ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: 50 ಮನೆಗಳ ಅಪಾರ್ಟ್‌ಮೆಂಟ್‌ಗೆ ಎಸ್‌ಟಿಪಿ ಕಡ್ಡಾಯ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 21: ಐವತ್ತಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ಗಳು ಎಸ್‌ಟಿಪಿ ಹೊಂದುವಂತೆ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶ ನೀಡಿದೆ.

ಬೆಂಗಳೂರು ವೃಷಭಾವತಿ ಕಣಿವೆ ಹಾಗೂ ಆ ಕಣಿವೆಯಲ್ಲಿರುವ ಭೈರಮಂಗಲ ವ್ಯಾಪ್ತಿಯ ಕಾರ್ಖಾನೆಗಳು ಕಡ್ಡಾಯವಾಗಿ ಎಸ್‌ಟಿಪಿ ನೀರು ಬಳಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು 2018ರ ಜನವರಿ 10,11ರಂದು ವೃಷಭಾವತಿ ಕಣಿವೆ, ಭೈರಮಂಗಲ ಕೆರೆಯಿಂದ ಕಾವೇರಿ ಸಂಗಮದವರೆಗೆ ಪರಿಶೀಲನೆ ಕೈಗೊಂಡಿತ್ತು.

ತ್ಯಾಜ್ಯ ಸಂಸ್ಕರಣಾ ಘಟಕ ಸುತ್ತ ಬಫರ್ ವಲಯ: 6 ಘಟಕ ಪುನರಾರಂಭತ್ಯಾಜ್ಯ ಸಂಸ್ಕರಣಾ ಘಟಕ ಸುತ್ತ ಬಫರ್ ವಲಯ: 6 ಘಟಕ ಪುನರಾರಂಭ

ಈ ಪರಿಶೀಲನೆಯಲ್ಲಿ ಕಂಡುಬಂದ ಆಘಾತಕಾರಿ ಅಂಶಗಳನ್ನು ಪಟ್ಟಿ ಮಾಡಿದೆ ಹಾಗೂ ಹಲವು ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದೆ. ವೃಷಭಾವತಿ ಕಣಿವೆ ವ್ಯಾಪ್ತಿಯ ಕಾರ್ಖಾನೆಗಳು ಕೊಳಚೆ ನೀರನ್ನು ನೇರವಾಗಿ ಕಣಿವೆಗೆ ಹರಿಸುತ್ತವೆ. ಸರ್ವೀಸ್‌ ಸ್ಟೇಷನ್‌, ಪ್ಲಾಸ್ಟಿಕ್‌ ಮರುಬಳಕೆ ಘಟಕ, ಎಲೆಕ್ಟ್ರೋಪ್ಲೇಟಿಂಗ್‌ ಘಟಕ, ಗ್ರೀಸ್‌ ಹಾಗೂ ಸಂಸ್ಕರಿಸದ ಕೊಳಚೆ ನೀರನ್ನು ಕಣಿವೆಗೆ ಬಿಡುತ್ತಿವೆ.

ಅಪಾರ್ಟ್‌ಮೆಂಟ್‌ ಪರಿಶೀಲನೆ

ಅಪಾರ್ಟ್‌ಮೆಂಟ್‌ ಪರಿಶೀಲನೆ

ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿರುವ ಕೊಳಗೇರಿ, ಬಡಾವಣೆಗಳಿಗೆ ಒಳಚರಂಡಿ ಸಂಪರ್ಕ ಇಲ್ಲ ಎಂಬುದು ಪತ್ತೆಯಾಗಿದೆ, ಹೀಗಾಗಿ 50ಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ಗಳು ಎಸ್‌ಟಿಪಿ ಹೊಂದಿರುವ ಹಾಗೂ ಎಸ್‌ಟಿಪಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಪರಿಶೀಲನೆ ಮಾಡಬೇಕು ಎಂದು ತಿಳಿಸಿದೆ.

ವೃಷಭಾವತಿ ಒಡಲಿಗೆ ನಿತ್ಯ 484 ದಶಲಕ್ಷ ಲೀಟರ್‌ ಕೊಳಚೆ ನೀರು

ವೃಷಭಾವತಿ ಒಡಲಿಗೆ ನಿತ್ಯ 484 ದಶಲಕ್ಷ ಲೀಟರ್‌ ಕೊಳಚೆ ನೀರು

ದಿನನಿತ್ಯ ವೃಷಭಾವತಿ ಕಣಿವೆಗೆ 484 ದಶಲಕ್ಷ ಲೀಟರ್‌ ಕೊಳಚೆ ನೀರು ಸೇರುತ್ತಿದೆ, ಇದು ಭೈರಮಂಗಲ ಕೆರೆಗೂ ಹೋಗುತ್ತದೆ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಆ.31ರೊಗೆ ಪರಿಶೀಲನೆಯ ವರದಿ ನೀಡುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ.

ಸೆಪ್ಟಿಕ್ ಟ್ಯಾಂಕ್‌ನಂತೆ ಬೆಳ್ಳಂದೂರು ಕೆರೆ ಬಳಕೆ: ಆಯೋಗ ವರದಿಸೆಪ್ಟಿಕ್ ಟ್ಯಾಂಕ್‌ನಂತೆ ಬೆಳ್ಳಂದೂರು ಕೆರೆ ಬಳಕೆ: ಆಯೋಗ ವರದಿ

ವೃಷಭಾವತಿ ನದಿ ಮತ್ತೊಂದು ಬೆಳ್ಳಂದೂರು ಆಗುವುದರಲ್ಲಿ ಸಂಶಯವಿಲ್ಲ

ವೃಷಭಾವತಿ ನದಿ ಮತ್ತೊಂದು ಬೆಳ್ಳಂದೂರು ಆಗುವುದರಲ್ಲಿ ಸಂಶಯವಿಲ್ಲ

ವಿವಿಧ ಕಾರ್ಖಾನೆಗಳಿಂದ ಬರುತ್ತಿರುವ ಕೊಳಚೆ, ಮಲಿನ ನೀರಿನಿಂದಾಗಿ, ಭೈರಮಂಗಲ ಕೆರೆಯು ಕಲುಷಿತವಾಗುತ್ತಿರುವುದಷ್ಟೇ ಅಲ್ಲದೆ ನೊರೆ ಉಂಟಾಗುತ್ತಿದೆ, ಬೆಳ್ಳಂದೂರು ಕೆರೆಯಲ್ಲೂ ಇದೇ ಕಾರಣದಿಂದ ನೊರೆ ಉಂಟಾಗಿ, ಕೆಲವು ಕಡೆ ಬೆಂಕಿ ಕಾಣಿಸಿಕೊಂಡರೂ ಇದುವರೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ವೃಷಭಾವತಿ ನದಿಯಲ್ಲಿ ಹಸಿರು, ಕಪ್ಪು ಬಣ್ಣದ ನೀರು

ವೃಷಭಾವತಿ ನದಿಯಲ್ಲಿ ಹಸಿರು, ಕಪ್ಪು ಬಣ್ಣದ ನೀರು

ವೃಷಭಾವತಿ ಕಣಿವೆಯಲ್ಲಿ ನೀರಿನ ಗುಣಮಟ್ಟ ಪರೀಕ್ಷಿಸಿದಾಗ, ಕಾರ್ಖಾನೆಗಳ ಕೊಳಚೆ ನೀರು ಸೇರುತ್ತಿರುವುದು ತಿಳಿದುಬಂದಿದೆ, ಕಣಿವೆಯ ಕೆಲ ಭಾಗಗಳಲ್ಲಿರುವ ಹಸಿರು ಹಾಗೂ ಕಪ್ಪುಬಣ್ಣದ ನೀರು, ಕೊಳಚೆ ನೀರು ಸೇರುತ್ತಿರುವುದು ದೃಢಪಟ್ಟಿದೆ.

English summary
Central Pollution Control Board has given directions to Karnataka State Pollution Control Board on mandating Sewage Treatment Plant in more than 50 houses apartments and initiation of preserve Vrishabhavathi valley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X