ಕಾರ್ಪೊರೇಟರ್ ಮಂಜುಳಾ ಮೇಲೆ ಶಾಸಕ ಮುನಿರತ್ನ ಬೆಂಬಲಿಗರ ಹಲ್ಲೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 19: ನಗರದ ಲಗ್ಗೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಲಗ್ಗೆರೆ ಕಾರ್ಪೊರೇಟರ್ ಹಾಗೂ ಜೆಡಿಎಸ್ ನಾಯಕಿ ಮಂಜುಳಾ ನಾರಾಯಣ ಸ್ವಾಮಿ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ನಾಯಕ ಮುನಿರತ್ನ ಬೆಂಬಲಿಗರ ನಡುವೆ ದೊಡ್ಡ ಜಗಳವಾಗಿ ಕೈಕೈ ಮಿಲಾಯಿಸಿದ ಘಟನೆ ಶುಕ್ರವಾರ (ಮೇ 19) ಮಧ್ಯಾಹ್ನ ನಡೆದಿದೆ.

ಸಮಾರಂಭದಲ್ಲಿ ಭಾಗಿಯಾಗಲು ಬಂದಿದ್ದ ಮಂಜುಳಾ ಅವರು, ಸಿಎಂ ಹಾಗೂ ಮಾಧ್ಯಮಗಳ ಮುಂದೆ ಪ್ರಕರಣವೊಂದರ ಬಗ್ಗೆ ದೂರು ನೀಡಲು ಬಂದಿದ್ದರು. ಇದನ್ನು ಮುನಿರತ್ನ ಬೆಂಬಲಿಗರು ತಡೆದರು.

Corporator Manjula attacked by MLA Muniraju's supporters in Bengaluru

ಆಗ ಜಗಳವಾಗಿ, ಮುನಿರತ್ನ ಅವರ ಬೆಂಬಲಿಗರು ಹಾಗೂ ಮಂಜುಳಾ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಆಗ, ಮುನಿರತ್ನ ಬೆಂಬಲಿಗರೊಬ್ಬರು ಮಂಜುಳಾ ಅವರ ಸೀರೆ ಸೆಳೆಯಲೂ ಯತ್ನಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rajarajeshwari assembly constituency's MLA Muniraju's supporters attack on Laggere's corporator Manjula in a CM function on May 19, 2017.
Please Wait while comments are loading...