ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶ್ 3 ತಿಂಗಳೊಳಗೆ ಮನೆ ಖಾಲಿ ಮಾಡ್ಬೇಕ್!

By Mahesh
|
Google Oneindia Kannada News

Recommended Video

ಯಶ್ ಮೂರು ತಿಂಗಳೊಳಗೆ ಮನೆ ಖಾಲಿ ಮಾಡಬೇಕು | ಏನಿದು ಕಥೆ? | Oneindia Kannada

ಬೆಂಗಳೂರು, ಏಪ್ರಿಲ್ 17: ನಟ ಯಶ್ ಅವರ ಬಾಡಿಗೆ ಮನೆ ವಿವಾದ 3 ವರ್ಷಗಳ ನಂತರ ಒಂದು ಹಂತಕ್ಕೆ ಬಂದಿದ್ದು, 3 ತಿಂಗಳೊಳಗೆ ಮನೆ ಖಾಲಿ ಮಾಡಬೇಕು ಎಂದು 42ನೇ ಸಿಟಿ ಸಿವಿಎಲ್ ನ್ಯಾಯಾಲಯವು ಆದೇಶಿಸಿದೆ.

ಯಶ್ ಅವರ ಕುಟುಂಬ ಬಾಡಿಗೆ ನೀಡಿಲ್ಲ. ಅಲ್ಲದೇ ಅವರು ಬೇರೆ ಮನೆಯಲ್ಲಿ ವಾಸವಾಗಿದ್ದರೂ, ಬೀಗವನ್ನು ಹಾಕಿ ಬಾಡಿಗೆ ಮನೆಯನ್ನು ತಮ್ಮ ಸುಪರ್ದಿಯಲ್ಲಿಯೇ ಇಟ್ಟುಕೊಂಡಿದ್ದಾರೆ ಎಂದು ಬನಶಂಕರಿ ಮೂರನೇ ಹಂತ ಕತ್ರಿಗುಪ್ಪೆಯಲ್ಲಿರುವ ಮನೆಯ ಮಾಲೀಕ ಮುನಿಪ್ರಸಾದ್ ಅವರು ಯಶ್ ಕುಟುಂಬದ ವಿರುದ್ಧ ಆರೋಪ ಹೊರೆಸಿ, ಕೋರ್ಟ್ ಮೆಟ್ಟಿಲೇರಿದ್ದರು.

Court orders Actor Yash to vacate the house and compensate house owner

ಮುನಿಪ್ರಸಾದ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಬಾಕಿ ಉಳಿಸಿಕೊಂಡಿರುವ ಬಾಡಿಗೆ ಹಣ 9.60 ಲಕ್ಷ ರೂ. ನೀಡುವಂತೆ ಪುಷ್ಪಾ ಅವರಿಗೆ ಸೂಚಿಸಲಾಗಿದೆ. ಅಲ್ಲದೇ, ಮನೆ ಅಡ್ವಾನ್ಸ್ 4 ಲಕ್ಷ ರೂ. ವಾಪಸ್ ಕೊಡುವಂತೆ ಕತ್ರಿಗುಪ್ಪೆ ನಿವಾಸಿ ಮನೆ ಮಾಲೀಕ ಮುನಿಪ್ರಸಾದ್ ಅವರಿಗೆ ಸೂಚಿಸಲಾಗಿದೆ.

ಏನಿದು ವಿವಾದ: ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್ ಕತ್ರಿಗುಪ್ಪೆಯಲ್ಲಿರುವ ಮನೆ ನಂಬರ್ 757 ರಲ್ಲಿ 2010ರಿಂದ ನಟ ಯಶ್ ಬಾಡಿಗೆಗೆ ವಾಸವಾಗಿದ್ದರು. ಅಂದು ಮಾಡಿಕೊಂಡಿದ್ದ ಬಾಡಿಗೆ ಕರಾರಿನ ಪ್ರಕಾರ 40 ಸಾವಿರ ರೂ.ಗೆ ನಟ ಯಶ್ ತಾಯಿ ಪುಷ್ಪಾ ಬಾಡಿಗೆ ಮನೆ ಪಡೆದುಕೊಂಡಿದ್ದರು. ಒಂದು ವರ್ಷದವರೆಗೆ ಬಾಡಿಗೆ ನೀಡಿದ್ದ ಯಶ್ ಕುಟುಂಬ, ನಂತರ ಬಾಡಿಗೆ ನೀಡಿಲ್ಲ ಎಂದು ಮುನಿಪ್ರಸಾದ್ ಆರೋಪಿಸಿದ್ದಾರೆ.

English summary
42nd City Civil court in Bengaluru today ordered actor Yash to vacate the rented house ad compensate house owner. Yash has three months time to vacate the house owned by Muniprasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X