೊರ ವಲಯದಲ್ಲಿ ಹೆಚ್ಚುತ್ತಿರುವ ಬೃಹತ್‌ ಕೈಗಾರಿಕೆಗಳು ಹಾಗೂ ಬೆಂಗಳೂರು ನಗರ ಬಳಸುತ್ತಿರುವ ಡೀಸೆಲ್‌ ಆಧರಿತ ಜನರೇಟರ್‌ಗಳಿಂದ ಬೆಂಗಳೂರು ನಗರದ ವಾಯು ಮಾಲಿನ್ಯ ವಿಪರೀತವಾಗಿದೆ ಎಂದು ಸಮೀಕ್ಷೆ ಹೇಳಿದೆ.

ಬೆಂಗಳೂರು ಬಳಲುತ್ತಿದೆ, ಶ್ವಾಸಕೋಶ ಸಂಬಂಧಿ ರೋಗ ಹೆಚ್ಚುತ್ತಿದೆ! ಬೆಂಗಳೂರು ಬಳಲುತ್ತಿದೆ, ಶ್ವಾಸಕೋಶ ಸಂಬಂಧಿ ರೋಗ ಹೆಚ್ಚುತ್ತಿದೆ!

ಅಲ್ಲದೆ ಬೆಂಗಳೂರು ನಗರದ ಧೂಳು ಪೂರಿತ ರಸ್ತೆಗಳು ಹಾಗೂ ವಾಹನಗಳು ಉಗುಳುವ ಹೊಗೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗಲು ಕಾರಣವಾಗಿದೆ ಎಂದು ವರದಿ ಹೇಳಿದೆ. ದೇಶದಲ್ಲಿ ಅತಿ ಹೆಚ್ಚು ಮಾಲಿನ್ಯ ಹೊಂದಿದ ನಗರವಾಗಿ ಪುಣೆ ಕುಖ್ಯಾತಿ ಪಡೆದಿದ್ದು, ರಾಷ್ಟ್ರದ ಅತಿ ಮಾಲಿನ್ಯಪೀಡಿತ ಆರು ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ.

CPCB report says Bengaluru pollution worst than Delhi

ಆದರೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಈ ವರದಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಲ್ಲಗಳೆದಿದ್ದು, ಸಮೀಕ್ಷೆಯ ಅಂಕಿ-ಅಂಶಗಳ ಬಗೆಗೆ ಸಂಶಯ ವ್ಯಕ್ತಪಡಿಸಿದೆ.

ಬೆಂಗಳೂರಲ್ಲಿ ವಾಯು ಗುಣಮಟ್ಟ ನಿಯಂತ್ರಣ ವಲಯ ಅನುಷ್ಠಾನ ಬೆಂಗಳೂರಲ್ಲಿ ವಾಯು ಗುಣಮಟ್ಟ ನಿಯಂತ್ರಣ ವಲಯ ಅನುಷ್ಠಾನ

ಈ ಕುರಿತು ಮಾತನಾಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ಬೆಂಗಳೂರು ನಗರದ ಹೊರ ವಯಲಯದಲ್ಲಿ ವರದಿಯಲ್ಲಿ ಉಲ್ಲೇಖವಾಗಿರುವಂತೆ ಹೆಚ್ಚು ಕೈಗಾರಿಕೆಗಳಿಲ್ಲ, ಆದಾಗ್ಯೂ ಕೂಡ ನಗರದ ಹೊರವಲಯದ ಕೈಗಾರಿಕೆಗಳಿಂದಲೇ ಹೆಚ್ಚು ಮಾಲಿನ್ಯ ಉಂಟಾಗಿದೆ ಎಂದು ವರದಿ ತಿಳಿಸಿದೆ.

ಡೀಸೆಲ್‌ ವಾಹನ ನಿಷ್ಕ್ರಿಯ: ಪ್ರೋತ್ಸಾಹಧನ 50 ಸಾವಿರಕ್ಕೆ ಹೆಚ್ಚಿಸಲು ಚಿಂತನೆ ಡೀಸೆಲ್‌ ವಾಹನ ನಿಷ್ಕ್ರಿಯ: ಪ್ರೋತ್ಸಾಹಧನ 50 ಸಾವಿರಕ್ಕೆ ಹೆಚ್ಚಿಸಲು ಚಿಂತನೆ

ಹೀಗಾಗಿ ವರದಿ ಬಗೆಗೆ ಹಲವು ಸಂಶಯಗಳಿವೆ. ಆ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಜತೆ ಚರ್ಚಿಸಿ ಪ್ರತಿಕ್ರಿಯೆ ನೀಡಲಾಗುವುದು ಎಂದಿದ್ದಾರೆ. ಏನೇ ಆದರೂ ಬೆಂಗಳೂರು ನಗರದಲ್ಲಿ ಪರಿಸರ ಮಾಲಿನ್ಯ ಅದರಲ್ಲೂ ವಾಯು ಮಾಲಿನ್ಯ ವಿಪರೀತವಾಗುತ್ತಿದ್ದು, ವರ್ಷಕ್ಕೆ ಸರಾಸರಿ 5 ಲಕ್ಷ ಹೆಚ್ಚುವರಿ ವಾಹನಗಳು ರಸ್ತೆಗಿಳಿಯುವುದನ್ನು ಇಲ್ಲಿ ಸ್ಮರಿಸಬಹುದು.

English summary
Central Pollution Control Board has revealed that Bengaluru air pollution is higher than nation's capital Delhi and Bengaluru stands second most polluted city in the country after Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X